ಕರೋನಾ ದಿಂದ ಕಾರವಾರದ ವ್ಯಕ್ತಿ ಸಾವು!

2584

ಕಾರವಾರ :- ಕೊರೊನಾದಿಂದಾಗಿ ಕಾರವಾರ ಮೂಲದ ನಿವಾಸಿ ಕುವೈತ್ ನಲ್ಲಿ ಸಾವು ಘಟನೆ ನಡೆದಿದೆ.ಕಾರವಾರದ ಸದಾಶಿವಗಡ ನಿವಾಸಿ
ಸುಶಾಂತ್ ಕಡವಾಡಕ್ಕರ್ (40) ಸಾವಿಗೀಡಾದ ದುರ್ದೈವಿಯಾಗಿದ್ದಾರೆ.9 ತಿಂಗಳ ಹಿಂದೆ ಕುವೈತ್ ಗೆ ತೆರಳಿದ್ದ ಸುಶಾಂತ್ ಕಡವಾಡಕರ್ ಕೆಲವು ದಿನಗಳ ಹಿಂದೆ ಜ್ವರದ ಹಿನ್ನೆಲೆಯಲ್ಲಿ ಕುವೈತ್ ನ ಆಸ್ಪತ್ರೆಯಲ್ಲಿ ದಾಖಲಾಗಿದ್ರು.

ಸಾವುಕಂಡ ವ್ಯಕ್ತಿ.

ಕುವೈತ್ ನಲ್ಲಿ ಇವರ ಗಂಟಲು ದ್ರವ ಪರೀಕ್ಷೆ ಸಹ ನಡೆಸಿದ್ದು ಈ ವೇಳೆ ಕರೋನಾ ಸೊಂಕು ಇರುವುದು ಪತ್ತೆಯಾಗಿದೆ.ಕೆಲವು ದಿನಗಳಿಂದ ಕುವೈತ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಈತನಿಗೆ ತೀವ್ರ ಉಸಿರಾಟದ ಸಮಸ್ಯೆ ಉಲ್ಭಣಿಸಿದ್ದು ನಂತರ ಸಾವುಕಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಆದರೇ ಜಿಲ್ಲಾಡಳಿತಕ್ಕೆ ಭಾರತೀಯ ಎಂಬಾಸಿ ಇಂದ ಮಾಹಿತಿ ಬರಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ