ಕೈಗಾ ಅಣು ಸ್ಥಾವರಕ್ಕೆ ಕೋವಿಡ್ ತಪಾಸಣೆ ಇಲ್ಲದೇ ಹೊರರಾಜ್ಯದವರಿಗೆ ಅನುಮತಿ-26 ಗ್ರಾ.ಪಂ ಸದಸ್ಯರಿಂದ ಸಾಮೂಹಿಕ ರಾಜೀನಾಮೆ

484

ಕಾರವಾರ :- ಲಾಕ್ ಡೌನ್ ನಡುವೆಯೇ ಕೈಗಾ ಅಣು ಸ್ಥಾವರಕ್ಕೆ ಹೊರರಾಜ್ಯದ ಕೆಲಸಗಾರರಿಗೆ ತಪಾಸಣೆ ಮಾಡದೇ ಕೆಲಸ ನಿರ್ವಹಿಸಲು ಪ್ರವೇಶ ನೀಡಿದ ಹಿನ್ನಲೆಯಲ್ಲಿ ಇದನ್ನು ಖಂಡಿಸಿ ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮಪಂಚಾಯ್ತಿಯ
26 ಗ್ರಾಮಪಂಚಾಯ್ತಿ ಸದಸ್ಯರಿಂದ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ಪ್ರವೇಶಕ್ಕೆ ಅನುಮತಿ ಇಲ್ಲದಿದ್ದರೀ ಕೈಗಾ ಅಣುವಿದ್ಯುತ್ ಸ್ಥಾವರ ಪ್ರದೇಶಕ್ಕೆ ಹೊರರಾಜ್ಯದ ಉತ್ತರಖಾಂಡ್ ರಾಜ್ಯದ ಕೆಲಸಗಾರರನ್ನು ಎರಡು ವಾಹನಗಳಲ್ಲಿ ಚಾಲಕರ ಸಹಿತ ಎಂಟು ಮಂದಿಯನ್ನು ಕರೆಸಲಾಗಿತ್ತು.

ಯಾವುದೇ ವೈದ್ಯಕೀಯ ತಪಾಸಣೆ ಇಲ್ಲದೆ ಒಳಹೋಗಿದ್ದಕ್ಕೆ ಸ್ಥಳೀಯ ಗ್ರಾಮಪಂಚಾಯ್ತಿ ಸದಸ್ಯರನ್ನೊಳಗೊಂಡ ಟಾಸ್ಕ್ ಪೋರ್ಸ್ ಸಮಿತಿ ಜಿಲ್ಲಾಡಳಿತಕ್ಕೆ ದೂರು ನೀಡಿ ವೈದ್ಯಕೀಯ ತಪಾಸಣೆ ಮಾಡುವಂತೆ ಮನವಿ ಮಾಡಿತ್ತು.

ಆದರೇ ಈ ಮನವಿಗೆ ಅಧಿಕಾರಿಗಳು ಸ್ಪಂದಿಸದೇ ಸ್ಥಳೀಯರಿಗೊಂದು ನ್ಯಾಯ ಹೊರ ರಾಜ್ಯದವರಿಗೊಂದು ನ್ಯಾಯ ಮಾಡಿದ್ದು ಅಧಿಕಾರಿಗಳ ತಾರತಮ್ಯಕ್ಕೆ ಕಾರವಾರದ ಮಲ್ಲಾಪುರ ಗ್ರಾ.ಪಂ ಸದಸ್ಯರ ಆಕ್ಷೇಪ ವ್ಯಕ್ತಪಡಿಸಿ
26 ಜನ ಗ್ರಾಮ ಪಂಚಾಯತ್ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊರ ರಾಜ್ಯದಿಂದ ಬಂದ ಕೆಲಸಗಾರರಿಗೆ ತಪಾಸಣೆ!

ಇನ್ನು ಕೈಗಾ ದಲ್ಲಿ ಕೆಲಸ ನಿರ್ವಹಿಸಲು ಬಂದ ಹೊರ ರಾಜ್ಯದ ಕೆಲಸಗಾರರಿಗೆ ಈಗಾಗಲೇ ವೈದ್ಯಕೀಯ ತಪಾಸಣೆ ನಡೆಸಿ ಅವರಿಗೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ