BREAKING NEWS
Search

ಜೋಯಿಡಾದಲ್ಲಿ ಜಿಂಕೆ ಬೇಟೆ-ಮೂರು ಜನರ ಬಂಧನ

150

ಕಾರವಾರ:- ತಾಲೂಕಿನ ವಿರ್ನೋಲಿ ವಲಯದ ಜನತಾಕಾಲೋನಿಯಲ್ಲಿ ಜಿಂಕೆ ಬೇಟೆಯಾಡಿದ ೩ ಅರೋಪಿಗಳನ್ನು ಬಂದಿಸಿ ಪ್ರಕರಣ ದಾಖಲಿಸಲಾಗಿದೆ.
ಜೊಯಿಡಾ ತಾಲುಕಿನ ಜನತಾ ಕಾಲೋನಿ ನಿವಾಸಿಗಳಾದ ಸಂದೀಪ ೩೬ ವರ್ಷ, ಪರಶುರಾಮ ಅಡಾವ ೨೭ ವರ್ಷ,ಗೋಪಾಲ ಮೇದಾರ ೨೯ ವರ್ಷ ಇವರುಗಳನ್ನು ಬಂಧಿಸಿ ಇವರಿಂದ ೧೬ ಕೆಜಿ ಜಿಂಕೆ ಮಾಂಸ ವಶಪಡಿಸಿಕೊಳ್ಳಲಾಗಿದೆ.

ಇನ್ನಷ್ಟು ಅರೋಪಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಆರೋಪಿಗಳ ಮೇಲೆ ವನ್ಯ ಜೀವಿ ಕಾಯಿದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದೆ.

ಹಳಿಯಾಳ ಡಿಸಿಎಪ್ ಅಜ್ಜಯ್ಯ ಜಿ.ಅರ್, ಎಸಿಎಪ್ ನಿಂಗಾಣಿ ಅವರ ಮಾರ್ಗದರ್ಶನದಲ್ಲಿ ವಿರ್ನೋಲಿ ವಲಯ ಅರಣ್ಯಾಧಿಕಾರಿ ಬಸವರಾಜ್, ಸಿಬ್ಬಂದಿಗಳಾದ ರಾಮುಗೌಡ,ಬೈಲಾ,ಬಸವನ ಗೌಡ,ಪ್ರವೀಣ ಮ್ಯಾಗೇರಿ, ಶ್ರೀಶೈಲ ಬಾರ್ಲಿ,ಸಂದೀಪ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ