ಕೊರೋನಾ ಬೀತಿ-ಕಾರವಾರ ದಲ್ಲಿ ಇಬ್ಬರು ಡಾಕ್ಟರ್ ಎಸ್ಕೇಪ್!

1149

ಕಾರವಾರ :- ಕೊರೋನಾ ಸೊಂಕಿತರೋಗಿಗಳಿಗೆ ಚಿಕಿತ್ಸೆ ನೀಡಲು ತರಬೇತಿ ಗೊಂಡಿದ್ದ ಇಬ್ಬರು ವೈದ್ಯರು ಕೊರೋನಾಗೆ ಹೆದರಿ ಆಸ್ಪತ್ರೆಯಿಂದ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪತಂಜಲಿ ಆಸ್ಪತ್ರೆಯಲ್ಲಿ ನಡೆದಿದೆ. ಕಾರವಾರದ ನೌಕಾನೆಲೆಯಲ್ಲಿರುವ ಪತಂಜಲಿ ಆಸ್ಪತ್ರೆಗೆ ಕೊರೋನಾ ಸೊಂಕಿತ ಆರು ಜನ ರೋಗಿಗಳಿದ್ದು ಇವರಿಗೆ ಚಿಕಿತ್ಸೆ ಕೊಡಲು ತರಬೇತಿ ನೀಡಿ ಇಬ್ಬರು ವೈದ್ಯರನ್ನು ನಿಯೋಜನೆ ಮಾಡಲಾಗಿತ್ತು. ಕಾರ್ ಪಾರ್ಕ ಮಾಡಿ ಬರುವುದಾಗಿ ಹೇಳಿ ಹೋದ ಈ ವೈದರು ಮೊಬೈಲ್ ಸ್ವಿಚ್ ಆಫ್ ಮಾಡಿ ಪತಂಜಲಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ.
ಕರ್ತವ್ಯ ಲೋಪ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯ್ತಿ ಸಿ.ಇ.ಓ ಆರ್.ರೋಷನ್ ರಿಂದ ನೋಟೀಸ್ ನೀಡಿದ್ದು ಏಳು ದಿನದಲ್ಲಿ ಉತ್ತರ ನೀಡದಿದ್ದರೆ ಕರ್ತವ್ಯ ಲೋಪದಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.ಇನ್ನು ಖಾಸಗಿ ಆಸ್ಪತ್ರೆಯವರು ಸಹ ಕೊರೋನ ರೋಗಿಗಳನ್ನು ಹೊರತುಪಡಿಸಿ ಇತರ ಕಾಯಿಲೆ ರೋಗಿಗಳಿಗೆ ಚಿಕಿತ್ಸೆ ನೀಡುತಿಲ್ಲ . ಹೀಗೆ ಮಾಡಿದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ವಿನ ತೊಂದರೆಯಾಗುತ್ತದೆ‌ ,ಇಂತವರ ವಿರುದ್ಧ ಸಹ ಕ್ರಮ ಕೈಗೊಳ್ಳಲಾಗುವುದು ಎಂದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ