ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರು ಗುಣಮುಖ-ನಾಲ್ಕು ಜನ ಇಂದು ಆಸ್ಪತ್ರೆಯಿಂದ ಬಿಡುಗಡೆ

1135

ಕಾರವಾರ:-ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಪತಂಜಲಿ ನೌಕಾನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ವೈರಸ್ ಸೋಂಕಿತ ನಾಲ್ವರು ಗುಣಮುಖರಾಗಿದ್ದು ಇಂದು ಅವರನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಭಟ್ಕಳ ಮೂಲದ ಎಂಟು ಜನರಲ್ಲಿ ಕೊರೋನಾ ಸೋಂಕು ದೃಢ ಪಟ್ಟ ತಕ್ಷಣ ಜಿಲ್ಲಾಡಳಿತ ಅವರನ್ನ ಭಟ್ಕಳ ತಾಲೂಕು ಆಸ್ಪತ್ರೆಯಿಂದ ಕಾರವಾರ ತಾಲೂಕಿನ ಕದಂಬ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ವ್ಯವಸ್ಥೆ ಮಾಡಲಾಗಿತ್ತು.

ಎಂಟು ಜನ ಸೋಂಕಿತರಲ್ಲಿ ಈಗಾಗಲೇ ಚಿಕಿತ್ಸೆ ಪಡೆದು ಇಬ್ಬರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು‌. ಇಂದು ಮತ್ತೆ ನಾಲ್ವರು ಗುಣಮುಖರಾಗಿ ಡಿಸ್ಚಾರ್ಜ್ ಆಗಲಿದ್ದಾರೆ.‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಳಿದ ಇಬ್ಬರು ಸಹ ಒಂದೆರಡು ದಿನದಲ್ಲಿ ಗುಣಮುಖರಾಗಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಕಾರವಾರ ಪತಂಜಲಿ ಆಸ್ಪತ್ರೆ ಒಳನೋಟ.

ಇತ್ತಿಚ್ಚಿಗೆ ಕೊರೋನಾ ಪತ್ತೆಯಾದ ಗರ್ಭಿಣಿ ಮಹಿಳೆಗೆ ಉಡುಪಿಯಲ್ಲಿ ಚಿಕಿತ್ಸೆ ಕೊಡುತ್ತಿರುವುದರಿಂದ ಜಿಲ್ಲೆಯಲ್ಲಿರುವ ಬಹುತೇಖ ಕೊರೋನಾ ‌ಸೋಂಕಿತರು ಗುಣಮುಖರಾಗಿದ್ದಾರೆ.ಇದಲ್ಲದೇ ಈ ಮಹಿಳೆಯ ಆರೋಗ್ಯ ಸಹ ಸುದಾರಿಸಿದೆ ಎಂಬ ಮಾಹಿತಿ ಸಹ ಬಂದಿದ್ದು ಜಿಲ್ಲೆಯಲ್ಲಿ ಒಟ್ಟು ಒಂಬತ್ತು ಜನ ಕೊರೋನಾ ಸೊಂಕಿತರಲ್ಲಿ ಆರು ಜನರು ಚೇತರಿಸಿಕೊಂಡಿದ್ದು ಜಿಲ್ಲೆಯ ಜನರಲ್ಲಿ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.

ಕೊರೋನಾ ಗುಣಮುಖರಾದವರಿಗೆ ಪ್ರತ್ತೇಕ ಕೊರಂಟೈನ್ !

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು ಒಂಬತ್ತುಜನ ಕೊರೋನಾ ಸೊಂಕಿತರು ದಾಖಲಾಗಿದ್ದರು. ಇವರಲ್ಲಿ ಮೊದಲ ಹಂತದಲ್ಲಿ ಇಬ್ಬರು ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆ ಯಾಗಿ ಭಟ್ಕಳದ ಹೋಟಲ್ ಒಂದರಲ್ಲಿ 14 ದಿನಗಳ ವರೆಗೆ ಕೊರಂಟೈನ್ ಮಾಡಲಾಗುತ್ತಿದ್ದು ಪ್ರತಿ ದಿನ ಇವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.ಇನ್ನು ಇಂದು ಬಿಡುಗಡೆಯಾಗುವ ನಾಲ್ಕು ಜನರನ್ನು ಕೂಡ 14 ದಿನ ಕೊರಂಟೈನ್ ಮಾಡಲಾಗುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಕೊವಿಡ್ -೧೯ ಸ್ಟೇಟಸ್ಸ್ ಹೀಗಿದೆ.:-

ಒಟ್ಟು ಪಾಸಿಟಿವ್:9
ಯಾಕ್ಟಿವ್ ಕೇಸ್:- 7
ಹೊಸ ಕೇಸು:0
ಹೋಂ ಕ್ವಾರಂಟೈನ್: 2526
ಐಸೋಲೇಷನ್/ನಿಗಾ ಇಟ್ಟಿರುವ ಸಂಖ್ಯೆ:- 137
ತಬ್ಲಿಘಿ ಹೋಂ ಕ್ವಾರಂಟೈನ್:8
ಡಿಸ್ಚಾರ್ಜ್: 2
ಡೆತ್:0
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ