ಕರೋನಾ ಮೂರನೆ ಅಲೆ ತಡೆಯಲು ಜಿಲ್ಲಾಡಳಿತದ ವ್ಯವಸ್ಥೆ ಏನು? ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಿಕ್ಕಿದ್ದೆಷ್ಟು!-ಸಚಿವ ಶಿವರಾಮ್ ಹೆಬ್ಬಾರ್ ಹೇಳಿಕೆ ವಿವರ ನೋಡಿ.

575

ಕಾರವಾರ :- ಉತ್ತರಕನ್ನಡ ಜಿಲ್ಲೆಯಾದ್ಯಂತ 75ನೇ ಸ್ವಾತಂತ್ರ್ಯೋತ್ಸವವನ್ನ ಅದ್ದೂರಿಯಿಂದ ಆಚರಿಸಲಾಯಿತು.
ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಧ್ವಜಾರೋಹಣ ನೆರವೇರಿಸಿದರು.

ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದ ಸಚಿವರು, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಜಿಲ್ಲೆಯ ಹಿರಿಯರನ್ನ ಸ್ಮರಿಸಿದ ಅವರು ಜಿಲ್ಲಾಡಳಿತದ ವತಿಯಿಂದ ಅವರ ಮನೆಗೆ ಹೋಗಿ ಗೌರವಿಸಲಾಗಿದೆ.

ಕೋವಿಡ್ ಸಂದಿಗ್ಧ ಪರಿಸ್ಥಿತಿಯನ್ನ ಸರ್ಕಾರದಿಂದ ಸಮರ್ಥವಾಗಿ ಎದುರಿಸಲಾಗಿದೆ.

ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತದಿಂದ ಎಲ್ಲಾ ಸಿದ್ದತೆ ಮಾಡಿಕೊಂಡಿದೆ. 284 ಆಮ್ಲಜನಕ ಸಹಿತ ಹಾಸಿಗೆ ,1888 ಪ್ರತ್ಯೇಕ ಹಾಸಿಗೆ ಹಾಗೂ 284 ಪ್ರತ್ತೇಕ ಹಾಸಿಗೆ ಸಿದ್ದಪಡಿಸಿಕೊಳ್ಳಲಾಗಿದೆ.104 ವೆಂಟಿಲೇಟರ್ಸ್ ,155 ಐ.ಸಿ.ಯೂ ಹಾಸಿಗೆ ,52 ವಿಶೇಷ ಮಕ್ಕಳ ಐಸಿಯು ಹಾಸಿಗೆ ಸಿದ್ದಪಡಿಸಿಕೊಳ್ಳಲಾಗಿದೆ.
ದಾಂಡೇಲಿಯಲ್ಲಿ 10,ಭಟ್ಕಳ 37,ಶಿರಸಿ 24 ಕಾರವಾರ ವೈದ್ಯಕೀಯ ಕಾಲೇಜಿನಲ್ಲಿ 70 ವ್ಯವಸ್ಥಿತ ಆಮ್ಲಜನಕ ಹಾಸಿಗೆ ಹಾಗೂ 50 ಹೆಚ್ಚುವರಿ ಹಾಸಿಗೆಗಳನ್ನು ಪ್ರತ್ತೇಕವಾಗಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಇನ್ನು ವಿಪರೀತ ಕಡಿಮೆ ತೂಕ ಹೊಂದಿದ 184 ಮಕ್ಕಳಿಗೆ ಮೆಡಿಸಿನ್ ಕಿಟ್ ವಿತರಿಸಲಾಗಿದ್ದು , ಸಾಧಾರಣ ಕಡಿಮೆ ತೂಕ ಹೊಂದಿದ 3902 ಮಕ್ಕಳಲ್ಲಿ 2185 ಮಕ್ಕಳಿಗೆ ಮೆಡಿಸಿನ್ ಕಿಟ್ ವಿತರಿಸಲಾಗಿದೆ.ಜಿಲ್ಲೆಯಲ್ಲಿ ಆಮ್ಲಜನಕ ಕೊರತೆ ನೀಗಿಸಲು 6ಕೆಎಲ್ ಪ್ಲಾಂಟ್ಸ್ ಅನ್ನು ಕಾರವಾರದ ಕಿಮ್ಸ್ ನಲ್ಲಿ ಸ್ಥಾಪಿಸಲಾಗಿದೆ.ಇದರ ಜೊತೆಗೆ ಶಿರಸಿ ಹಾಗೂ ಭಟ್ಕಳದಲ್ಲಿ 6 ಕೆಎಲ್ ಪ್ಲಾಂಟ್ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.ಶೀಘ್ರದಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಆಮ್ಲಜನಕದ ಪ್ಲಾಂಟ್ ಸ್ಥಾಪಿಸಲು ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಜಿಲ್ಲೆಯಲ್ಲಿ ಈವರೆಗೆ 5,52379 ಜನರಿಗೆ ಮೊದಲ ಸುತ್ತಿನ ಕೋವಿಡ್ ಲಸಿಗೆ ನೀಡಲಾಗಿದೆ.ಎರಡನೇ ಸುತ್ತಿನಲ್ಲಿ 1,95,156 ಜನರಿಗೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ನೀಡಿದ್ದಿಷ್ಟು.

ಜಿಲ್ಲೆಯಲ್ಲಿ 210 ಕೋಟಿ ರೂ ಗಳನ್ನು ಮುಖ್ಯಮಂತ್ರಿಗಳು ಜಿಲ್ಲೆಗೆ ಪರಿಹಾರ ಹಣ ಘೋಷಣೆ ಮಾಡಿದ್ದಾರೆ.

ಜಿಲ್ಲೆಯಲ್ಲಿ ತೌಖ್ತೆ ಚಂಡಮಾರುತ ಅಪ್ಪಳಿಸಿ 110 ಮನೆಗಳಿಗೆ ಸಮುದ್ರದ ನೀರು ಉಕ್ಕಿ ನಷ್ಟವಾಗಿದ್ದು ,4174 ಲಕ್ಷ ಪರಿಹಾರ ನೀಡಲಾಗಿದೆ.
ಇದೇ ರೀತಿ ಜುಲೈ ನಲ್ಲಿ ಅತಿವೃಷ್ಟಿಯಿಂದ ಏಳು ಜನ ಮೃತಪಟ್ಟಿದ್ದು ತಲಾ ₹5ಲಕ್ಷ ಪರಿಹಾರ ನೀಡಲಾಗಿದೆ.
ಮಳೆ ಹಾನಿಯಲ್ಲಿ 248 ಪೂರ್ಣ ಪ್ರಮಾಣ, 250 ತೀವ್ರತರ ಹಾಗೂ 1282 ಭಾಗಶಃ ದಂತೆ ಒಟ್ಟು 1780 ಹಾನಿಯಾಗಿದ್ದು ಇದರಲ್ಲಿ ಪೂರ್ಣ ಪ್ರಮಾಣದ ಹಾನಿಯಾದ 168 ಮನೆಗಳಿಗೆ 159.75 ಲಕ್ಷ ,ತೀವ್ರತರವಾದ 110 ಮನೆಗಳಿಗೆ 135.1 ಲಕ್ಷ ,ಭಾಗಶಃ ಹಾನಿಯಾದ 516 ಮನೆಗಳಿಗೆ 24 ಲಕ್ಷ ಒಟ್ಟು 794 ಮನೆಗಳಿಗೆ 318 ಲಕ್ಷ ಪರಿಹಾರ ನೀಡಲಾಗಿದೆ.
ಇನ್ನು ಅನಧಿಕೃತವಾಗಿ ಕಟ್ಟಿಕೊಂಡ 8215 ಮನೆಗಳಲ್ಲಿ ಹಾನಿಯಾಗಿದ್ದು ಇದರಲ್ಲಿ 8131 ಕುಟುಂಬಗಳಿಗೆ ತಲಾ ₹3800 ರಂತೆ ಒಟ್ಟು 309 ಲಕ್ಷ ಪರಿಹಾರ ನೀಡಲಾಗಿದೆ.45 ಜಾನುವಾರುಗಳು ಪ್ರವಾಹದಿಂದ ಸಾವನ್ನಪ್ಪಿದ್ದು 9.55 ಲಕ್ಷ ಪರಿಹಾರ ನೀಡಲಾಗಿದೆ.

1037.39 ಹೆಕ್ಟೇರ್ ಪ್ರದೇಶ ದ ಕೃಷಿ ಪ್ರದೇಶ ಹಾಗೂ 375.73 ಹೆಕ್ಟೇರ್ ತೋಟಗಾರಿಕಾ ಪ್ರದೇಶ ಹಾನಿಯಾಗಿದ್ದು ಸರ್ವೆ ಕಾರ್ಯ ಪ್ರಗತಿಯಲ್ಲಿದೆ.

ಇನ್ನು ಕರಾವಳಿ ಭಾಗದ 83 ದೋಣಿಗಳು ಪೂರ್ಣ ಪ್ರಮಾಣ ಹಾಗೂ 33 ಬಲೆಗಳು ಹಾನಿಯಾಗಿದ್ದು ಪರಿಹಾರ ನೀಡಬೇಕಿದೆ.
ಪ್ರಕೃತಿ ವಿಕೋಪ ಪರಿಹಾರದಡಿ ಜಿಲ್ಲೆಗೆ 25 ಕೋಟಿ ಪರಿಹಾರ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಮೂಲ ಸೌಕರ್ಯ ಹಾನಿ ಸಂಬಂಧಿಸಿದಂತೆ ಪಂಚಾಯತ್ ರಾಜ್ ಇಲಾಖೆಯಲ್ಲಿ 10619.35 ಲಕ್ಷ ಹಾಗೂ ಲೋಕೋಪಯೋಗಿ ಇಲಾಖೆ ಯಿಂದ 40144.15 ಲಕ್ಷ ಅಂದಾಜು ಮೊತ್ತ ಹಾನಿಯಾಗಿದ್ದು ,ಸರ್ಕಾರ ದಿಂದ 100 ಕೋಟಿ ತಕ್ಷಣದಲ್ಲಿ ಮಂಜೂರಾಗಿದ್ದು ,ರಾಷ್ಟ್ರೀಯ ಹೆದ್ದಾರಿ ಸಂಬಂಧಿಸಿದಂತೆ 9600ಲಕ್ಷ ಹಾನಿಯಾಗಿದ್ದು ಅನುದಾನ ಬಿಡುಗಡೆಗೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ