BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ವೈರೆಸ್ ಪತ್ತೆಯಾಗಿಲ್ಲ-ಜಿಲ್ಲೆಯಲ್ಲಿ ತೆಗೆದುಕೊಂಡ ಕ್ರಮವೇನು ಗೊತ್ತಾ?

838

ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಸಾಂಕ್ರಾಮಿಕ ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲೇ ಕ್ರಮ ಕೈಗೊಳ್ಳಲಾಗಿದ್ದು ಮಾರ್ಚ್ 4 ರಂದೇ ಸಭೆ ನಡೆಸಿ ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿ ಹಾಗೂ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಆರೋಗ್ಯ ಇಲಾಖೆಯು ತಂಡ ರಚನೆ ಮಾಡಿ ಮನೆ ಭೇಟಿ ಮಾಡುವ ಮೂಲಕ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುತ್ತದೆ , ಈ ವರೆಗೂ ಕೊರೋನಾ ವೈರೆಸ್ ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ ಎಂದು ಕಾರವಾರದಲ್ಲಿ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಇಂದು ಸಂಜೆ ವೇಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾ ಗೋಷ್ಟಿ ನಡೆಸಿದ ಅವರು ಕರೋನಾ ವೈರಸ್ ಕುರಿತು ಜನರು ಆತಂಕ ಪಡಬೇಕಾಗಿಲ್ಲ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಇದನ್ನು ನಿಯಂತ್ರಿಸಬಹುದಾಗಿದೆ. ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಂಭವವಿರುವುದರಿಂದ ಕೆಮ್ಮು, ಜ್ವರದಂತಹ ಲಕ್ಷಣಗಳು ಬಂದಲ್ಲಿ ಇನ್ನೊಬ್ಬರಿಗಾಗಿ ಹೋಮ್ ಕೊರೊಂಟೈನಾದಲ್ಲಿ ಇರಬೇಕಾಗುವುದೆಂದರು.

ವಿದೇಶದಿಂದ ಬಂದವರ ಅಂಕಿ-ಸಂಖ್ಯೆಗಳನ್ನು ಸಂಗ್ರಹಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡು ಜಿಲ್ಲಾಡಳಿತವು ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ ಇಲ್ಲಿಯವರೆಗೆ ವಿದೇಶದಿಂದ ಬಂದ 240 ಜನರನ್ನು ಪರೀಕ್ಷೆ ಮಾಡಲಾಗಿದ್ದು 10 ಜನರು 28. ದಿನ ಪೂರೈಸಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ವೈರಸ್ ಲಕ್ಷಣಗಳು ಕಂಡಲ್ಲಿ ಹೋಮ್ ವಾಲಂಟೈನ್ ಮಾಡುವುದಿಲ್ಲ ಬದಲಿಗೆ ನಮ್ಮಲ್ಲೇ ಇಟ್ಟುಕೊಳ್ಳುತ್ತೇವೆ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದರೆ ಕ್ರಮ

ಜನರಲ್ಲಿ ಅನಗತ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕರೋನಾ ವೈರಸ್ ಬಗ್ಗೆ ಸುಳ್ಳು ವದಂತಿಗಳು ಹರಿದಾಡುತ್ತಿರುವುದು ಕಂಡುಬರುತ್ತಿದೆ. ಕುಮಟಾ ,ಹೊನ್ನಾವರದಲ್ಲಿ ವೈರೆಸ್ ಪತ್ತೆ ಎಂದು ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದು ಜನರಲ್ಲಿ ಭಯ ಹುಟ್ಟಿಸುವಂತೆ ಮಾಡಿತ್ತು,ಸುಳ್ಳು ಸುದ್ದಿ ಹರಡುವ ಕುರಿತು ಪೊಲೀಸ್ ಇಲಾಖೆ ಮಾಹಿತಿ ನೀಡಲಾಗಿದ್ದು ಮುಂದಿನ ಕ್ರಮಗಳಿಗಾಗಿ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದರು.

ಜಿಲ್ಲಾ ಪಂಚಾಯ್ತಿ ಸಿ.ಇ.ಓ ಆರ್ ರೋಷನ್ ರವರು ಮಾತನಾಡಿ ಇನ್ನು 20 ದಿನಗಳಲ್ಲಿ ನಾವು ಓವರ್ ಯಾಕ್ಟಿವ್ ಕ್ಯಾಪಿಯನ್ ಮಾಡುತಿದ್ದೇವೆ ಜಿಲ್ಲೆಯ ತಾಲೂಕು,ಗ್ರಾಪ್ರಂ ,ನಗರ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು.
ನಮ್ಮಲ್ಲಿ ಸ್ವ ರಕ್ಷಣಾ ಪಡಿಕರಗಳು 491 ಇವೆ,
20000 ತ್ರಿಬಲ್ ಲೇಯರ್ ಮಾಸ್ಕ ,
870 ಎನ್ ನೈಟೀನ್ ಮಾಸ್ಕ್ , ಜಿಲ್ಲಾ ಕೇಂದ್ರದ ಆಸ್ಪತ್ರೆಯಲ್ಲಿ 10 ಬೆಡ್ ಹಾಸಿಗೆ ,ನೇವಲ್ ಬೇಸ್ ನಲ್ಲಿ 23 ಹಾಸಿಗೆಯ ಬೆಡ್ ಗಳು ,ಹೆಚ್ಚುವರಿಯಾಗಿ 100 ಬೆಡ್ ಸಾಮರ್ಥ್ಯ ಹೆಚ್ಚಿಸಿಕೊಳ್ಳುವಷ್ಟಿದೆ. ಸರ್ಕಾರಿ ,ಖಾಸಗಿ ಸೇರಿ 14 ವೆಂಟಿಲೇಟರ್ ಗಳ ವ್ಯವಸ್ತೆ ಮಾಡಲಾಗಿದೆ. ಮಂಕಿ,ಕುಮಟಾ ದಲ್ಲಿ ಐಸೋಲೇಷನ್ ಕೇಂದ್ರ ಮಾಡಲಾಗಿದೆ.
ಶಿರಸಿ,ಮುರಡೇಶ್ವರ ದಲ್ಲಿ ಎರಡು ಖಾಸಗಿ ಆಸ್ಪತ್ರೆಯಿಂದ ಸಹಕಾರ ನೀಡುತಿದ್ದಾರೆ.
11 ಬಸ್ ಸ್ಟಾಂಡ್ 4 ರೈಲ್ವೇ ನಿಲ್ದಾಣಗಳಲ್ಲಿ ಹೆಲ್ಫ್ ಡೆಸ್ಕ್ ಹಾಗೂ 22 ಥರ್ಮಲ್ ಸ್ಕ್ಯಾನರ್ ಗಳನ್ನು ನೀಡಲಾಗಿದೆ,ಇನ್ನೂ ಮೂರು ದಿನಗಳಲ್ಲಿ ಹದಿಮೂರು ಸ್ಕ್ಯಾನರ್ ಗಳನ್ನು ನೀಡಲಾಗುವುದು ಎಂದ ಅವರು ಕಾರವಾರದಲ್ಲಿ ಭಾನುವಾರ ಸಂತೆಯನ್ನು ಒಂದೇ ಕಡೆಯಲ್ಲಿ ಮಾಡುವುದಿಲ್ಲ,ಬದಲಾಗಿ ಅಂಗಡಿಗಳನ್ನು ಚದುರಿಸಲಾಗುತ್ತದೆ,ಇದೇ ಮಾದರಿಯಲ್ಲಿ ಯಲ್ಲಾ ಸಂತೆಯನ್ನು ಮಾಡಲಾಗುತ್ತದೆ.


ಸೂಪರ್ ಮಾರ್ಕೇಟ್ ನಲ್ಲಿ ಕಡ್ಡಾಯವಾಗಿ ಹ್ಯಾಂಡ್ ಸ್ಯಾನಿಟರಿ ಇಟ್ಟುಕೊಳ್ಳಬೇಕು,ಪ್ರತಿ ಸರ್ಕಾರಿ ಕಚೇರಿಯಲ್ಲಿ ಹ್ಯಾಂಡ್ ವಾಷ್ ಸ್ಯಾನಿಟೈಜರ್.ಹಾಟ್ ವಾಟರ್ ವ್ಯವಸ್ಥೆ ಮಾಡಿಕೊಳ್ಳಬೇಕು ,ಎರಡು ತಾಸಿಗೆ ಒಮ್ಮೆ ಸರ್ಕಾರಿ ಅಧಿಕಾರಿ ಹ್ಯಾಂಡ್ ವಾಷ್ ಮಾಡಿಕೊಳ್ಳಬೇಕು.ಸರ್ಕಾರಿ ಕಚೇರಿಗೆ ಬರುವ ಸಾರ್ವಜನಿಕರು ಅತೀ ಮುಖ್ಯವಾದ ಕೆಲಸವಿದ್ದಲ್ಲಿ ಮಾತ್ರ ಬರಬಹುದು.ಹಾಗೆಯೇ ಜಿಲ್ಲೆಯಲ್ಲಿ ಯಾವುದೇ ಜಾತ್ರೆ ,ಸಭೆ ಮಾಡಲು ಅನುಮತಿ ಇರುವುದಿಲ್ಲ. ದೇವಸ್ಥಾನಗಳಲ್ಲಿ ಧಾರ್ಮಿಕ ಭಾವನೆಗೆ ದಕ್ಕೆಯಾಗದಂತೆ ಪೂಜೆ ಮಾಡಲು ಅವಕಾಶಗಳಿರುತ್ತದೆ.ಆದರೇ 20 ಜನ ಗುಂಪು ಸೇರಬಾರದು.ಇನ್ನು 20 ದಿನಗಳ ವರೆಗೆ ಈ ರೀತಿ ನಿಬಂದನೆಗಳು ಇರುತ್ತವೆ.ಯಾರಿಗೇ ತೊಂದರೆಗಳಾದಲ್ಲಿ ಅಥವಾ ಸಹಾಯ ಬೇಕಿದ್ದಲ್ಲಿ
104 ಹೆಲ್ಪ ಲೈನ್ ಗೆ ಕರೆ ಮಾಡಿ ಪಡೆಯಬಹುದಾಗಿದೆ.ಜಿಲ್ಲೆಗೆ ಬರುವ ಜನರಲ್ಲಿ 8ನೇ ತಾರೀಕಿನ ನಂತರ ಹೆಚ್ಚಿನ ನಿಗಾ ಇಡಲಾಗುತ್ತದೆ ಎಂದರು.

ಬಂದರಿನಲ್ಲಿ ಕಟ್ಟೆಚ್ಚರ

ಬಂದರಿನಲ್ಲಿ ವಿದೇಶದ 112 ಜನ ತಪಾಸಣೆ ಮಾಡಲಾಗಿದ್ದು ಹೊರ ದೇಶದ ಶಿಪ್ ಗಳು ಕಾರವಾರದ ಬಂದರಿಗೆ ಬಂದು ಲಂಗುರು ಹಾಕಿ ನಿಲ್ಲಬಹುದು ಆದರೇ ಬಂದರಿನ ಹೊರಕ್ಕೆ ಬರುವಂತಿಲ್ಲ ಎಂದು ಜಿಲ್ಲಾಡಳಿತ ಸೂಚನೆ ನೀಟಿದೆ.
Leave a Reply

Your email address will not be published. Required fields are marked *