BREAKING NEWS
Search

ಗೋಕರ್ಣದಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವಶಕ್ಕೆ ಪಡೆದ ಪೊಲೀಸರು

572

ಕಾರವಾರ: ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಶರು ವಶಕ್ಕೆ ಪಡೆದಿರುವ ಘಟನೆ ಕುಮಟಾ ತಾಲ್ಲೂಕಿನ ಗೋಕರ್ಣದ ಬೇಲೆಹಿತ್ತಲ್ ನಲ್ಲಿ ನಡೆದಿದೆ.

ಗೋಕರ್ಣದ ಬೇಲೆಹಿತ್ತಲ್ ನ ದೇವು ಗೌಡ ಹಾಗೂ ಸುರೇಶ ಗೌಡ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೇಲೆಹಿತ್ತಲ್ ಬಳಿ ರಸ್ತೆಯಲ್ಲಿ ಗಾಂಜಾವನ್ನು ಪ್ಯಾಕಿಂಗ್ ಮಾಡುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಿಎಸ್ಐ ನವೀನ್ ನೇತೃತ್ವದ ತಂಡ ಸುಮಾರು ೬ ಸಾವಿರ ಮೌಲ್ಯದ ೬೩೫ ಗ್ರಾಮ್ ತೂಕದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.

ಅಲ್ಲದೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು ಕುಮಟಾ ಜೆಎಂಎಫ್ ಸಿ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *