BREAKING NEWS
Search

ಜ.16 ಕ್ಕೆ ಕಾರವಾರ ಬಂದ್! ನಾಳೆಯೂ ಬಂದ್ ?

1533

ಕಾರವಾರ:- ವಾಣಿಜ್ಯ ಬಂದರು ವಿಸ್ತರಣೆ ಯೋಜನೆಗೆ ವಿರೋಧ ಹಿನ್ನೆಲೆಯಲ್ಲಿ
ಜ.16ರಂದು ಕಾರವಾರ ಸಂಪೂರ್ಣ ಬಂದ್ ಮಾಡಲು ಮೀನುಗಾರರು ಹಾಗೂ ವಿವಿಧ ಸಂಘಟನೆಗಳು ನಿರ್ಧಾರ ಮಾಡಿದ್ದು ಕಾರವಾರ ಬಂದ್‌ ನಡೆಸಲು ಮೀನುಗಾರ ಮುಖಂಡರು ಕರೆ ನೀಡಿದ್ದಾರೆ.

ನಾಳೆ ಮೀನುಗಾರಿಕೆ ವ್ಯವಹಾರ ಸ್ಥಗಿತಗೊಳಿಸಿ ಪ್ರತಿಭಟನೆಯನ್ನು ಮುಂದುವರಿಸಲು ತೀರ್ಮಾನಿಸಿದ್ದು ಈ ವೇಳೆ ವರ್ತಕರು,ವ್ಯಾಪಾರಸ್ತರು ಸ್ವಯಂ ಪ್ರೇರಿತ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ
ಪ್ರತಿಭಟನೆಯಲ್ಲಿ ಭಾಗವಹಿಸಲಿವೆ.

ನಾಳೆ ಬಂದ್ ಗೆ ಅನುಮತಿ ಇಲ್ಲ- ಎಸ್.ಪಿ.

ಮೀನುಗಾರರ ಪ್ರತಿಭಟನೆಗೆ ಮಾತ್ರ ಅವಕಾಶವಿದ್ದು ಬಂದ್ ಕರೆಗೆ ಯಾವುದೇ ಅನುಮತಿಯಿಲ್ಲವೆಂದ ಎಸ್‌ಪಿ ಶಿವಪ್ರಕಾಶ್ ದೇವರಾಜ್ ಸ್ಪಷ್ಟ ಪಡಿಸಿದ್ದು

ಮೀನುಗಾರರು ಪ್ರತಿಭಟನೆ ನಡೆಸಲು ಮಾತ್ರ ಅವಕಾಶ ನೀಡಲಾಗುವುದು ಆದರೆ, ಯಾವುದೇ ಕಾರಣಕ್ಕೂ ಬಂದ್ ನಡೆಸಲು ಅನುಮತಿ ನೀಡಲಾಗುವುದಿಲ್ಲ.

ಒತ್ತಾಯಪೂರ್ವಕ ಬಂದ್ ನಡೆಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು
ಉತ್ತರಕನ್ನಡ‌ ಜಿಲ್ಲಾ ಎಸ್‌ಪಿ ಶಿವಪ್ರಕಾಶ್ ದೇವರಾಜ್ ಎಚ್ಚರಿಕೆ ನೀಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.




Leave a Reply

Your email address will not be published. Required fields are marked *