ಉತ್ತರ ಕನ್ನಡ ಜಿಲ್ಲೆಯಲ್ಲಿ 20 ಕರೋನಾ ಸೊಂಕಿನಿಂದ ಗುಣಮುಖರಾದವರು ಇಂದು ಬಿಡುಗಡೆ

2661

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ 20 ಜನ ಕರೋನಾ ಸೊಂಕಿನಿಂದ ಗುಣಮುಖರಾದವರನ್ನು ಬಿಡುಗಡೆ ಮಾಡಲಾಗುತ್ತಿದೆ.ಇಂದು ಕಾರವಾರ ವೈದ್ಯಕೀಯ ಕಾಲೇಜಿನ ಕೋವಿಡ್ ಚಿಕಿತ್ಸಾ ವಾರ್ಡ ನಿಂದ ಬಿಡುಗಡೆಯಾಗಲಿದ್ದಾರೆ.

ಮಾರ್ಚ 22 ರಿಂದ ಮೇ.8 ರಂದು ಸೊಂಕಿತರಾಗಿದ್ದ 52 ಜನರು ಕಾರವಾರದ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತಿದ್ದರು.
ಇದರಲ್ಲಿ ಗರ್ಭಿಣಿ ಮಹಿಳೆ ಸೇರಿ ಏಳು ತಿಂಗಳ ಮಗುವನ್ನೂಳಗೊಂಡು 60 ವರ್ಷ ದಾಟಿದ ನಾಲ್ಕು ಜನ ಸೊಂಕಿತರು ಚಿಕಿತ್ಸೆ ಪಡೆಯುತಿದ್ದಾರೆ.

ದುಬೈ ನಿಂದ ಹಾಗೂ ಮಂಗಳೂರಿನ ಫ್ಪಸ್ಟ್ ನ್ಯೂರೋ ಆಸ್ಪತ್ರೆ ಸಂಪರ್ಕದಿಂದ ಸೊಂಕಿತರಾಗಿದ್ದ
20 ಜನರು ರೋಗಿಗಳಲ್ಲಿ ಎರಡು ಬಾರಿ ಗಂಟಲು ಗ್ರಂಥಿ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದ ಸೊಂಕಿತ 20 ಜನ ಇಂದು ಬಿಡುಗಡೆ ಹೊಂದಲಿದ್ದಾರೆ.

ಮೇ 8ರಂದು ಪಿ-659 ರಿಂದ ಸೊಂಕಿತನಾಗಿದ್ದ ಪಿ- 746 ರ 83 ವರ್ಷದ ವೃದ್ಧ ಕೂಡ ಇಂದು ಬಿಡುಗಡೆ ಹೊಂದಲಿದ್ದು ಸೊಂಕಿತರಲ್ಲಿ ಅತೀ ಹೆಚ್ಚು ವಯಸ್ಸಿನ ಸೊಂಕಿತರಾಗಿದ್ದರು.

ಇಂದು ಮಧ್ಯಾನ ಬಿಡುಗಡೆಯಾಗಲಿರುವ ಭಟ್ಕಳ ಮೂಲದವರಾಗಿದ್ದು ಜಿಲ್ಲೆಯಲ್ಲಿ ಗುಣಮುಖರಾಗಿ ಬಿಡುಗಡೆ ಆದವರಲ್ಲಿ 12 ರಿಂದ 32 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಈ ವರೆಗೆ 64 ಜನ ಸೊಂಕಿತ ವ್ಯಕ್ತಿಗಳಲ್ಲಿ 12 ಜನ ಗುಣಮುಖರಾಗಿ ಬಿಡುಗಡೆ ಆಗಿದ್ದು ಈಗ ಜಿಲ್ಲೆಯಲ್ಲಿ ಸೊಂಕಿನಿಂದ ಗುಣಮುಖರಾದವರ ಸಂಖ್ಯೆ ಏರಿಕೆಯಾಗುತ್ತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ