ಕಾರವಾರ :- ರಾಜ್ಯ ಸರ್ಕಾರ ದಿಂದ ಗೋವಾ ರಾಜ್ಯದಲ್ಲಿ ಲಾಕ್ ಡೌನ್ ನಿಂದ ಸಿಲುಕಿಕೊಂಡಿರುವ ಕರ್ನಾಟಕದ ಜನರಿಗೆ ತಮ್ಮ ಊರುಗಳಿಗೆ ತೆರಳಲು ಅವಕಾಶ ಕಲ್ಪಿಸಿಕೊಟ್ಟಿದ್ದು ಇಂದಿನಿಂದ ಗೋವಾ ದಿಂದ ಕರ್ನಾಟಕಕ್ಕೆ ಬರುವ ಜನರಿಗೆ ಕಾರವಾರ ಗೋವಾ ಗಡಿಭಾಗದ ಮಾಜಾಳಿ ತಪಾಸಣಾ ಕೇಂದ್ರದಲ್ಲಿ ಪಾಸ್ ನೀಡುವ ಮೂಲಕ ತಮ್ಮ ಊರುಗಳಿಗೆ ತೆರಳಲು ಅವಕಾಶವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ.
ಗೋವಾ ರಾಜ್ಯ ದಿಂದ ಕರ್ನಾಟಕಕ್ಕೆ ತೆರಳಲು ಹತ್ತು ಸಾವಿರ ಜನ ನೊಂದಣಿ ಮಾಡಿಕೊಂಡಿದ್ದು ಕಾರವಾರ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆಯ ಮೂಲಕ ಪ್ರವೇಶ ನೀಡಲಾಗುತ್ತಿದೆ.

ಜೊತೆಗೆ ಆರೋಗ್ಯ ತಪಾಸಣೆ,ಊಟ ಹಾಗೂ ಸಂಚಾರದ ವ್ಯವಸ್ತೆಯನ್ನು ಸಹ ಕಲ್ಪಿಸಲಾಗಿದ್ದು ಆನ್ ಲೈನ್ ಮೂಲಕ ನೊಂದಣಿ ಮಾಡಿಕೊಳ್ಳದ ಜನರಿಗೂ ಸಹ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಡಳಿತ ಸ್ಥಳದಲ್ಲೇ ಅವರವರ ಜಿಲ್ಲೆ ಹಾಗೂ ರಾಜ್ಯಗಳಿಗೆ ತೆರಳಲು ಇಂದಿನಿಂದ ವ್ಯವಸ್ತೆ ಕಲ್ಪಿಸಿದೆ.ಇನ್ನು ಕರ್ನಾಟಕದ ಹತ್ತು ಸಾವಿರ ಜನರು ಮೊದಲ ಹಂತದಲ್ಲಿ ನೊಂದಣಿ ಮಾಡಿಕೊಂಡಿದ್ದು ಇಂದಿನಿಂದ ಅವರ ಆರೋಗ್ಯ ತಪಾಸಣೆ ನಡೆಸಿ ನಂತರ 14 ದಿನ ಹೋಮ್ ಕೊರಂಟೈನ್ ಇರುವಂತೆ ಕೈಗಳಿಗೆ ಸೀಲ್ ಹೊಡೆಯುವ ಮೂಲಕ ಅವರ ಸ್ಥಳಗಳಿಗೆ ಕಳುಹಿಸಿಕೊಡಲಾಯಿತು.

ಇಂದಿನಿಂದ ಗಡಿಭಾಗದ ಗೋವಾ-ಕಾರವಾರದ ಮಾಜಾಳಿ ಚಕ್ ಪೋಸ್ಟ್ ಬಳಿ ಉತ್ತರ ಕನ್ನಡ ಜಿಲ್ಲಾಡಳಿತ ಪಾಸ್ ಗಳಿಗಾಗಿ ಕೇಂದ್ರಗಳನ್ನು ತೆರದಿದ್ದು ಅನಿರ್ದಿಷ್ಟಾವಧಿ ಪಾಸ್ ನೀಡಲಾಗುತ್ತಿದೆ.