ಪಿ.ಎಸ್.ಐ ನವೀನ್ ನೇತ್ರತ್ವದ ಕಾರ್ಯಾಚರಣೆ-ಗೋಕರ್ಣದಲ್ಲಿ ಒಂದು ಕೆ.ಜಿ ಗಾಂಜಾ ವಶ

1570

ಗೋಕರ್ಣ :- ಅಕ್ರಮವಾಗಿ ಸಾಗಾಟ ಮಾಡುತಿದ್ದ 1ಕೆ.ಜಿ 107 ಗ್ರಾಮ್ ತೂಕದ 20 ಸಾವಿರ ಮೌಲ್ಯದ ಗಾಂಜಾವನ್ನು ಗೋಕರ್ಣ ಠಾಣೆ ಪಿ.ಎಸ್.ಐ ನವೀನ್ ನೇತ್ರತ್ವದ ತಂಡ ಬುದುವಾರ ದಾಳಿ ನಡೆಸಿ ವಶಕ್ಕೆ ಪಡೆದಿದ್ದು ತಾಳಮಕ್ಕಿ ಗ್ರಾಮದ ಕೃಷ್ಣ ಗೌಡ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಒಟ್ಟು ಮೌಲ್ಯ 62170 ರುಪಾಯಿ ಮೌಲ್ಯದ ಗಾಂಜ ಹಾಗೂ ವಾಹನ ವಶಕ್ಕೆ ಪಡೆದಿದೆ. ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರವಾಸಿಗರ ಸ್ವರ್ಗ ಗೋಕರ್ಣ ಭಾಗದಲ್ಲಿ ಇತ್ತೀಚೆಗೆ ಗಾಂಜಾ ಸಾಗಾಟ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೆ ಗೋಕರ್ಣ ಪೊಲೀಸರು ಕಾರ್ಯಾಚರಣೆ
ನಡೆಸುತಿದ್ದು ಗಾಂಜಾ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ