
ಕಾರವಾರ:- ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಬರೋರಿಗೆ ಹಾಗೂ ಜಿಲ್ಲೆಯಿಂದ ಹೊರಕ್ಕೆ ಹೋಗಿ ಬರೋರಿಗೆ ಕ್ವಾರಂಟೈನ್ ಮಾಡಲು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯು ರೆಡ್ ಅಲರ್ಟ ಏರಿಯಾದಲ್ಲಿ ಬರುತ್ತದೆ. ಈ ಕಾರಣದಿಂದ ಜಿಲ್ಲೆಗೆ ಬಂದವರು ಹಾಗೂ ಜಿಲ್ಲೆಯಿಂದ ಹೋಗಿ ಬಂದವರಿಗೆ ಕಡ್ಡಾಯವಾಗಿ ಫೀವರ್ ಸೆಂಟರ್ನಲ್ಲಿ ಚೆಕ್ಅಪ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಫೀವರ್ ಸೆಂಟರ್ನಲ್ಲಿ ಚೆಕ್ ಮಾಡಿದ ಬಳಿಕ ಕೈಗೆ ಸೀಲ್ ಹಾಕಿ ಕಡ್ಡಾಯ 14 ದಿನಗಳ ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತದೆ.
ಹೋಂ ಕ್ವಾರಂಟೈನ್ಗೆ ಒಪ್ಪದವರಿಗೆ ಸರಕಾರಿ ಕ್ವಾರಂಟೈನ್ನಲ್ಲಿ ವ್ಯವಸ್ಥೆ ಮಾಡಲಾಗಿದೆ.
ಈ ಹಿನ್ನಲೆಯಲ್ಲಿ ಜಿಲ್ಲಾ ಗಡಿಭಾಗಗಳಲ್ಲಿ ಹೊರ ರಾಜ್ಯ, ಜಿಲ್ಲೆಗಳಿಂದ ಆಗಮಿಸುವವರ ಮಾಹಿತಿ ಸಂಗ್ರಹಿಸಿ ತಹಶೀಲ್ದಾರ್ಗೆ ನೀಡಲು ಸೂಚನೆ ನೀಡಿ ಉತ್ತರಕನ್ನಡ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.