BREAKING NEWS
Search

ಧಾರವಾಡ-ದಾಂಡೇಲಿ ಭಾಗಕ್ಕೆ ಮೊದಲ ಪ್ಯಾಸೆಂಜರ್ ರೈಲು ಲೋಕಾರ್ಪಣೆ

914

ನೂರು ವರ್ಷದ ಇತಿಹಾಸವಿದ್ದ ಎರಡು ದಶಕಗಳಿಂದ ನಿಂತು ಹೋಗಿದ್ದ ದಾಂಡೇಲಿ-ಅಳ್ನಾವರ- ಧಾರವಾಡ ಪ್ರಯಾಣಿಕರ ರೈಲು ಇಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿಯವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ್ದಾರೆ.

ದಾಂಡೇಲಿಯ ರೈಲ್ವೆ ನಿಲ್ದಾಣ ದಲ್ಲಿ ನಡೆದ ನೈರುತ್ಯ ರೈಲ್ವೆ ಪ್ಯಾಸೆಂಜರ್ ರೈಲು ಉದ್ಘಾಟನೆ ನೆರವೇರಿತು .
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆರ್.ವಿ ದೇಶಪಾಂಡೆ, ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕಾ,ಸಂಸದೀಯ ಸಚಿವ ಪ್ರಹಲ್ಲಾದ್ ಜೋಷಿ,ಮುಂತಾದ ಗಣ್ಯರು ಉಪಸ್ಥಿತರಿದ್ದರು.

ವಿಶೇಷ ವೇನು?

ಅಂಬೇವಾಡಿ-ಅಳ್ನಾವರ ರೈಲ್ವೆ ಮಾರ್ಗವು 100 ವರ್ಷ ಹಳೆಯದಾದ ಚರಿತ್ರೆ ಹೊಂದಿದೆ.1918ರಲ್ಲಿ ಮದ್ರಾಸ್ ಮತ್ತು ಸರ್ದನ್ ಮರಾಠ ರೈಲ್ವೆಯಿಂದ ಹಾಕಲಾಗಿದ್ದ ಅರಣ್ಯ ಉತ್ಪನ್ನಗಳನ್ನು ವಿಶೇಷವಾಗಿ ಮೊದಲ ಮಹಾ ಯುದ್ಧದಲ್ಲಿ ಮರಮುಟ್ಟುಗಳನ್ನು ಸಾಗಿಸಲು ಬಳಕೆಯಾಗುತಿತ್ತು.ಈ ಮಾರ್ಗವು ಬೆಳಗಾವಿ-ಹುಬ್ಬಳ್ಳಿ ಮುಖ್ಯ ಮಾರ್ಗವನ್ನು ಸಂಪರ್ಕಿಸುತಿತ್ತು.
1994 ರಲ್ಲಿ ಈ ಮಾರ್ಗವನ್ನು ಮೀಟರ್ ಗೇಜ್ ನಿಂದ ಬ್ರಾಡ್ ಗೇಜ್ ಗೆ ಪರಿವರ್ತಿಸಿ ರೈಲ್ವೆ ಸೇವೆಯನ್ನು ನಿಲ್ಲಿಸಲಾಗಿತ್ತು.
1995 ರಲ್ಲಿ ಅಳ್ನಾವರ ದಿಂದ ಅಂಬೆವಾಡಿಗೆ ಏಕಮುಖ ಸಂಚಾರವನ್ನು ಪ್ರಾರಂಭಿಸಿತ್ತು.
ಇನ್ನು ದಾಂಡೇಲಿ ಭಾಗದ ಜನರು ಕೂಡ ದಾಂಡೇಲಿ ವರೆಗೆ ರೈಲು ಸಂಚಾರ ಪ್ರಾರಂಭಿಸಬೇಕು ಪ್ಯಾಸೆಂಜರ್ ರೈಲು ಬೇಕೆಂದು ಒಂದು ದಶಕದಿಂದ ಹೋರಾಡ ನಡೆಸಿದ್ದರು ‌. ಕುದ್ದು ಮಾಜಿ ಸಚಿವ ಆರ್ .ವಿ ದೇಶಪಾಂಡೆ ಸಹ ಈ ಕುರಿತು ಹಿಂದಿನ ರೈಲ್ವೆ ಸಚಿವರಾಗಿದ್ದ ಸದಾನಂದಗೌಡರ ಬಳಿ ತರಳಿ ದಾಂಡೇಲಿ ಭಾಗಕ್ಕೆ ಪ್ಯಾಸೆಂಜರ್ ರೈಲು ಬಿಡುವಂತೆ ಮನವಿ ಮಾಡಿದ್ದರು. ಈ ವೇಳೆ ಸದಾನಂದಗೌಡರು ಅನುಮತಿ ನೀಡಿದ್ದು ಕಳೆದ ಒಂದು ವರ್ಷದಲ್ಲಿ ಸಂವಹನ ಸಂಕೇತಗಳನ್ನು ಅಲವಡಿಸಿ ನೈರುತ್ಯ ರೈಲ್ವೆ ವಿಭಾಗವು ಇಂದು ಚಾಲನೆ ನೀಡಿದೆ.

ಈ ಭಾಗದಲ್ಲಿ ರೈಲು ಮಾರ್ಗ ಪ್ರಾರಂಭವಾಗಿದ್ದರಿಂದ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು ಅತೀ ಕಡಿಮೆ ದರದಲ್ಲಿ ಪ್ರವಾಸಿಗರು ದಾಂಡೇಲಿ ಭಾಗಕ್ಕೆ ಬರಬಹುದಾಗಿದೆ.

ಸಮಯ ಹೀಗಿದೆ

ಈ ರೈಲು ಸೋಮವಾರ ನ4 ರಿಂದ ಪ್ರತಿದಿನ 11.30 ಕ್ಕೆ ಧಾರವಾಡದಿಂದ ಹೊರಟು ಮಧ್ಯಾಹ್ನ 1.00 ಗಂಟೆಗೆ ದಾಂಡೇಲಿಗೆ ಬರಲಿದೆ. ಬಳಿಕ ಮಧ್ಯಾಹ್ನ 3 ಗಂಟೆಗೆ ದಾಂಡೇಲಿಯಿಂದ ಹೊರಟು ಮಧ್ಯಾಹ್ನ 4.40 ಕ್ಕೆ ಧಾರವಾಡಕ್ಕೆ ಬರಲಿದೆ. ಅಳ್ನಾವರ, ಕುಂಬಾರಗಣವಿ, ಮುಗದ, ಕ್ಯಾರಕೊಪ್ಪದಲ್ಲಿ ರೈಲು ನಿಲುಗಡೆ ಆಗಲಿದೆ.

  • ಗೋಲ್ಡನ್ ಚಾರಿಯೇಟ್ ರೈಲು ಡಿಸೆಂಬರ್ ಅಥವಾ ಜನವರಿಯಲ್ಲಿ ದಾಂಡೇಲಿ ಪ್ರವಾಸಿ ತಾಣಕ್ಕೆ ಪ್ರಾರಂಭ

ಐದು ತಾಸಿನಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿ ಪಾಸ್ಟ್ ರೈಲು ಅತೀ ಶೀಘ್ರದಲ್ಲಿ ಪ್ರಾರಂಭ

ದೇಶದ ಪ್ರಮುಖ ನಿಲ್ದಾಣಗಳಲ್ಲಿ 6000 ವೈಫೈ ಅಳವಡಿಕೆ ಮಾಡಲಾಗಿದ್ದು

ದೇಶದ ಎಲ್ಲಾ ರೈಲ್ವೆ ನಿಲ್ದಾಕ್ಯಾಮರಾ ಅಳವಡಿಕೆ ಪೂರ್ಣ ಗೊಳಸಲಾಗುವುದು

-ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ
Leave a Reply

Your email address will not be published. Required fields are marked *