ತಂದೆಯ ಅಸ್ತಿ ವಿಸರ್ಜಿಸಲು ಬಂದ ಮಗ ನೀರಿನಲ್ಲಿ ಮುಳುಗಿ ಸಾವು

332

ಕಾರವಾರ :- ತಂದೆಯ ಅಸ್ತಿ ವಿಸರ್ಜನೆಗೆ ಬಂದ ಮಗ ಅಸ್ತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳಗಿ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕೋಟಿ ತೀರ್ಥದಲ್ಲಿ ನಡೆದಿದೆ.

ಬೆಂಗಳೂರಿನಿಂದ ತಂದೆಯ ಅಸ್ತಿ ವಿಸರ್ಜನೆ ಬಂದಿದ್ದ ಕಮಲಾಕ್ಷ (60) ಎಂಬುವವರು ಇಂದು ಗೋಕರ್ಣದಲ್ಲಿ ಪಿತೃ ಕಾರ್ಯ ನೆರವೇರಿಸಿ ನಂತರ ಅಸ್ತಿಯನ್ನು ವಿಸರ್ಜಿಸಲು ಕೋಟಿ ತೀರ್ಥದಲ್ಲಿ ಇಳಿದಿದ್ದರು ಈ ವೇಳೆ ಆಯಾ ತಪ್ಪಿದ ಅವರು ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ