BREAKING NEWS
Search

ಕಾರವಾರ ನಗರಿಗರದಲ್ಲಿ ಆತಂಕ ತಂತು ಬಯಂಕರ ಸದ್ದು! ಬಯಂಕರ ಸದ್ದಿಗೆ ಕಂಪಿಸಿದ ನೆಲ!

5366

ಕಾರವಾರ: ನಗರದಲ್ಲಿ ಇಂದು ಸಂಜೆ ವೇಳೆಗೆ ದೊಡ್ಡದಾಗಿ ಕೇಳಿಬಂದ ಶಬ್ದ ಜನರಲ್ಲಿ ಆತಂಕ ಸೃಷ್ಠಿ ಮಾಡಿತು. ನಗರದ ಮೇಲೆ ಬಾಂಬ್ ಸಿಡಿದಂತೆ ದೊಡ್ಡ ಸದ್ದು ಉಂಟಾಗಿದ್ದು ಈ ಸದ್ದಿಗೆ ನಗರದ ಕೆಲವು ಮನೆಗಳು,ಅಂಗಡಿಗಳು ಕಂಪಿಸಿದವು.

ಇದರಿಂದಾಗಿ ಆತಂಕ ಗೊಂಡ ನಗರದ ಜನ ಮನೆಯಿಂದ ಹೊರ ಬಂದು ಏನಾಯಿತು ಎಂದು ನೋಡಿದ್ದಾರೆ.ಆದರೇ ಒಂದು ಬಾರಿ ಮಾತ್ರ ಈ ಸದ್ದು ಉಂಟಾಗಿದ್ದು ಏನಾಗುತ್ತಿದೆ ಎಂದು ಜನರು ಭಯಪಟ್ಟರು.

ಸಾಂದರ್ಭಿಕ ಚಿತ್ರ.

ಕೆಲವರು ಲಂಡನ್ ಬ್ರಿಡ್ಜ್ ಬಳಿ ಟನಲ್ ಕಾಮಗಾರಿ ಮಾಡುವಾಗ ಸ್ಪೋಟ ಮಾಡಿದ ಶಬ್ದ ಎಂದು ಹೇಳಿದರೆ, ಇನ್ನು ಕೆಲವರು ನೌಕಾನೆಲೆ ವಿಮಾನ ಹಾರಟವಾಗುತ್ತಿದ್ದು ಮಿಸ್ ಫೈರ್ ಆಗಿದ್ದರಿಂದ ಶಬ್ದ ಕೇಳಿಬಂದಿದೆ ಎಂದು ಹೇಳಿದ್ದಾರೆ.

ಇನ್ನು ನೌಕಾ ನೆಲೆಯಲ್ಲಿ ಸಹ ಸಮರಾಭ್ಯಾಸ ಮಾಡುತಿದ್ದು ಇದರ ಶಬ್ದ ಎಂದರೇ ಇನ್ನು ಕೆಲವರು ನೌಕಾ ನೆಲೆಯ ಶಸ್ತ್ರ ಗಾರದಲ್ಲಿ ಬಾಂಬ್ ಸ್ಪೋಟಗೊಂಡಿದೆ ಎನ್ನುತಿದ್ದಾರೆ.

ಆದರೆ ಶಬ್ದ ಕೇಳಿಬಂದಿದ್ದು ಎಲ್ಲಿಂದ ಎನ್ನುವ ಮಾಹಿತಿ ಮಾತ್ರ ಯಾರಿಗೂ ತಿಳಿದಿಲ್ಲ,ಆದರೇ ಸ್ಪೋಟದ ತೀವ್ರತೆಗೆ ಭೂಮಿ ಸಹ ಕಂಪಿಸಿದ್ದು ಜನ ಆತಂಕಕ್ಕೆ ಕಾರಣವಾಗಿದೆ.

ಪೋಲಿಸರಿಗೂ ಮಾಹಿತಿ ಇಲ್ಲ!

ಈ ಕುರಿತು ಪೋಲಿಸ್ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಕೇಳಿದಾಗ ಅವರ ಬಳಿ ಸಹ ಯಾವುದೇ ಉತ್ತರ ವಿರಲಿಲ್ಲ.
ಇನ್ನು ಚತುಷ್ಪತ ರಸ್ತೆ ಕಾಮಗಾರಿಗಾಗಿ ಲಂಡನ್ ಬಿಡ್ಜ್ ಬಳಿ ಸುರಂಗ ತೋಡುತಿದ್ದು ಇಲ್ಲಿ ಸ್ಪೋಟ ಮಾಡಲಾಗಿದೆಯೇ ಎಂಬ ಅನುಮಾನ ಬಂದರೂ ಸ್ಪೋಟ ಮಾಡುವ ಮುಂಚೆ ಇಲಾಖೆಗೆ ಮಾಹಿತಿ ನೀಡಿ ರಸ್ತೆ ಸಂಚಾರವನ್ನು ಬಂದ್ ಮಾಡುತ್ತಾರೆ .ಆದರೇ ಐ.ಆರ್.ಬಿ ಕಂಪನಿ ಸಹ ಇಂದು ಸ್ಪೋಟ ನಡೆಸಿಲ್ಲ .ಹೀಗಾಗಿ ಸಾಕಷ್ಟು ಅನುಮಾನಗಳು ಮೂಡುತಿದ್ದು ನೌಕಾ ನೆಲೆಯಲ್ಲಿನ ಶಸ್ತ್ರಗಾರದಲ್ಲಿ ತೊಂದರೆಯಾಗಿದೆಯೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುವಂತೆ ಮಾಡಿದೆ.




One thought on “ಕಾರವಾರ ನಗರಿಗರದಲ್ಲಿ ಆತಂಕ ತಂತು ಬಯಂಕರ ಸದ್ದು! ಬಯಂಕರ ಸದ್ದಿಗೆ ಕಂಪಿಸಿದ ನೆಲ!

Leave a Reply

Your email address will not be published. Required fields are marked *