ಸತೀಶ್ ಸೈಲ್ ಗೆ ನಾಯಕತ್ವ- ಆಸ್ನೋಟಿಕರ್ ! ಕೈಗಾ ಗುತ್ತಿಗೆ ನೌಕರ ಪರ ನಿಂತ ಸತೀಶ್ ಸೈಲ್.

1173

ಕಾರವಾರ:- ಕೈಗಾ ಅಣು ವಿದ್ಯತ್ ಸ್ಥಾವರದ ಹೊರ ಗುತ್ತಿಗೆ ನೌಕರರಿಗೆ ಪೂರ್ಣ ವೇತನ ಪಾವತಿಸಬೇಕು ಹಾಗೂ ಅವರ ಪ್ರಯಾಣಕ್ಕೆ ವಾಹನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ತಾಲೂಕಿನ ಮಲ್ಲಾಪುರ ಟೌನ್ ಷಿಪ್ ನಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ಮಾಜಿ ಶಾಸಕ ಸತೀಶ್ ಸೈಲ್ ನೇತ್ರತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಕೈಗಾ ಟೌನ್ ಷಿಪ್ ನಲ್ಲಿ ಸೇರಿದ್ದ ದಿನಗೂಲಿ ಕಾರ್ಮಿಕರು ಸುಮಾರು ಮೂರು ತಾಸುಗಳ ವರೆಗೆ ಧರಣಿ ನಡೆಸಿದರು.

ಪ್ರತಿಭಟನಾ ಕಾರರಿಗೆ ಬೆಂಬಲ ನೀಡಿ ಮಾತನಾಡಿದ ಕಾಂಗ್ರೆಸ್ ಟಾಸ್ಕ ಪೋರ್ಸ್ ಜಿಲ್ಲಾ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಸತೀಶ್ ಸೈಲ್ ಡಿ ದರ್ಜೆ ನೌಕರರಿಗಾಗಿ ದುಡಿಯುತ್ತಿರುವ ಯುವಕರಿಗೆ ಲಾಕ್ ಡೌನ್ ನಲ್ಲಿ ಎರಡು ತಿಂಗಳ ವೇತನ ಪಾವತಿಸಿಲ್ಲ ಇದರಿಂದ ಅವರ ಕುಟುಂಬ ನಿರ್ವಹಣೆಗೆ ಕಷ್ಟ ಪಡುತಿದ್ದಾರೆ.
ವಾಹನಗಳ ವ್ಯವಸ್ಥೆಯಿಲ್ಲದೇ ಕೆಲಸದ ಸ್ಥಳಕ್ಕೆ ಬರಲು ಸಾಧ್ಯವಾಗುತ್ತಿಲ್ಲ, ಅವರ ವೇತನ ತಕ್ಷಣ ನೀಡುವ ಜೊತೆಗೆ ವಾಹನದ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಆಗ್ರಹಿಸಿದರು.

ಅಣು ವಿದ್ಯುತ್ ಸ್ಥಾವರದ ಅಧಿಕಾರಿಗಳು ಈ ಬಗ್ಗೆ ಚಿಂತಿಸಲಾಗುವುದು ,ವೇತನ ಪಾವತಿಸುವಂತೆ ಗುತ್ತಿಗೆದಾರರಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.ಆದರೇ ಗುತ್ತಿಗೆದಾರರು ವೇತನ ಕೊಡುವಂತೆ ಲಿಖಿತವಾಗಿ ಸೂಚನೆ ನೀಡುವಂತೆ ಕೇಳುತಿದ್ದಾರೆ.ಈ ಸಂಬಂಧ ಅಧಿಕಾರಿಗಳು ಈ ಮೇಲ್ ಮಾಡಿದ್ದು ಅದು ಕೇವಲ ಮಾರ್ಗಸೂಚಿ ಅಷ್ಟೇ. ಅವರಿಂದ ವೇತನದ ಹಣದ ಬಗ್ಗೆ ಯಾವುದೇ ಬರವಸೆ ಬಂದಿಲ್ಲ ಎಂದು ಹೇಳುತಿದ್ದಾರೆ ಎಂದು ಅಧಿಕಾರಿಗಳು ದೂರಿದರು.

ಮೇ.30 ಕ್ಕೆ ಸಭೆ.


ಇದೇ ಸಂದರ್ಭದಲ್ಲಿ ಸಭೆ ನಡೆಸಿದ ಕೈಗಾ ಅಧಿಕಾರಿಗಳು ಬೇಡಿಕೆಯನ್ನು ಈಡೇರಿಸುವ ಸಂಬಂಧ ಮೇ.30ರಂದು ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸೈಲ್ ಅಲ್ಲಿಯವರೆಗೆ ನೌಕರರ ಸಂಚಾರಕ್ಕೆ ದಿನಕ್ಕೆ 20 ಸಾವಿರ ವೆಚ್ಚದಲ್ಲಿ 12 ಬಸ್ ಗಳ ವ್ಯವಸ್ಥೆ ಮಾಡುವುದಾಗಿ ಪ್ರಕಟಿಸಿದರು.ಬಳಿಕ ಅಧಿಕಾರಿಗಳು ಹೆಚ್ಚುವರಿಯಾಗಿ ಕೆ.ಎಸ್.ಆರ್.ಟಿ.ಸಿ ಬಸ್ ಗಳನ್ನು ಬಾಡಿಗೆ ಪಡೆದುಕೊಳ್ಳುವುದಾಗಿ ಭರವಸೆ ನೀಡಿದರು.

ಸತೀಶ್ ಸೈಲ್ ಗೆ ನಾಯಕತ್ವ ಎಂದ ಮಾಜಿ ಸಚಿವ ಆಸ್ನೋಟಿಕರ್

ಕೈಗಾ ಗುತ್ತಿಗೆ ನೌಕರರ ಪ್ರತಿಭಟನೆ ವೇಳೆ ಸ್ಥಳಕ್ಕಾಗಮಿಸಿ ಮಾಜಿ ಸಚಿವ,ಜೆಡಿಎಸ್ ಮುಖಂಡ ಆನಂದ್ ಆಸ್ನೋಟಿಕರ್ ಕೈಗಾ ಗುತ್ತಿಗೆ ನೌಕರರ ಪರ ನಿಂತಿರುವ ಹಾಗೂ ಸಹಾಯ ಮಾಡುತ್ತಿರುವ ಸತೀಶ್ ಸೈಲ್ ಪರ ಇದ್ದೇನೆ ಎಂದು ನೆರೆದಿದ್ದ ಜನರಲ್ಲಿ ಹೇಳಿದ ಅವರು ಸತೀಶ್ ಸೈಲ್ ಮುಂದಾಳತ್ವದಲ್ಲಿ ನೌಕರರಿಗೆ ನ್ಯಾಯಾ ದೊರಕಿಸಿಕೊಡುವಲ್ಲಿ ಸಹಕಾರ ನೀಡುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿ ಸತೀಶ್ ನಾಯಕತ್ವದಲ್ಲಿ ಗುತ್ತಿಗೆ ನೌಕರರ ಪರ ಹೋರಾಟಕ್ಕೆ ನಾವು ಜೊತೆಯಾಗಿ ನಿಲ್ಲುವುದಾಗಿ ತಿಳಿಸಿದರು.

ರಾಜಕೀಯ ವಿರೋಧದ ನಡುವೆ ಸತೀಶ್ ಸೈಲ್ ಗೆ ತಲೆಬಾಗಿರುವ ಆಸ್ನೋಟಿಕರ್.!?

ಸದ್ಯ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಕಾಂಗ್ರೆಸ್ ಮಾಜಿ ಶಾಸಕ ಸತೀಶ್ ಸೈಲ್ ಹವ ಜೋರಾಗಿದೆ.
ಇಬ್ಬರು ಸಕ್ರಿಯವಾಗಿ ಕ್ಷೇತ್ರದ ಜನರೊಂದಿಗೆ ತಳಮಟ್ಟದಲ್ಲಿ ಪ್ರವಾಹದಿಂದ ಹಿಡಿದು ಇಂದಿನ ಲಾಕ್ ಡೌನ್ ವರೆಗೂ ಜನರೊಂದಿಗೆ ನಿಲ್ಲುತಿದ್ದಾರೆ.
ಇನ್ನು ಕ್ಷೇತ್ರದಲ್ಲಿ ಪಾರಂಪರಿಕ ರಾಜಕೀಯದಲ್ಲಿದ್ದ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಕಳೆದ ವಿಧಾನಸಭೆ,ಲೋಕಸಭೆ ಚುನಾವಣೆಯಲ್ಲಿ ಸೋಲುವ ಮೂಲಕ ರಾಜಕೀಯ ಜನಪ್ರಿಯತೆಯಿಂದ ಕುಸಿಯುತ್ತಾ ಬಂದಿದ್ದಾರೆ.ಸೂತ ನಂತರ ಕ್ಷೇತ್ರದ ಜನರಿಂದ ದೂರವಾದ ಆಸ್ನೋಟಿಕರ್ ಜನರಿಂದ ಅಂತರ ಕಾಪಾಡಿಕೊಂಡು ಒಳರಾಜಕೀಯದಲ್ಲಿ ತಲ್ಲೀನರಾಗಿದ್ದಾರೆ.


ಇಂದುಬಾರಿ ಹಾಲಿ ಶಾಸಕಿಯನ್ನು ಹೊಗಳಿದರೆ ಇನ್ನೊಂದು ಬಾರಿ ಮಾಜಿ ಶಾಸಕ ಸತೀಶ್ ಸೈಲ್ ರನ್ನು ಹೊಗಳುವ ಮೂಲಕ ರಾಜಕೀಯ ಲೆಕ್ಕಾಚಾರದ ಚದುರಂಗದಾಟ ಆಡುವಂತೆ ಗೋಚರಿಸುತ್ತಿದೆ.
ಸದ್ಯ ಕ್ಷೇತ್ರದ ಜನರೊಂದಿಗೆ ಸೋತರೂ ಬೆರೆಯುವ ಮೂಲಕ ತಾನೊಬ್ಬ ಜನನಾಯಕ ಎಂಬುದನ್ನು ಸತೀಶ್ ಸೈಲ್ ತೋರಿಸಿಕೊಡುತಿದ್ದಾರೆ.ಆದರೇ ಜನರಿಂದ ಅಂತರ ಕಾಪಾಡಿಕೊಂಡಿರುವ ಆನಂದ್ ಆಸ್ನೋಟಿಕರ್ ನಡೆಗಳು ಕುತೂಹಲಕಾರಿಯಾಗಿದ್ದು ಯಾರಿಗೆ ವರವಾಗಲಿದೆ,ಯಾರಿಗೆ ಶಾಪವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ