ಅನಗತ್ಯ ಓಡಾಡುವವರಿಗೆ ಬಿತ್ತು ಲಾಠಿ ಏಟು -ಲೈಸೆನ್ಸ್ ರದ್ದು ಮಾಡಲು ಡಿಸಿ ಸೂಚನೆ.

887

ಕಾರವಾರ :- ಯಲ್ಲಾಪುರ ನಗರದ ವಿವಿಧ ಭಾಗದಲ್ಲಿ ಅನಗತ್ಯ ಓಡಾಡುತಿದ್ದವರಿಗೆ ಪೊಲೀಸರು ಲಾಠಿಯ ರುಚಿ ತೋರಿಸಿದ್ದಾರೆ.

ಅನಗತ್ಯ ಓಡಾಡಬೇಡಿ ಎಂದು ಮನವಿ ಮಾಡಿದರೂ ಜನ ಕೇಳದೆ ಓಡಾಡುತಿದ್ದು ಇದನ್ನು ಗಮನಿಸಿದ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ಯಲ್ಲಾಪುರದಲ್ಲಿ ಅನಗತ್ಯ ಓಡಾಡಿದವರಿಗೆ ಲಾಠಿ ಏಟು ವೀಡಿಯೋ ನೋಡಿ:-

ಡಿ.ಸಿ ಖಡಕ್ ಸೂಚನೆ:-

ಲಾಕ್ ಡೌನ್‌ ಇರುವ ವೇಳೆ ಜಿಲ್ಲೆಯಲ್ಲಿ ಅನಗತ್ಯವಾಗಿ ವಾಹನದಲ್ಲಿ ಓಡಾಡಿದ್ರೆ ಲೈಸನ್ಸ್ ಹಾಗೂ ವಾಹನದ ನೊಂದಣಿ ರದ್ದು ಮಾಡಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ವೈರಸ್ ತಡೆಯಲು ದೇಶಾದ್ಯಂತ ಲಾಕ್ ಡೌನ್ ಆಗಿದೆ. ಜನರು ಮನೆಯಲ್ಲಿ ಇರುವಂತೆ ತಿಳಿಸಲಾಗಿದೆ. ಆದರೂ ಕೆಲವರು ಅಗತ್ಯ ವಿಲ್ಲದೇ ವಾಹನದಲ್ಲಿ ತಿರುಗಾಡುತ್ತಿದ್ದಾರೆ.
ಅನಗತ್ಯವಾಗಿ ವಾಹನದಲ್ಲಿ ಹೊರಬಂದು ತಿರುಗಾಡುವವರು ಸಿಕ್ಕಿದರೆ ಅವರ ಲೈಸೆನ್ಸ್ ಹಾಗೂ ವಾಹನದ ನೊಂದಣಿಯನ್ನ‌ ರದ್ದು ಮಾಡುವ ಕಠಿಣ ಕ್ರಮಕ್ಕೆ ಮುಂದಾಗಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಏನು ಹೇಳಿದ್ದಾರೆ ಎಂಬುದರ ವೀಡಿಯೋ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ-

https://youtu.be/zJ1vxYVTQ4c
ಯಲ್ಲಾಪುರದಲ್ಲಿ ಲಾಠಿ ಚಾರ್ಜನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ