ಉತ್ತರ ಕನ್ನಡದಲ್ಲಿ ಮಾಸ್ಕ ಹಾಕದವರಿಗೆ ಬಿತ್ತು ಬರೋಬ್ಬರಿ ದಂಡ!ಈವರೆಗೆ ಜಿಲ್ಲೆಯಲ್ಲಿ ದಂಡ ಹಾಕಿದ್ದು ಎಷ್ಟು ಗೊತ್ತಾ?

1030

ಕಾರವಾರ: ಲಾಕ್ ಡೌನ್ ಸಡಿಲಿಕೆ ನಂತರ ಜನರು ಕರೋನಾದ ಬಗ್ಗೆ ಇದ್ದ ಭಯ ಆತಂಕ ದೂರವಾಗಿದೆ. ಆದರೇ ಸೋಂಕು ಬರದಂತೆ ಜಾಗೃತರಾಗಿರಬೇಕು ಎಂಬ ಮನಸ್ತಿತಿಯಿಂದ ಎಷ್ಟೋ ಜನರು ಹೊರಬಂದಿದ್ದು ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ ಧರಿಸಬೇಕು ಎಂಬ ನಿಯಮವಿದ್ದರೂ ಈ ಕಾನುನನ್ನು ಗಾಳಿಗೆ ತೂರಿ ಬೇಕಾ ಬಿಟ್ಟಿ ಸಂಚರಿಸುತಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿದ್ದರೂ ಈ ನಿಯಮಗಳ ಉಲ್ಲಂಘನೆಯಾಗಿದ್ದು ಕಂಡು ಬಂದರೆ ಅಂಥವರ ಮೇಲೆ ಕಟ್ಟು ನಿಟ್ಟಿನ ಕ್ರಮಕ್ಕೆ ಜಿಲ್ಲಾಧಿಕಾರಿ ಹರೀಶಕುಮಾರ್ ಕೆ ಆದೇಶ ನೀಡಿದ್ದರು.

ಭಾರತ ಅನ್‍ಲಾಕ್ 4.00 ಮಾರ್ಗಸೂಚಿಯಲ್ಲಿ ಅನೇಕ ಚಟುವಟಿಕೆಗೆ ವಿನಾಯಿತಿ ನೀಡಿದೆ. ಇದರಿಂದ ಸಾರ್ವಜನಿಕರ ಓಡಾಟ ಹೆಚ್ಚಾಗಿದ್ದು, ಎಲ್ಲಡೆ ನಿಯಮಗಳ ಪಾಲನೆಯಾಗುತ್ತಿಲ್ಲ. ಇದರಿಂದ ಕೊರೊನಾ ಸೋಂಕು ಅಧಿಕವಾಗಿ ಏರುತ್ತಿದೆ. ಈರೋಗದಿಂದ ದೂರವಿದ್ದು ಸುರಕ್ಷತವಾಗಿರಲು ನಿಯಮ ಪಾಲನೆಯಾಗಬೇಕಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅತೀ ಅವಶ್ಯ.

ಕುಮಟಾ ಪುರಸಭೆ ಜಾಗೃತಿ ಪ್ರಕಟಣೆ:-


ಈ ಕಾರಣ ದಿಂದ ಸಾರ್ವಜನಿಕ ಸ್ಥಳ, ಸಭೆ- ಸಮಾರಂಭದಲ್ಲಿ ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ಅಥವಾ ನಿಯಮದ ಉಲ್ಲಂಘನೆ ಪುರಾವರ್ತನೆಯಾದಲ್ಲಿ ಅಂಥವರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆ 1897, ವಿಪತ್ತು ನಿರ್ವಹಣಾ ಕಾಯ್ದೆ 2005, ಭಾರತೀಯ ದಂಡ ಸಂಹಿತೆ 1860 ಮತ್ತು ದಂಡ ಪ್ರಕ್ರಿಯಾ ಸಂಹಿತೆ ವಿವಿಧ ನಿಬಂಧನೆ ಅಡಿಯಲ್ಲಿ ಕ್ರಮ ಕೈಕೊಳ್ಳಲು ಜಿಲ್ಲೆಯ ಎಲ್ಲಾ ತಹಶೀಲ್ದಾರ್, ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಸೂಚನೆ ನೀಡಿದ್ದು ಈಗ ಕಠಿಣ ಕ್ರಮ ಜರುಗಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಬಿದ್ದ ದಂಡವೆಷ್ಟು ಗೊತ್ತಾ?

ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳೊಂದರಲ್ಲೇ 2254 ಕೇಸ್ ದಾಖಲಾಗಿದ್ದು ಒಟ್ಟೂ ರೂ.228920 ಸಂಗ್ರಹವಾಗಿದೆ.

ಮತ್ತು ಲಾಕ್ಡೌನ್ ಅವಧಿ ಏಪ್ರಿಲ್ ತಿಂಗಳಿನಿಂದ ಸೆ.24 ರವರೆಗೆ ರೂ.489610 ಮೊತ್ತ ಸಂಗ್ರಹವಾಗಿದ್ದು ಕಾರವಾರ ದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ 41 ಪ್ರಕರಣಗಳಿಂದ 4100 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 74600 ರೂ ಸಂಗ್ರಹವಾಗಿದೆ. ಶಿರಸಿಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ 152 ಪ್ರಕರಣಗಳಿಂದ 15000 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 27600 ರೂ ಸಂಗ್ರಹವಾಗಿದೆ.

ದಾಂಡೇಲಿಯಲ್ಲಿ 318 ಪ್ರಕರಣಗಳಿಂದ 32320 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 58420 ರೂ ಸಂಗ್ರಹವಾಗಿದೆ. ಭಟ್ಕಳದಲ್ಲಿ 285 ಪ್ರಕರಣಗಳಿಂದ 28400 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 39600 ರೂ ಸಂಗ್ರಹವಾಗಿದೆ. ಕುಮಟಾ ದಲ್ಲಿ 71 ಪ್ರಕರಣಗಳಿಂದ 7100 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 11300 ರೂ ಸಂಗ್ರಹವಾಗಿದೆ. ಅಂಕೋಲಾ ದಲ್ಲಿ 193 ಪ್ರಕರಣಗಳಿಂದ 26300 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 47700 ರೂ ಸಂಗ್ರಹವಾಗಿದೆ. ಹಳಿಯಾಳ ದಲ್ಲಿ 106 ಪ್ರಕರಣಗಳಿಂದ 9440 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 57630 ರೂ ಸಂಗ್ರಹವಾಗಿದೆ.

ಹೊನ್ನಾವರ ದಲ್ಲಿ 410 ಪ್ರಕರಣಗಳಿಂದ 32700 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 35100 ರೂ ಸಂಗ್ರಹವಾಗಿದೆ.

ಸಿದ್ದಾಪುರದಲ್ಲಿ 128 ಪ್ರಕರಣಗಳಿಂದ 12960 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 31260 ರೂ ಸಂಗ್ರಹವಾಗಿದೆ.

ಯಲ್ಲಾಪುರದಲ್ಲಿ 57 ಪ್ರಕರಣಗಳಿಂದ 10300 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 27700 ರೂ ಸಂಗ್ರಹವಾಗಿದೆ. ಮುಂಡಗೋಡಿನಲ್ಲಿ 328 ಪ್ರಕರಣಗಳಿಂದ 33300 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 44400 ರೂ ಸಂಗ್ರಹವಾಗಿದೆ. ಜೋಯಿಡಾ ದಲ್ಲಿ 165 ಪ್ರಕರಣಗಳಿಂದ 17000 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 34300 ರೂ ಸಂಗ್ರಹವಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ