
ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ಹೆಚ್ಚಾಗಿದ್ದು ಇಂದು 36 ವರ್ಷದ ದುಬೈ ನಿಂದ ಭಟ್ಕಳಕ್ಕೆ ಬಂದು 14 ದಿನ ಹೋಮ್ ಕೊರಂಟೈನ್ ಮುಗಿಸಿದ್ದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದಿರುವುದು ದೃಡಪಟ್ಟಿದ್ದು ಜಿಲ್ಲೆಯಲ್ಲಿ 11 ಜನ ಕ್ಕೆ ಕೊರೋನಾ ಸೊಂಕು ದೃಡಪಟ್ಟಂತಾಗಿದೆ.
ಈತನ್ಯಾರು?



ಈ ಹಿಂದೆ ಕೊರೋನಾ ಪಾಸಿಟಿವ್ ದೃಡಪಟ್ಟಿದ್ದ p-176 ನೇ ಗರ್ಭಿಣಿ ಮಹಿಳೆಯ ಗಂಡನೇ ಇಂದು ಪಾಸಿಟಿವ್ ಬಂದ ವ್ಯಕ್ತಿಯಾಗಿದ್ದಾನೆ.
ದುಬೈ ನಿಂದ 17 ನೇ ತಾರೀಕಿನಂದು ಬಾಂಬೆಗೆ ಬಂದು ಮುಂಬೈ ನಿಂದ ಮತ್ಸ್ಯಗಂಧ ರೈಲಿನ ಮೂಲಕ ಮಾ.21ಕ್ಕೆ ಭಟ್ಕಳ ರೈಲ್ವೆ ನಿಲ್ದಾಣಕ್ಕೆ ಬಂದಿಳಿದು ಅಲ್ಲಿಂದ ಸಂಬಂಧಿ ಸ್ಕೂಟರ್ ನಲ್ಲಿ ಮನೆಗೆ ತೆರಳಿದ್ದ ಈತ ತನ್ನ ಇಬ್ಬರು ಚಿಕ್ಕ ಮಕ್ಕಳು, ಪತ್ನಿ ,ತಾಯಿ,ಸಂಬಂಧಿ ಜೊತೆ ಸಂಪರ್ಕ ಬೆಳಸಿದ್ದ.
14 ದಿನ ಕೊರಂಟೈನ್ ಮುಗಿಸಿದ್ದ ಈತ ನಗರದಲ್ಲಿ ಓಡಾಡುತಿದ್ದಾಗ ಜನರ ಈತನ ಕೈಮೇಲಿನ ಸೀಲ್ ನೋಡಿ ದೂರು ನೀಡಿದ್ದರು. ಇದರ ಆಧಾರದಲ್ಲಿ ಈತನನ್ನು ಬಂಧಿಸಿ ಕೊರಂಟೈನ್ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಈತನ ಗರ್ಭಿಣಿ ಪತ್ನಿಗೆ ಸೊಂಕು ಪತ್ತೆಯಾಗಿತ್ತು.
ನಂತರ ಈತನನ್ನು ಹಾಗೂ ಈತನ ಇಬ್ಬರು ಮಕ್ಕಳು ,ಓರ್ವ ತಾಯಿ,ಸಂಬಂಧಿಯನ್ನು ಕೊರಂಟೈನ್ ಮಾಡಲಾಗಿದ್ದು, ಈತನ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು ಇಂದು 36 ವರ್ಷದ ಈತನಿಗೆ ಕೊರೋನಾ ಫಾಸಿಟಿವ್ ದೃಡಪಟ್ಟಿದೆ.