ಗೋವಾ ಗಡಿ ಪ್ರವೇಶ ನಿರ್ಬಂಧ- ಕನ್ನಡ ಸಂಘಟನೆಯಿಂದ ಪ್ರತಿಭಟನೆ

610

ಕಾರವಾರ: ಗೋವಾ ರಾಜ್ಯಕ್ಕೆ ಪ್ರವೇಶಿಸಲು ಕರ್ನಾಟಕದ ಜನರಿಗೆ ಎರಡುಸಾವಿರ ಹಣ ವಸೂಲಿ ಮಾಡುತ್ತಿರುವ ಗೋವಾ ಸರ್ಕಾರದ ಮಾರ್ಗಸೂಚಿ ವಿರೋಧಿಸಿ ಉತ್ತರ ಕನ್ನಡ ಜಿಲ್ಲೆ ಹಾಗೂ ಗೋವಾ ಗಡಿಯ ಮಾಜಾಳಿಯಲ್ಲಿ ವಿವಿಧ ಕನ್ನಡ ಸಂಘಟನೆಗಳಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.

ವಾಟಾಳ್ ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ, ಟ್ಯಾಕ್ಸಿ ಯೂನಿಯನ್‌ನಿಂದ ಪ್ರತಿಭಟನೆ ನಡೆಸಿತು. ಕರ್ನಾಟಕ- ಗೋವಾ ಗಡಿಯಲ್ಲಿ ಪ್ರತಿಭಟನಾ ನಿರತ ಕನ್ನಡ ಸಂಘಟನೆಯ ಕಾರ್ಯಕರ್ತರು ಗೋವಾ ತೆರಳುವ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿ ಗೋವಾ ಸರ್ಕಾರದ ದೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ನಿಯಮ ವಿರೋಧಿಸಿ ಗಡಿ ಬಂದ್ ಮಾಡಿರುವ ಗೋವಾ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಕೆಲಸಕ್ಕೆ ಗೋವಾ ತೆರಳುವವರಿಗೆ ಕೋವಿಡ್ ಟೆಸ್ಟ್ ಹೆಸರಲ್ಲಿ 2 ಸಾವಿರ ವಸೂಲು ಮಾಡುತ್ತಿರುವುದು ಹಾಗೂ ಕೋವಿಡ್ ನೆಗೆಟಿವ್ ವರದಿ ಇಲ್ಲದವರ ಯಾವುದೇ ವಾಹನಕ್ಕೆ ಪ್ರವೇಶ ನೀಡದೇ ಅನ್ಯಾಯ ಮಾಡಲಾಗುತ್ತಿದೆ. ಇದರಿಂದ ಕಾರ್ಮಿಕರು, ಬಾಡಿಗೆ ವಾಹನ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.

ಸೆಪ್ಟೆಂಬರ್ 1ರಿಂದ ಗಡಿಯನ್ನು ಮುಕ್ತವಾಗಿ ತೆರೆಯದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.ಈ ಹಿನ್ನಲೆಯಲ್ಲಿ ಗಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ಪ್ರತಿಭಟನೆಯನ್ನು ವಾಟಾಳ್ ಪಕ್ಷದ ರಾಘವ ನಾಯ್ಕ ಮುಂದಾಳತ್ವ ವಹಿಸಿದ್ದರು.

ಪ್ರತಿ ದಿನ ಕೆಲಸ ನಿಮಿತ್ತ ಗೋವಾಕ್ಕೆ ಹೋಗುವವರಿಗೆ ಸಮಸ್ಯೆ!

ಕೇಂದ್ರ ಸರ್ಕಾರ ಅಂತರಾಜ್ಯ ಗಡಿ ಮುಕ್ತವಾಗಿಸುವಂತೆ ಸೂಚಿಸಿದ್ದರೂ ಗೋವಾ ಸರ್ಕಾರ ಹೊರ ರಾಜ್ಯದಿಂದ ಬರುವ ಜನರಿಗೆ ಕಡ್ಡಾಯ 14 ದಿನ ಹೋಮ್ ಕ್ವಾರಂಟೈನ್ ಹಾಗೂ ಎರಡು ಸಾವಿರ ನೀಡಿ ಕೋವಿಡ್ ೧೯ ಪರೀಕ್ಷೆಗೊಳಗಾಗಬೇಕು ಎಂಬ ನಿಯಮ ಹೇರಿದೆ.
ಆದರೇ ಗೋವಾದ ನಿವಾಸಿಗಳಿಗೆ ಮಾತ್ರ ಈ ನಿಯಮದಿಂದ ಸಡಿಲಿಕೆ ಮಾಡಲಾಗಿದೆ.
ಹೀಗಾಗಿ ಗೋವಾದ ಜನರು ಕರ್ನಾಟಕಕ್ಕೆ ಬಂದು ಹೋಗುತಿದ್ದಾರೆ. ಆದರೇ ಗಡಿ ಜಿಲ್ಲೆ ಕಾರವಾರದ ಜನರು ಪ್ರತಿ ದಿನ ಉದ್ಯೋಗಕ್ಕಾಗಿ ಗೋವಾಕ್ಕೆ ಹೋಗಿಬರುತಿದ್ದು ಇವರು ಪ್ರತಿ ದಿನ ಹೋಗಬೇಕಾದರೂ ಕೋವಿಡ್ ಟೆಸ್ಟ್ ಗೆ ಒಳಗಾಗಬೇಕಿದ್ದು ಪ್ರತಿ ಬಾರಿ ಎರಡುಸಾವಿರ ಶುಲ್ಕ ಪಾವತಿಸುವ ಅನಿವಾರ್ಯತೆ ಎದುರಾಗಿದೆ.ಜೊತೆಗೆ ಕರ್ನಾಟಕದ ಬಾಡಿಗೆ ವಾಹನಗಳಿಗೂ ಈ ನಿಯಮ ಇರುವುದರಿಂದ ಏರ್ ಪೋರ್ಟ ಗಳಿಗೆ ಬಾಡಿಗೆ ತೆರಳುವ ಕಾರವಾರದ ಬಾಡಿಗೆ ವಾಹನಗಳು, ಮೀನಿನ ವಾಹನಗಳಿಗೆ ಹೆಚ್ಚಿನ ಹೊರೆಯಾಗುತ್ತಿದೆ. ಇನ್ನು ಗೋವಾದಿಂದ ಬರುವ ಯಾವ ವಾಹನಕ್ಕೂ ಈ ನಿಯಮ ಇಲ್ಲದೇ ಏಕ ಪಕ್ಷೀಯ ನಿಯಮ ಹೇರಿದ್ದು ಕನ್ನಡಿಗರಿಗೆ ತೊಂದರೆಯಾಗುತ್ತಿದೆ.ಕೇಂದ್ರ ಸರ್ಕಾರ ನಿಯಮ ಸಡಿಲಿಸಿದ್ದರಿಂದ ಕರ್ನಾಟಕ ದಲ್ಲಿ ಯಾವುದೇ ಶುಲ್ಕವಿಲ್ಲದೇ ಎಲ್ಲಾ ರಾಜ್ಯದವರಿಗೆ ಮುಕ್ತವಾಗಿಸಲಾಗಿದೆ.ಆದರೇ ಗೋವಾ ಮಾತ್ರ ತನ್ನದೇ ನಿಯಮ ಹೇರಿದ್ದು ಸ್ಥಳೀಯ ಗಡಿ ಜಿಲ್ಲೆಯ ಜನರಿಗೆ ಇದರಿಂದ ದೊಡ್ಡ ಸಮಸ್ಯೆಯಾಗುತಿದ್ದು ಸೆಪ್ಟೆಂಬರ್ ಒಂದರ ವರೆಗೆ ಈ ನಿಯಮ ಸಡಿಲಿಸುವಂತೆ ವಿವಿಧ ಕನ್ನಡ ಸಂಘಟನೆಗಳು ಗಡುವು ನೀಡಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ