ಸ್ವಯಂ ವರದಲ್ಲಿ ಶಿವಧನಸ್ಸು ಮುರಿದು ಮದುವೆಯಾದ ವರ!

704

ಕಾರವಾರ(ಮೇ25):-ಆಧುನಿಕ ಭರಾಟೆಯಲ್ಲಿ ಮದುವೆ ಎನ್ನುವುದಿ ಜೀವನದ ಪ್ರಮುಖ ಘಟ್ಟ ,ಎರಡು ಪೇಪರ್ ನಲ್ಲಿ ಸಹಿ ಹಾಕಿ ಹಾರವನ್ನು ಬದಲಿಸಿಕೊಂಡು ಡ್ಯಾನ್ಸ್ ,ಸಂಗೀತ ಜೊತೆಯಲ್ಲಿ ಭರ್ಜರಿ ಊಟ,ರಾತ್ರಿ ಸ್ನೇಹಿತರಿಗೆ ಗುಂಡು ಎನ್ನುವುದಕ್ಕಷ್ಟೇ ಸೀಮಿತವಾಗಿದೆ .ಆದ್ರೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಮಾತ್ರ ತುಂಬಾನೆ ಡಿಫರೆಂಟ್ ಆಗಿ ಮದುವೆ ಮಾಡಲಾಯ್ತು .

ಸ್ವಯಂ ವರದ ವೀಡಿಯೋ ನೋಡಿ:-

ಅರೇ ಅಂತದ್ದೇನು ಡಿಫರೆಂಟ್ ಅಂತೀರಾ ಹೌದು ಈ ಮದುವೆ ಹಾಗೀಗೆ ನಡೆಯಲಿಲ್ಲ , ಕುದ್ದು ವರ ಸ್ವಯಂ ವರದಲ್ಲಿ ಭಾಗಿಯಾಗಿ ಶಿವಧನಸ್ಸು ಮುರಿದು ವಧುವನ್ನು ವರಿಸಿ ವಿಶೇಷವಾಗಿ ಮದುವೆಯಾಗಿದ್ದಾನೆ.

ಕುಮಟಾ ತಾಲೂಕಿನ ಗೋಕರ್ಣದ ಭದ್ರಕಾಳಿ ದೇವಸ್ಥಾನದ ಅರ್ಚಕ ಶ್ರೀಧರ್ ಗೋವಿಂದ ಭಟ್ ಹಾಗೂ ಮಮತ ದಂಪತಿಯ ಪುತ್ರಿ ನಿಶಾ ಮದುವೆಯನ್ನು ಇದೇ ಗ್ರಾಮದ ಆಶಾ ಹಾಗೂ ರಾಮದಾಸ್ ಕಾಶಿನಾಥ್ ಕಾಮತ್ ಪುತ್ರ ಗಿರೀಶ್ ಜೊತೆ ಇದೇ ತಿಂಗಳ 19 ರಂದು ನಿಶ್ಚಯ ಮಾಡಲಾಗಿತ್ತು. ವಧುವಿನ ಕುಟುಂಬದ ಆಸೆಯಂತೆ ಸೀತಾ ಸ್ವಯಂ ವರದಲ್ಲಿ ಪರುಶುರಾಮನ ಧನುಸ್ಸನ್ನು ಇಟ್ಟು ಯಾರು ಎತ್ತುತ್ತಾರೂ ಅವರಿಗೆ ವಧುವನ್ನು ನೀಡುವ ರೀತಿಯಲ್ಲಿ ಪರುಷುರಾಮ ಧನಸ್ಸನ್ನು ಮಧುವೆ ಮಂಟಪದ ಒಳಗೆ ಇಡಲಾಗಿದ್ದು ಅಕ್ಕಾಗಿ ವರ ಮಹಾಶಯರನ್ನೂ ಆಹ್ವಾನಿಸುವ ರೀತಿಯಲ್ಲಿ ಮದುವೆಯಾಗದ ಯುವಕರನ್ನು ಆಹ್ವಾನಿಸಲಾಗಿತ್ತು.

ನಂತರ ಒಬ್ಬೊಬ್ಬರಾಗಿ ಧನುಸ್ಸನ್ನು ಎತ್ತುವ ಆಹ್ವಾನ ನೀಡಲಾಯಿತು.ನಂತರ ವರ ಗಿರೀಶ್ ಪರುಶುರಾಮನ ಧನಸ್ಸನ್ನು ಎತ್ತಿ ಮುರಿಯುವ ಮೂಲಕ ಸ್ವಯಂ ವರದಲ್ಲಿ ವಿಜೇತರಾಗಿ ವಧು ನಿಶಾಳನ್ನು ವಿವಾಹವಾದರು . ಈ ವೀಡಿಯೋ ತುಣುಕನ್ನು ಫೇಸ್ ಬುಕ್ ನಲ್ಲಿ ವರ ಹಂಚಿಕೊಂಡಿದ್ದು ಪರುಷುರಾಮನ ಧನಸ್ಸನ್ನು ಮುರಿದು ವಿವಾಹವಾದ ವೀಡಿಯೋ ಸಕತ್ ವೈರಲ್ಲಾಗಿದ್ದು ಲಕ್ಷ ಜನ ವೀಕ್ಷಿಸಿ ಸಂತಸ ಪಟ್ಟಿದ್ದಾರೆ. ಇಂದಿನ ಆದುನಿಕ ಯುಗದಲ್ಲಿಯೂ ಸೀತಾ ಸ್ವಯಂ ವರದಂತೆ ವಿಶಿಷ್ಟ ರೀತಿಯಲ್ಲಿ ವಿವಾಹ ಎಲ್ಲರ ಮೆಚ್ಚುಗೆ ಪಡೆದಿದೆ.
Leave a Reply

Your email address will not be published. Required fields are marked *

error: Content is protected !!