ದಲಿತರಿಗೆ ಅವಾಚ್ಯ ಶಬ್ದ ನಿಂದನೆ:ಗೋಟ್ನೇಕರ್ ವಿರುದ್ಧ ದೂರು ಪ್ರತಿ ದೂರು ದಾಖಲು! ಪ್ರೀತ್ಸೋದ್ ತಪ್ಪೇ !

1632

ಉತ್ತರ ಕನ್ನಡ:- ದಲಿತ ಯುವಕ ತಮ್ಮ ಕಾಲೋನಿಯ ರಜಪೂತ್ ಜನಾಂಗದ ಯುವತಿಯನ್ನು ವಿವಾಹವಾಗಿದ್ದಾನೆ ಎಂದು ಸಚಿವ ಆರ್.ವಿ ದೇಶಪಾಂಡೆ ಆಪ್ತ ಹಾಗೂ ವಿಧಾನ ಪರಿಷತ್ ಸದಸ್ಯ ಗೋಟ್ನೇಕ್ ರಿಂದ ದಲಿತರಿಗೆ ಹಾಗೂ ಪೊಲೀಸರಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ಧಮ್ಕಿ ಹಾಕಿದ ಆರೋಪ ಕೇಳಿಬಂದಿದೆ.

ದಲಿತ ಯುವಕ ವಿನೋದ ತೆಗ್ನಳ್ಳಿ ಎಂಬಾತ ಮೇ 29 ರಂದು ಗೋಟ್ನೇಕರ್ ಪಕ್ಕದ ಮನೆಯ ಯುವತಿ ಅಶ್ವೀನಿ ಗೋಪಾಲ ಬಿಂದ್ರಬಿನ್ (೧೯) ಎಂಬುವಳನ್ನು ಪ್ರೀತಿಸಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು.

ಆದರೇ ಇದಕ್ಕೆ ಯುವತಿ ಮನೆಯವರು ವಿರೋಧ ವ್ಯಕ್ತಪಡಿಸಿ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು .

ಇಂದು ಯುವಕ ಯುವತಿಯೊಂದಿಗೆ ಠಾಣೆಗೆ ತನಿಖೆಗಾಗಿ ಹಾಜುರಾಗಿದ್ದ ಈ ವೇಳೆ ವಿಧಾನಪರಿಷತ್ ಸದಸ್ಯ ಗೋಟ್ನೇಕರ್ ಕೂಡ ಹಾಜುರಿದ್ದು ಯುವಕನಿಗೂ ಹಾಗೂ ಯುವಕನ ಜೊತೆ ಬಂದಿದ್ದ ದಲಿತ ಮುಖಂಡರಿಗೆ ಅವಾಚ್ಯ ಶಬ್ದದಿಂದ ನಿಂದಿಸಿದರು ಎನ್ನಲಾಗಿದ್ದು ದಲಿತ ಮುಖಂಡರು ಇದನ್ನು ಖಂಡಿಸಿ ಠಾಣೆಯ ರದರು ಪ್ರತಿಭಟನೆ ನಡೆಸಿ ದೂರು ದಾಖಲಿಸಿದ್ದಾರೆ.

ಗೋಟ್ನೇಕರ್ ವಿರುದ್ಧ ದೂರು ದಾಖಲಾಗುತಿದ್ದಂತೆ ಕಾಂಗ್ರೆಸ್ ನ ಹಳಿಯಾಳ ಪುರಸಭಾ ಸದಸ್ಯ ಸುರೇಶ್ ವಗ್ರಾಯಿ ಕೂಡ ದಲಿತ ಮುಖಂಡರ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ.

ಗೋಟ್ಕೇಕರ್ ಸಾಹೇಬ್ರೇ ಪ್ರೀತ್ಸೋದ್ ತಪ್ಪಾ!

ರಜಪೂತ ಜನಾಂಗದ 19 ವರ್ಷದ ಈ ಯುವತಿ ಗೋಟ್ಕೇಕರ್ ಮನೆಯ ಪಕ್ಕದ ಮನೆಯವಳು ಎನ್ನಲಾಗಿದೆ. ಚಿಕ್ಕ ವಯಸ್ಸಿನಿಂದ ಈ ಯುವತಿಯನ್ನು ಆಡಿಸಿದ್ದರಂತೆ ಹೀಗಾಗಿ ಈ ಕುಟುಂಬದ ಜೊತೆ ಸಲಿಗೆ ಇತ್ತು .ಇನ್ನು ಯುವತಿಯನ್ನು ಮನೆಗೆ ಕರೆತರಬೇಕು ಎನ್ನುವ ಕಾರಣದಿಂದ ಕುಟುಂಬದವರು ಗೋಟ್ಕೇಕರ್ ಹತ್ತಿರ ವಿನಂತಿಸಿಕೊಂಡಿದ್ದರಂತೆ .ಹೀಗಾಗಿ ಕುದ್ದು ಠಾಣೆಗೆ ಗೋಟ್ಕೇಕರ್ ಆಗಮಿಸಿ ಸಂದಾನ ಮಾಡುವ ಪ್ರಯತ್ನ ಮಾಡಿದ್ರು,ಆದ್ರೆ ಅದು ಸಾಧ್ಯವಾಗದೇ ಹುಡುಗಿ ಮನೆಗೆ ಬರಲು ಒಪ್ಪಲಿಲ್ಲ ,ಹೀಗಾಗಿ ಅಲ್ಲಿ ಮಾತಿಗೆ ಮಾತು ಬೆಳೆದು ದಲಿತ ಯುವಕ ಹಾಗೂ ಆತನೊಂದಿಗೆ ಬಂದಿದ್ದ ದಲಿತ ಮುಖಂಡರಿಗೆ ಧಮ್ಕಿ ಹಾಕಿದ್ದಾರೆ .

ಆಗ ಪರಸ್ತಿತಿ ವಿಕೋಪಕ್ಕೆ ಹೋಗಿದ್ದು ನಂತರ ಅಲ್ಲಿಂದ ತೆರಳಿದ್ದಾರೆ‌.

ಈಗ ದೂರು ಪ್ರತಿ ದೂರು ದಾಖಲಾಗಿದ್ದು ದಲಿತ ಯುವಕ ಮೇಲ್ಜಾತಿಯ ಯುವತಿಯನ್ನು ಮದುವೆಯಾಗುವುದೇ ತಪ್ಪೇ ಅಥವಾ ಪ್ರೀತ್ಸೋದು ತಪ್ಪೇ ಎನ್ನುವ ಮಾತು ಕೇಳಿಬರುತ್ತಿದೆ. ಜೊತೆಗೆ ಅಸೃಷ್ಯತೆಯ ಮಾತೂ ಕೂಡ.
Leave a Reply

Your email address will not be published. Required fields are marked *

error: Content is protected !!