ಗೋಕರ್ಣದಲ್ಲಿ ಅಮವಾಸೆ ತಂತು ಸಾವು!ಹೋಗಬೇಡಿ ಎಂದ್ರು ಹೋಗಿಬಿಟ್ಟರು

2915

ಕಾರವಾರ:- ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ನೀರುಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಕಡಲತೀರದ ಕರಿಯಪ್ಪನ ಕಟ್ಟೆ ತೀರ ಪ್ರದೇಶದಲ್ಲಿ ನಡೆದಿದೆ.

ಮೈಸೂರಿನ ಸುಹಾಸ್(17) ಮೃತ ಯುವಕನಾಗಿದ್ದು ಈತನೊಂದಿಗಿದ್ದ
ಮಂಡ್ಯ ಮೂಲದ ಉಲ್ಲಾಸ್ (15) ಸಮುದ್ರದಲ್ಲಿ ಕಾಣಿಯಾದ ಬಾಲಕನಾಗಿದ್ದಾನೆ.

8ಜನರ ತಂಡ ಮೈಸೂರಿನಿಂದ ಪ್ರವಾಸಕ್ಕೆ ಬಂದಿದ್ದರು.ಈವೇಳೆ ಖಾಸಗಿ ರೆಸಾರ್ಟನಲ್ಲಿ ಉಳಿದುಕೊಂಡಿದ್ದ ಇವರು ಇಂದು ಮುಂಜಾನೆ ಸಮುದ್ರಕ್ಕಿಳಿದಿದ್ದರು.ಇನ್ನು ಅಮವಾಸ್ಯೆ ಯಾದ್ದರಿಂದ ಸಮುದ್ರದಲ್ಲಿ ಸೆಳತ ಹೆಚ್ಚುರುತ್ತದೆ ಹಾಗಾಗಿ ಸಮುದ್ರದಲ್ಲಿ ಇಳಿಯಬೇಡಿ ಎಂದು ಇವರನ್ನು ಎಚ್ಚರಿಸಲಾಗಿತ್ತು.ಆದರೇ ಸ್ಥಳೀಯ ಜನರ ಮಾತಿಗೆ ಬೆಲೆ ಕೊಡದೇ ಸಮುದ್ರಕ್ಕಿಳಿದಿದ್ದು ಈವೇಳೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹಾಗು ಸೆಳೆತ ಹೆಚ್ಚಿದ್ದರಿಂದ ಇಬ್ಬರು ಕೊಚ್ಚಿಹೋಗಿದ್ದಾರೆ.
ರಕ್ಷಣೆ ಮಾಡುವ ಪ್ರಯತ್ನ ಮಾಡಿದರೂ ಸುಹಾಸ್ ಎಂವ ಯುವಕ ಆಸ್ಪತ್ರೆಗೆ ಕರೆದೊಯ್ಯುವ ಮಧ್ಯೆ ಸಾವುಕಂಡಿದ್ದರೆ,ಇನ್ನೋರ್ವ ಬಾಲಕ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು ಈತನ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ