BREAKING NEWS
Search

ವಿದ್ಯಾಸಾಗರ ಬಾಲ ಪುರಸ್ಕಾರಕ್ಕೆ ಆಯ್ಕೆ /ಶಿಕ್ಷಕನಿಗೆ ಬೀಳ್ಕೊಡಿಗೆ

38

ಹೊನ್ನಾವರ: ಶಹಾಪುರದ ಸಂಧ್ಯಾ ಸಾಹಿತ್ಯ ವೇದಿಕೆಯ ವಿದ್ಯಾಸಾಗರ ಬಾಲ ಪುರಸ್ಕಾರಕ್ಕೆ ತಾಲೂಕಿನ ಮೂಡ್ಕಣಿಯ ಹವ್ಯಾಸಿ ಯುವ ಬರಹಗಾರ ಎಂ ಎಸ್ ಶೋಭಿತ್ ಆಯ್ಕೆಯಾಗಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರದ ಸಂಧ್ಯಾ ಸಾಹಿತ್ಯ ವೇದಿಕೆ ಬಾಲ ಕವಿ ವಿದ್ಯಾಸಾಗರ ಕುಕ್ಕುಂದಾ ಹೆಸರಿನಲ್ಲಿ 1999 ರಿಂದ ಈ ಪುರಸ್ಕಾರ ನೀಡಲಾಗುತ್ತಿದೆ.

ಶೋಭಿತ್

ನವೆಂಬರ್ ಕೊನೆಯ ವಾರದಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಆಯೋಜನೆಯಾಗಿರುವ ‌ಸಂಧ್ಯಾ ಮಕ್ಕಳ ಕಾವ್ಯೋತ್ಸವದಲ್ಲಿ ಪುರಸ್ಕಾರ ಪ್ರದಾನ ನಡೆಯಲಿದೆ.

ಶೋಭಿತ್ ಮೂಡ್ಕಣಿಯ ಸತೀಶ ಹೆಗಡೆ ಮತ್ತು ಸುನೀತಾ ದಂಪತಿಗಳ ಪುತ್ರ. ಹೊನ್ನಾವರದ ಎಸ್‌ಡಿಎಂ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಧಾರ್ಮಿಕ, ಸಾಮಾಜಿಕ, ಕೃಷಿ ಇನ್ನಿತರ ವಿಷಯಗಳ ಕುರಿತು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿತ ಲೇಖನಗಳನ್ನು ಪರಿಗಣಿಸಿ ಆಯ್ಕೆ ಮಾಡಿದೆ ಎಂದು ಸಂಧ್ಯಾ ಸಾಹಿತ್ಯ ವೇದಿಕೆಯ ರವಿ ಹಿರೇಮಠ ತಿಳಿಸಿದ್ದಾರೆ.

ಶಿಕ್ಷಕನಿಗೆ ಬೀಳ್ಕೊಡಿಗೆ

ಕಾರವಾರ: ಅಂಕೋಲಾ ತಾಲ್ಲೂಕಿನ ಬ್ರಹ್ಮೂರು ಶಾಲೆಯಲ್ಲಿ 19 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಸುಧಾಕರ ಕೆ. ಮಡಿವಾಳ ಅವರನ್ನು ಶನಿವಾರ ಬೀಳ್ಕೊಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ದಶಕಗಳ ಕಾಲ ಇಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿದ್ದು ತುಂಬಾ ಸಂತಸದ ಸಂಗತಿ. ಸೇವಾ ಅವಧಿಯಲ್ಲಿ ಹಿರಿಯ ಕಿರಿಯರೆಲ್ಲರೂ ಪ್ರೀತಿಯಿಂದ ಸಹಕಾರ ನೀಡಿದ್ದೀರಿ’ ಎಂದು ನೆನಪುಗಳನ್ನು ಹಂಚಿಕೊಂಡರು.

ಮುಖ್ಯಶಿಕ್ಷಕ ಗಣೇಶ್ ಟಿ. ಭಟ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ವಿ. ಭಟ್, ಮೊಗಟಾ ಗ್ರಾಮ ಪಂಚಾಯ್ತಿ ಸದಸ್ಯ ಸಂದೇಶ್ ನಾಯ್ಕ ಇದ್ದರು.
Leave a Reply

Your email address will not be published. Required fields are marked *