ಕುಮಟಾ:ಕುಡಿದ ಮತ್ತಿನಲ್ಲಿ ಪೊಲೀಸರ ಮೇಲೆ ಹಲ್ಲೆ-ಮೂರು ಜನರ ಬಂಧನ!

2520

ಕಾರವಾರ :- ಹೆದ್ದಾರಿ ಪಕ್ಕದಲ್ಲಿ ಮದ್ಯ ಸೇವನೆ ಮಾಡುತಿದ್ದ ನಾಲ್ವರು ಯುವಕರಿಗೆ ಮದ್ಯ ಸೇವನೆ ಮಾಡದಂತೆ ತಿಳಿಹೇಳಿದ ಹೈವೇ ಪೆಟ್ರೋಲಿಂಗ್ ಸಿಬ್ಬಂದಿಗೆ ಕುಡಿದ ಮತ್ತಲ್ಲಿ ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದ ಎತ್ತಿನಬೈಲ್ ಸಮೀಪ‌ ನಡೆದಿದೆ.

ಹೈವೇ ಪೆಟ್ರೋಲಿಂಗ್ ನಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಸಿವಿಲ್ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ನಾಗೇಶ ನಾಯ್ಕ, ವಾಹನ ಚಾಲಕ ಕಮಲಾಕರ ನಾಯ್ಕ ಎಂಬುವವರೇ ಹಲ್ಲೆಗೊಳಗಾದವರಾಗಿದ್ದು ,ಸಚಿನ್ ಹರಿಕಾಂತ, ವಿಶಾಲ್ ಪುರುಷೋತ್ತ,‌ ಮಂಜುನಾಥ ಪಟಗಾರ,‌ ಜಗನ್ನಾಥ ಎಂಬುವವರೇ ಹಲ್ಲೆ ಮಾಡಿದ ಆರೋಪಿಗಳಾಗಿದ್ದಾರೆ.

ಘಟನೆ ನಂತರ ಮೂರು ಜನರನ್ನು ಕುಮಟಾ ಪೊಲೀಸರು ಬಂಧನ ಮಾಡಿದ್ದು ಇನ್ನೋರ್ವ ಆರೋಪಿ ಜಗನ್ನಾಥ ಹರಿಕಾಂತ ನಾಪತ್ತೆಯಾಗಿದ್ದು ಈತನ ಬಂಧನ ಮಾಡಲು ಹುಡುಕಾಟ ನಡೆಸಲಾಗುತ್ತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ