BREAKING NEWS
Search

ಗಂಡನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಪತ್ನಿ

1163

ಕಾರವಾರ:- ಗಂಡ ಹೃದಯಾಘಾತದಿಂದ ಮೃತಪಟ್ಟ ಸುದ್ದಿಕೇಳಿ ಆತನ ಹೆಂಡತಿ ಹೃದಯಾಘಾತದಿಂದ ಸಾವು ಕಂಡ ಹೃದಯ ಕಲಕುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದಿಪುರದಲ್ಲಿ ನಡೆದಿದೆ.
ವೆಂಕಟೇಶ ಕೊಡಿಯಾ, ಮಾದೇವಿ ಕೊಡಿಯಾ ಒಂದೇ ದಿನ ಇಹಲೋಕ ತ್ಯಜಿಸಿದ ಪತಿ ಪತ್ನಿ.

ಇಂದು ಬೆಳಿಗ್ಗೆ ಎದೆ ನೋವು ಕಾಣಿಸಿಕೊಂಡು ವೆಂಕಟೇಶ್ ಕೊಡಿಯಾ ಆಸ್ಪತ್ರೆ ಸಾಗಿಸುವಾಗ ಮೃತಪಟ್ಟಿದ್ದ .

ಶಿವಮೊಗ್ಗ ಜಿಲ್ಲೆಯ ಸಾಗರದ ತನ್ನ ಮಗಳ ಮನೆಯಲ್ಲಿದ್ದ ಈತನ ಪತ್ನಿ ಈ ಸುದ್ದಿ ತಿಳಿದು ಶಾಕ್ ಗೆ ಒಳಗಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.




Leave a Reply

Your email address will not be published. Required fields are marked *