ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಫಾಸಿಟಿವ್! ಜಿಲ್ಲೆಯಲ್ಲಿ ಈಗೆಷ್ಟು ಪ್ರಕರಣ ಗೊತ್ತಾ?

2129

ಕಾರವಾರ:- ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಸಂಜೆಯ ಬುಲಟಿನ್ ನಲ್ಲಿ ಹೊನ್ನಾವರದ ಒಂದು ಪ್ರಕರಣ ಫಾಸಿಟಿವ್ ಬರುವ ಮೂಲಕ ಇಂದು ಜಿಲ್ಲೆಯ ಜನರಿಗೆ ಶಾಕ್ ನೀಡಿದೆ.

ಹೊನ್ನಾವರದ ಬಂದರು ರಸ್ತೆಯ ನಿವಾಸಿ 50 ವರ್ಷದ ವ್ಯಕ್ತಿಗೆ ಕೊರೊನಾ ಪೊಸಿಟಿವ್ ಬಂದಿರುವುದು ದೃಡಪಟ್ಟಿದೆ. ಮುಂಬೈ ನಿಂದ ಬೆಳಗಾವಿ ಮೂಲಕವಾಗಿ 25 ಜನರೊಂದಿಗೆ ಮೊದಲು ಭಟ್ಕಳಕ್ಕೆ ಬಂದು ಇಳಿದಿದ್ದ. ಇವನೊಂದಿಗೆ 11 ಜನರು ಭಟ್ಕಳದವರು ಸಹ ಇದ್ದರು. ಉಳಿದವರು ಉಡುಪಿಯವರಾಗಿದ್ದು ಉಡುಪಿಗೆ ತೆರಳಿದ್ದರು.
ಈತ ಹಾಗೂ ಈತನೊಂದಿಗೆ ಬಂದಿದ್ದವರನ್ನು ಮೊದಲು ಭಟ್ಕಳದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೇ ಈತನಲ್ಲಿ ಜ್ವರ ಕಾಣಿಸಿಕೊಂಡ ಕಾರಣ ಈತನನ್ನು ಭಟ್ಕಳದಿಂದ ಈತನ ಊರಾದ ಹೊನ್ನಾವರದಲ್ಲಿ ಕರೆದೊಯ್ದು ಕ್ವಾರಂಟೈನ್ ಮಾಡಲಾಗಿದ್ದು ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಈತನಿಗೆ ಫಾಸಿಟಿವ್ ಇರುವುದು ದೃಡವಾಗಿದೆ.

ರೋಗಿ ಕಾರವಾರದ ಆಸ್ಪತ್ರೆಗೆ ಷಿಫ್ಟ್ !


ಇಂದು ಬೆಳಗಿನ ಬುಲಟಿನ್ ನಲ್ಲಿ ಈತನ ವರದಿ ಪ್ರಕಟವಾಗಬೇಕಿತ್ತು ಆದರೇ ಪ್ರಕಟವಾಗದೇ ಜಿಲ್ಲೆಯ ಜನರಿಗೆ ಖುಷಿ ತಂದಿತ್ತು. ಆದರೇ ಜಿಲ್ಲಾ ಆರೋಗ್ಯ ಇಲಾಖೆಗೆ ಈತನಿಗೆ ಸೊಂಕು ಇರುವುದು ಖಚಿತವಾಗಿದ್ದು ಹೊನ್ನಾವರದ ಸರ್ಕಾರಿ ಆಸ್ಪತ್ರೆಯಿಂದ ಕಾರವಾರದ ವೈದ್ಯಕೀಯ ಕಾಲೇಜಿನ ಕೋವಿಡ್ ವಾರ್ಡ ಗೆ ಇಂದು ಮಧ್ಯಾನವೇ ಕಳುಹಿಸಲಾಗಿದೆ.

ಈ ಮೂಲಕ ಜಿಲ್ಲೆಯಲ್ಲಿ ನೂತನ ಸಕ್ರಿಯ ಪ್ರಕರಣಗಳು 37ಕ್ಕೆ ಏರಿಕೆಯಾಗಿದ್ದು ಡಿಸ್ಟಾರ್ಜ್‌ಗೊಂಡ 32 ಮಂದಿ ಸೇರಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 69 ಪ್ರಕರಣಗಳು ದಾಖಲಾಗಿವೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ