BREAKING NEWS
Search

ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಸ್ಥಳಗಳಲ್ಲಿ ಕರೋನಾ ವೈರೆಸ್ ಪತ್ತೆಗೆ ಥರ್ಮಲ್ ಸ್ಕ್ಯಾನರ್ ಬಳಕೆಗೆ ಮುಂದಾದ ಆರೋಗ್ಯ ಇಲಾಖೆ-ಏನಿದು ಥರ್ಮಲ್ ಸ್ಕ್ಯಾನರ್?

1516

ಕಾರವಾರ :- ಕರೋನಾ ವೈರೆಸ್ ಆತಂಕ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ಮುಂಜಾಗ್ರತಾ ಕ್ರಮ ವಹಿಸಿದೆ.

ಜಿಲ್ಲೆಗೆ ನೆರೆಯ ಗೋವಾ ಹಾಗೂ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಕರಾವಳಿ ಹಾಗೂ ಮಲೆನಾಡು ಭಾಗಗಳಿಗೆ ಪ್ರವಾಸಕ್ಕೆ ಬರುತ್ತಾರೆ.ಇದರ ಜೊತೆಗೆ ಕಾರವಾರದ ವಾಣಿಜ್ಯ ಬಂದರುಗಳಿಗೆ ವಿದೇಶದ ಹಡಗಗುಗಳು ಬರುವುದರಿಂದಾಗಿ ಜಿಲ್ಲೆಯ ಪ್ರಮುಖ ಸ್ಥಳಗಳಿಗೆ ಥರ್ಮಲ್ ಸ್ಕ್ಯಾನರ್ ನನ್ನು ಆರೋಗ್ಯ ಇಲಾಖೆ ನೀಡಿದೆ.

ಎಲ್ಲೆಲ್ಲಿ ಥರ್ಮಲ್ ಸ್ಕ್ಯಾನರ್ :-


ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಸ್ಥಳವಾದ ಕಾರವಾರ,ಗೋಕರ್ಣ,ಮುರಡೇಶ್ವರ,ದಾಂಡೇಲಿ,ಶಿರಸಿ,ಮುಂಡಗೋಡಿನ ಟಿಬೇಟಿಯನ್ ಕಾಲೋನಿಗೆ ಪ್ರಥಮ ಹಂತದಲ್ಲಿ ಎಂಟು ಥರ್ಮಲ್ ಸ್ಕ್ಯಾನರ್ ನೀಡಿದೆ. ಇನ್ನೆರೆಡು ದಿನದಲ್ಲಿ ಜಿಲ್ಲೆಯ ಪ್ರತಿ ತಾಲೂಕಿಗೂ ಆರೋಗ್ಯ ಇಲಾಖೆ ನೀಡಲಿದೆ.

ಏನಿದು ಥರ್ಮಲ್ ಸ್ಕ್ಯಾನರ್?


ಥರ್ಮಲ್ ಸ್ಕ್ಯಾನರ್ ಮನುಷ್ಯನ ದೇಹದ ತಾಪಮಾನವನ್ನು ಅಳೆಯುವ ಸಾಧನ.
ಪ್ರತಿ ವ್ಯಕ್ತಿಗೆ ಇಂತಿಷ್ಟು ಎಂದು ನಿಗದಿಮಾಡಿದ ದೇಹದ ತಾಪಮಾನ ಇರಬೇಕಾಗುತ್ತದೆ.
ಯಾವ ವ್ಯಕ್ತಿಗೆ ಈ ಸ್ಕ್ಯಾನರ್ ನನ್ನು ಎದುರು ಹಿಡಿದು ಸ್ಕ್ಯಾನ್ ಮಾಡಲಾಗುತ್ತದೆಯೋ ಆ ವ್ಯಕ್ತಿಯ ದೇಹದ ಉಷ್ಣತೆ ಅಧಿಕವಾಗಿದ್ದರೆ ಆತನನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲು ಇದು ಸಹಾಯಕವಾಗುತ್ತದೆ.

ಥರ್ಮಲ್ ಸ್ಕ್ಯಾನರ್ ಏಕೆ?


ಕರೋನಾ ವೈರೆಸ್ ಇರುವವರಿಗೆ ಜ್ವರ ,ಕೆಮ್ಮು ಪ್ರಮುಖ ಲಕ್ಷಣಗಳು ಇರುತ್ತದೆ.ಇಂತಹ ಸಂದರ್ಭದಲ್ಲಿ ಹಲವರು ತಮಗೆ ಜ್ವರ ಇರುವ ಕುರಿತು ಮಾಹಿತಿ ಕೊಡಲು ಹಿಂಜರಿಯುತ್ತಾರೆ. ಇದಲ್ಲದೇ ಈಗಿರುವ ಹಳೆಯ ತಂತ್ರಜ್ಞಾನ ಬಳಸಿ ಸಾವಿರಾರು ಜನರನ್ನು ಪರೀಕ್ಷೆ ಮಾಡಲು ವೈದ್ಯರಿಗೆ ಕಷ್ಟಸಾಧ್ಯ .ಹೀಗಾಗಿ ತಕ್ಷಣ ಪರೀಕ್ಷಿಸಲು ಜ್ವರದ ತೀರ್ವತೆ ತಿಳಿದುಕೊಳ್ಳಲು ಈ ಸಾಧನ ತಕ್ಷಣದಲ್ಲಿ ಉಪಯೋಗಕ್ಕೆ ಬರುತ್ತದೆ.ಈ ಕಾರಣದಿಂದ ಇದರ ಬಳಕೆ ವೈದ್ಯರಿಗೆ ರೋಗಿಯ ದೇಹಸ್ಥಿತಿ ಅರಿಯಲು ಸಹಕಾರಿಯಾಗುತ್ತದೆ.
ಜಿಲ್ಲೆಯ ಗೋಕರ್ಣ ದಲ್ಲಿ ಒಂದರಲ್ಲಿಯೇ ಆರೋಗ್ಯ ಇಲಾಖೆ ಒಂದು ದಿನದಲ್ಲಿ ದೇಶ ವಿದೇಶದ ಏಳು ಸಾವಿರ ಜನರನ್ನು ಪರೀಕ್ಷೆ ಮಾಡಿತ್ತು. ಇದು ಈ ಸಾಧನದಲ್ಲಿಯೇ ಅತೀ ಬೇಗ ಜ್ವರ ಪತ್ತೆಹಚ್ಚುವಲ್ಲಿ ಸಹಕಾರಿಯಾಗಿತ್ತು.

ಜಿಲ್ಲೆಯಲ್ಲಿ ಕಟ್ಟೆಚ್ಚರ ಮುಂದುವರಿಕೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೂ ವೈದ್ಯರ ತಂಡ ರಚಿಸಿ ಸರ್ವೆ ಕಾರ್ಯ ಮಾಡಲಾಗುತ್ತಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಹೋಟೆಲ್ ,ರೆಸಾರ್ಟ ಗಳಲ್ಲಿ ನೊಂದಾಯಿತ ಅಥಿತಿಗಳ ಮಾಹಿತಿ ಮೇಲೆ ಸರ್ವೆ ಕಾರ್ಯ ಮಾಡಲಾಗುತಿದ್ದು ಇದರ ಜೊತೆಗೆ ವಿದೇಶಿ ಪ್ರವಾಸಿಗರ ಮಾಹಿತಿಯನ್ನು ಪೊಲೀಸ್ ಇಲಾಖೆ ಮೂಲಕ ಪಡೆದು ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.
ಇನ್ನು ಸದ್ಯ ಈವರೆಗೂ ಜಿಲ್ಲೆಯಲ್ಲಿ ಕರೋನಾ ವೈರೆಸ್ ಸೊಂಕಿತರ ಪತ್ತೆಯಾಗಿಲ್ಲ ,ನಿನ್ನೆ ಕೂಡ ವಿದೇಶಕ್ಕೆ ಹೋಗಿಬಂದ ಹಾಗೂ ವಿದೇಶಿಗರ 62 ಜನರನ್ನು ಪರೀಕ್ಷೆ ಮಾಡಲಾಗಿದೆ.ಯಾರಲ್ಲೂ ಯಾವುದೇ ತೊಂದರೆ ಇಲ್ಲ‌ಆದರೂ ಜಿಲ್ಲೆಯ ಜನರು ಎಚ್ಚರಿಕೆಯಿಂದ ಇರಬೇಕು.ಸ್ವಚ್ಚತೆ ಜೊತೆಗೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು.ಇಲಾಖೆಯಲ್ಲಿ ವೈರೆಸ್ ನೊಂದಿಗೆ ಹೋರಾಡಲು ಬೇಕಾದ ಎಲ್ಲಾ ಸಾಧನಗಳು ಇವೆ,ಮಾಸ್ಕ್ ಗಳು ,ಔಷಧಿಗಳು ಸಂಗ್ರಹವಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕಕುಮಾರ್ ಮಾಹಿತಿ ನೀಡಿದ್ದಾರೆ.




One thought on “ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಸ್ಥಳಗಳಲ್ಲಿ ಕರೋನಾ ವೈರೆಸ್ ಪತ್ತೆಗೆ ಥರ್ಮಲ್ ಸ್ಕ್ಯಾನರ್ ಬಳಕೆಗೆ ಮುಂದಾದ ಆರೋಗ್ಯ ಇಲಾಖೆ-ಏನಿದು ಥರ್ಮಲ್ ಸ್ಕ್ಯಾನರ್?

Leave a Reply

Your email address will not be published. Required fields are marked *