BREAKING NEWS
Search

ಕರೋನಾ ವೈರಸ್- ಕಾರವಾರದ ಯುವಕನಿಗೆ ದಿಗ್ಭಂಧನ!

2713

ಕಾರವಾರ :- ಕರೋನಾ ವೈರಸ್ ಆತಂಕ ಹಿನ್ನೆಲೆ ಯಲ್ಲಿ ಜಪಾನಿನ ಯುಕೋಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಯುಕನಿದ್ದ ಹಡಗನ್ನು ತಡೆ ಹಿಡಿದು ದಿಗ್ಭಂದನದಲ್ಲಿಟ್ಟ ಘಟನೆ ನಡೆದಿದ್ದು ತಮ್ಮ ಮಗನನ್ನು ರಕ್ಷಿಸಿ ಕರೆತರುವಂತೆ ಅವರ ಪೊಷಕರು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.

ಜಪಾನಿನ ಡೈಮಂಡ್ ಪ್ರಿನ್ಸಸ್ ಕ್ರೂಸ್ ಹಡಿಗಿನಲ್ಲಿ ಕಾರವಾರದ ಪದ್ಮನಾಭ ನಗರದ ಯುವಕ ಅಭಿಷೇಕ್ ಕಳೆದ ಆರು ತಿಂಗಳಿಂದ ಹಡಗಿನಲ್ಲಿ ಸ್ಟಿವರ್ಡ ಆಗಿ ಕಾರ್ಯ ನಿರ್ವಹಿಸುತಿದ್ದ.

ಹಡಗು ಪ್ರವಾಸಿಗರನ್ನು ಕರೆದುಕೊಂಡು ಸಿಂಗಾಪುರ ಹಾಗೂ ಚೈನಾಕ್ಕೆ ಪ್ರವಾಸ ಮುಗಿಸಿ ಮರಳಿ ಚೈನಾಕ್ಕೆ 2600 ಜನ ಪ್ರವಾಸಿಗರನ್ನು ಕರೆದೊಯ್ಯುತಿತ್ತು .

ಈ ವೇಳೆ ಮೊದಲು 10 ಜನ ನಂತರ 15 ಹೀಗೆ ಒಟ್ಟು ನಲವತ್ತು ಜನರಿಗೆ ಸೊಂಕು ಹರಡಿತ್ತು.

ಈ ಕಾರಣದಿಂದ ಹಡಗನ್ನು ಕಳೆದ ಆರು ದಿನದಿಂದ ಸಮುದ್ರದಲ್ಲೇ ತಡೆ ಹಿಡಿದಿದ್ದು ದಿಬ್ಭಂದನದಲ್ಲಿ ಇರಿಸಲಾಗಿದೆ.

ಇನ್ನು ಹಡಗಿನ ಹೋಟಲ್ ಒಂದರಲ್ಲಿ ಸ್ಟಿವರ್ಡ ಆಗಿ ಕಾರ್ಯನಿರ್ವಹಿಸುತ್ತಿರು ಅಭಿಷೇಕ್ ವೈರಸ್ ನ ಭಯದಿಂದ ಇತ್ತ ಮನೆಗೂ ಬಾರದೆ ಚೈನಾಕ್ಕೂ ಹೋಗದಂತಾಗಿದೆ.

ಮನೆಯವರಿಗೆ ಸಂಪರ್ಕಿಸಿ ತನ್ನನ್ನು ದೇಶಕ್ಕೆ ಕರೆಸಿಕೊಳ್ಳುವಂತೆ ಪೊಷಕರಿಗೆ ತಿಳಿಸಿದ್ದಾನೆ.ಈ ಹಿನ್ನಲೆಯಲ್ಲಿ ಪೊಷಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಇನ್ನೂ ಸೋಂಕು ತಗಲದ ತಮ್ಮ ಮಗನನ್ನು ರಕ್ಷಿಸುವಂತೆ ಹಾಗೂ ಮರಳಿ ಭಾರತಕ್ಕೆ ಕರೆತರುವಂತೆ ಮನವಿ ಮಾಡಿದ್ದಾರೆ.

ಮಗನನ್ನು ಭಾರತಕ್ಕೆ ಕರೆಸಿ-ತಂದೆ ತಾಯಿಗಳ ಅಳಲು
ತಮ್ಮ ಮಗನಿಗೆ ಯಾವುದೇ ಸೊಂಕು ಇಲ್ಲ. ಹಡಗಿನಲ್ಲಿ ಇರುವವರಿಗೆ ಸೊಂಕು ಇದ್ದು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತಿದೆ.
ಹಡಗನ್ನು ದಿಬ್ಭಂಧನದಲ್ಲಿ ಇಟ್ಟಿರಿವುದರಿಂದ ಅವನಿಗೂ ಸೊಂಕು ಹರಡುವ ಭೀತಿ ಇದೆ ಹೀಗಾಗಿ ಆತನನ್ನು ಭಾರತಕ್ಕೆ ಕರತರಬೇಕೆಂದು ಜೊಲ್ಲಾಧಿಕಾರಿಗಳಿಗೆ ಪೊಷಕರು ಮನವಿ ಮಾಡಿದ್ದಾರೆ.
ಸದ್ಯ ಮಾಹಿತಿ ಪ್ರಕಾರ ಹಡಗಿನಲ್ಲಿ ಸೊಂಕು ಹಬ್ಬುತಿದ್ದು 50ಜನರನ್ನು ಸ್ಥಳಾಂತರಿಸಲಾಗಿದ್ದು ಸೊಂಕು ಹರಡುವ ಕಾರಣ ಹಡಗನ್ನು ದಿಗ್ಭಂಧನದಲ್ಲಿ ಇರಿಸಲಾಗಿದೆ.

ಆದರೇ ಅಭಿಷೇಕ್ ಹಲವು ಭಾರಿ ತಂದೆಗೆ ಕಾಲ್ ಮಾಡಿ ಅಲ್ಲಿನ ತೊಂದರೆ ಬಗ್ಗೆ ತಿಳಿಸಿದ್ದು ತನಗೂ ಹೆಚ್ಚು ದಿನ ಇದ್ದರೆ ಸೊಂಕು ತಗಲುವ ಆತಂಕ ವ್ಯಕ್ತಪಡಿಸಿದ್ದಾನೆ.
ಹೀಗಾಗಿ ತಕ್ಷಣ ತಮ್ಮ ಮಗನನ್ನು ಭಾರತಕ್ಕೆ ಕರೆಯಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Leave a Reply

Your email address will not be published. Required fields are marked *