BREAKING NEWS
Search

ದಾಂಡೇಲಿ- ಕೆ.ಎಸ್.ಆರ್.ಟಿ.ಸಿ ಡಿಪೊಗೆ ಹೊಕ್ಕ ಮೊಸಳೆ!ಆತಂಕಪಟ್ಟು ಓಡಿದ ಜನ! ಮುಂದಾಗಿದ್ದೇನು?

1978

ಕಾರವಾರ :-ಕಾಳಿ ನದಿಯಿಂದ ನಾಡಿನೆಡೆಗೆ ಬಂದು ಆತಂಕ ಸೃಷ್ಟಿಸಿದ್ದ ಬೃಹತ್ ಮೊಸಳೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಯುವಕರು ಹಿಡಿದು ಮರಳಿ ನದಿಗೆ ಬಿಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ದೇಶಪಾಂಡೆ ನಗರದ ಕೆಎಸ್‌ಆರ್ ಟಿಸಿ ಡಿಪೋ ಬಳಿ ಇಂದು ನಡೆದಿದೆ. ಪಟ್ಟಣದ ಜನವಸತಿ ಪ್ರದೇಶದತ್ತ ಆಗಮಿಸಿದ್ದ ಬೃಹತ್ ಮೊಸಳೆಯನ್ನು ಕಂಡ ಸ್ಥಳೀಯರು ಆತಂಕಗೊಂಡಿದ್ದರು.

ತಕ್ಷಣ ವಿಷಯವನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದರು. ಬಳಿಕ ಸ್ಥಳೀಯ ಯುವಕರು ಸೇರಿ ಹಗ್ಗದ ಸಹಾಯದಿಂದ ಮೊಸಳೆಯ ಬಾಯಿ, ದೇಹವನ್ನು ಬಿಗಿದು ಕಟ್ಟಿ ಹಾಕಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ವಾಹನದ ಮೂಲಕ ಪುನಃ ಕಾಳಿ ನದಿಗೆ ಕೊಂಡೊಯ್ದು ಮೊಸಳೆಯನ್ನು ಬಿಟ್ಟಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!