BREAKING NEWS
Search

ಸರಣಿ ಮಂಗನ ಸಾವು-ಉತ್ತರ ಕನ್ನಡಕ್ಕೆ ಮಂಗನ ಕಾಯಿಲೆ ಆತಂಕ!

390

ಕಾರವಾರ:- ಶಿವಮೊಗ್ಗ ಜಿಲ್ಲೆಗೆ ಮಾತ್ರ ಸೀಮಿತವಾದ ಮಂಗನ ಕಾಯಿಲೆ ಉತ್ತರ ಕನ್ನಡ ಜಿಲ್ಲೆಗೂ ಹಬ್ಬುವ ಮೂಲಕ ಈಗ ಜನರಲ್ಲಿ ಆತಂಕ ಮೂಡಿಸಿದೆ.

ಇಂದು ಸಂಶಯಾಸ್ಪದವಾಗಿ ಮಂಗ ಸಾವು‌ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ
ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದಲ್ಲಿ ನಡೆದಿದೆ.

ಕಳೆದ ವರ್ಷ ಸಹ ಇದೇ ಭಾಗಗದಲ್ಲಿ ಆರು ಮಂಗಗಳು ಸಾವು ಕಂಡುದ್ದವು.ಇದಲ್ಲದೇ ಕೆಲವು ಮಂಗದ ಮರಣೋತ್ತರ ಪರೀಕ್ಷೆ ಯಿಂದ ಮಂಗನ ಕಾಯಿಲೆಯ ಸೊಂಕು ಇರುವುದು ಪತ್ತೆಯಾಗಿತ್ತು.

ಆವರ್ಸಾದಲ್ಲಿ ಸಾವು ಕಂಡ ಮಂಗ.

ಈ ಹಿನ್ನಲೆಯಲ್ಲಿ ಸ್ಥಳೀಯರು ಮಂಗನ ಕಾಯಿಲೆ ಬಂದಿರುವ ಆತಂಕ ವ್ಯಕ್ತಪಡಿಸಿದ್ದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮಂಗನ ದೇಹದ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಸಿದ್ದಾಪುರ,ಅಂಕೊಲ ,ಹೊನ್ನಾವರ ಭಾಗದಲ್ಲಿ ಆತಂಕ!

ಕಳೆದ ವರ್ಷ ಸಿದ್ದಾಪುರ ,ಹೊನ್ನಾವರ ಮತ್ತು ಅಂಕೋಲ ಭಾಗದಲ್ಲಿ ನಿರಂತರ ಮಂಗಗಳು ಸಾವು ಕಾಣುವ ಮೂಲಕ ಮಂಗನ ಕಾಯಿಲೆ ಈ ಭಾಗದಲ್ಲಿ ಪತ್ತೆಯಾಗಿತ್ತು.ಇದಲ್ಲದೇ ಆರು ಜನರು ಮಂಗನಕಾಯಿಲೆ ಸೊಂಕಿಗೆ ತೊಂದರೆ ಅನುಭವಿಸಿದ್ದು ಇಬ್ಬರು ಸಾವನ್ನಪ್ಪಿದ್ದರು. ನಂತರ ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಿದ್ದರಿಂದಾಗಿ ರೋಗ ಉಲ್ಭಣವಾಗುವುದನ್ನು ತಡೆಗಟ್ಟವಲ್ಲಿ ಯಶಸ್ವಿಯಾಗಿದ್ದರು.

ಆದರೇ ಈ ಭಾರಿ ಮಂಗನ ಕಾಯಿಲೆ ಸೊಂಕು ಕಾಣಿಸಿಕೊಂಡಿದ್ದು ಆರೋಗ್ಯ ಇಲಾಖೆ 58,706 ಜನರಿಗೆ ಈಗಾಗಲೇ ಲಸಿಕೆ ನೀಡಿದೆ.ಇದರ ಜೊತೆ 24 ತಾಸುಗಳ ಕಾರ್ಯ ನಿರ್ವಹಿಸಲು ಎರಡು ಅಂಬುಲೆನ್ಸೆ ವೆವಸ್ಥೆ ಕಲ್ಪಿಸುಲು ಮುಂದಾಗಿದ್ದು ಹೆಚ್ಚಿನ ಸಿಬ್ಬಂದಿ ನಿಯೋಜನೆಗೆ ಆರೋಗ್ಯ ಇಲಾಖೆ ಮುಂದಾಗಿದೆ.

ಇನ್ನು ಮಂಗನ ಕಾಯಿಲೆಯಿಂದ ಸತ್ತವರಿಗೆ ಸರ್ಕಾರದಿಂದ ಈ ವರೆಗೂ ಪರಿಹಾರ ಮರೀಚಿಕೆಯಾಗಿದೆ.

ಕಳೆದ ವರ್ಷ ಮಂಗನ ಕಾಯಿಲೆಯಿಂದ ಸತ್ತವರಿಗೆ ಈವರೆಗೂ ಸರ್ಕಾರ ಘೋಷಣೆ ಮಾಡಿದ ಪರಿಹಾರ ಮಾತ್ರ ವದಗಿಸಿಲ್ಲ.ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕಿದೆ.

ಇನ್ನು ಸದ್ಯ ಜಿಲ್ಲೆಯಲ್ಲಿ ಆತಂಕ ಪಡುವ ಅಗತ್ಯ ಇಲ್ಲದಿದ್ದರೂ ಕಾಡಿಗೆ ಅಧವಾ ಗದ್ದೆ ಇತರೆ ಕೆಲಸಕ್ಕೆ ಹೋಗುವ ಜನರು ಕಡ್ಡಾಯವಾಗಿ ಡಿ.ಎಮ್.ಪಿ ಆಯಲ್ ಹಚ್ಚಿಕೊಳ್ಳುವ ಮೂಲಕ ಮಂಗನ ಕಾಯಿಲೆ ಸೊಂಕು ತಗಲದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ.ಇದರ ಜೊತೆಗೆ ನಿಯಮದಂತೆ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಮಂಗನ ಕಾಯಿಲೆ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕಿದೆ.




Leave a Reply

Your email address will not be published. Required fields are marked *