ಕಾರವಾರದ ಕರೋನಾ ವಾರ್ಡ ನಿಂದ ಸೋಂಕಿತ ಗಂಧದ ಕಳ್ಳ ಪರಾರಿ!

593

ಕರೋನಾ ಸೋಂಕಿತ ಗಂಧದ ಕಳ್ಳ ಕೋವಿಡ್ ವಾರ್ಡ ನಿಂದ ಪರಾರಿಯಾದ ಘಟನೆ
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕ್ರಿಮ್ಸ್ ಕೋಮಿಡ್ ವಾರ್ಡ ನಲ್ಲಿ ಇಂದು ರಾತ್ರಿ ನಡೆದಿದೆ.

ಮುಂಡಗೋಡಿನ ಸೈಯದ್ ಇಸ್ರಾಲ್ ಕರೀಮ್ ಕಾನ್ ಕರೋನಾ ವಾರ್ಡ ನಿಂದ ತಪ್ಪಿಸಿಕೊಂಡ ಕರೋನಾ ಸೋಂಕಿತ ಗಂಧದ ಕಳ್ಳನಾಗಿದ್ದು
ಎರಡು ದಿನದ ಹಿಂದೆ ಮುಂಡಗೋಡಿನಲ್ಲಿ ಗಂಧ ಕಳ್ಳತನ ಹಿನ್ನಲೆಯಲ್ಲಿ ಈತನನ್ನು ಬಂಧಿಸಲಾಗಿತ್ತು.

ಬಂಧನದ ನಂತರ ಕರೋನಾ ದೃಡಪಟ್ಟ ಹಿನ್ನಲೆಯಲ್ಲಿ ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೋವಿಡ್ ವಾರ್ಡ ಗೆ ದಾಖಲು ಮಾಡಲಾಗಿತ್ತು.

ಆದರೆ ಇಂದು ಸಂಜೆ ವಾರ್ಡ ನಿಂದ ಪರಾರಿಯಾಗಿದ್ದು ಈತನಿಗಾಗಿ ಶೋಧ ನಡೆಸಲಾಗುತಿದ್ದು ಕಾರವಾರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ