ಸಾಮೂಹಿಕ ಮತ್ಸ್ಯ ಭೇಟೆ ಕಾರವಾರಿಗರಲ್ಲೊಂದು ವಿಶಿಷ್ಟ ಹಬ್ಬ!

213

ಕಾರವಾರ:-ಕರಾವಳಿ ಎಂದ್ರೆ ಮೀನಿಗೆ ಪ್ರಸಿದ್ಧ.ಅದರಲ್ಲೂ ಸಸ್ಯ ಸಂಬೃದ್ಧದ ಜೊತೆ ನದಿಗಳು ಸಂಗಮವಾಗುವ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ನೀರಿನಲ್ಲಿ ಎಲ್ಲಿ ಬಲೆ ಹಾಕಿದ್ರು ಮೀನುಗಳೆ.ಆದ್ರೆ ಈ ಊರಿನಲ್ಲಿ ಮಾತ್ರ ಗ್ರಾಮ ದೇವರಿಗಾಗಿ ವರ್ಷದಲ್ಲಿ ಒಂದು ಬಾರಿ ಮಾತ್ರ ಇಡೀ ಊರಿನ ಜನ ಒಟ್ಟಾಗಿಸೇರಿ ಮೀನು ಹಿಡಿದು, ಹಿಡಿದ ಮೀನನ್ನು ಮಾರುವ ಮೂಲಕ ದೇವರಿಗೆ ಹಣ ಅರ್ಪಿಸುವ ವಿಶಿಷ್ಟ ಸಂಪ್ರದಾಯ ನಡೆಸಿಕೊಂಡುಬಂದಿದ್ದಾರೆ.ವಿಶಿಷ್ಟ ಸಂಪ್ರದಾಯದ ಆ ಊರು ಯಾವುದು ಅಂತೀರಾ ಹಾಗಿದ್ರೆ ಈ ಸುದ್ದಿ ಓದಿ

ಆ ಊರಿನಲ್ಲಿ ಎಲ್ಲೆಂದರಲ್ಲಿ ಕೈಯಲ್ಲಿ ಬಲೆ ಹಿಡಿದು ಒಂದೆ ಸವನೆ ಊರಿನ ಜನ ಗುಂಪುಗುಂಪಾಗಿ ನೀರಿಗಿಳಿಯುತ್ತಿದ್ದರು,ಅಲ್ಲಿ ಮಹಿಳೆಯರು ಪುರುಷರು ಎನ್ನುವ ಜಾತಿ ಮತ ಎಂಬ ಬೇದಭಾವವಿರಲಿಲ್ಲ.ಅರೇ ಇದೇನಪ್ಪ ಇಷ್ಟೊಂದು ಜನ ಮೀನು ಹಿಡಿಯಲು ಹೊರಟಿದ್ದಾರೆ, ಇವತ್ತೇನಾದ್ರು ಮೀನಿನ ಸಂತೆಯೆ ಎಂದು ಈ ಊರಿನ ಮುಂದೆ ಹೋಗುತಿದ್ದ ದಾರಿಹೋಕರು ಮಾತನಾಡಿಕೊಳ್ಳುವಷ್ಟರ ಮಟ್ಟಿಗೆ ಜನರ ದಂಡು ಸೇರಿತ್ತು.

ಹೌದು ಈ ಅಪರೂಪದ ಸಾಮೂಹಿಕ ಮತ್ಸ್ಯ ಭೇಟೆ ಕಂಡುಬಂದದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಾಳಿ ಹಿನ್ನೀರಿನ ಕಿನ್ನರ ಗ್ರಾಮದಲ್ಲಿ.ವರ್ಷಕ್ಕೆ ಒಂದು ಬಾರಿ ಇಲ್ಲಿನ ಗ್ರಾಮಸ್ಥರು ಗ್ರಾಮದೇವತೆ ಮಹಾದೇವನಿಗಾಗಿ ಪಕ್ಕಾ ಮೀನುಗಾರರಾಗುತ್ತಾರೆ ಕಳೆದ ನೂರಾರು ವರ್ಷದಿಂದ ಉಳಿಸಿಕೊಂಡು ಬಂದ ಪದ್ದತಿಯಂತೆ ಇಡೀ ಗ್ರಾಮದವರು ಸಾಮೂಹಿಕ ಮತ್ಸ್ಯ ಬೇಟೆ ಮಾಡುವ ಮೂಲಕ ತರತರದ ಜಾತಿಯ ಮೀನುಗಳನ್ನು ಹಿಡಿದು ಸಂತಸಪಟ್ಟರು.

ಹಿಡಿದ ಮೀನಿನಲ್ಲಿ ಭಾಗ ಮಾಡುವ ಮೂಲಕ ಒಂದು ಭಾಗವನ್ನು ಮಾರಾಟಮಾಡಿ ಒಂದ ಹಣವನ್ನು ಗ್ರಾಮದೇವರಿಗೆ ಒಪ್ಪಿಸಿದ್ರು. ಇನ್ನು ಈ ಸಾಮೂಹಿಕ ಮತ್ಸ್ಯ ಬೇಟೆ ನೋಡಲು ಕಾರವಾರ ಸೇರಿದಂತೆ ಸುತ್ತಮುತ್ತಲಿನಿಂದ ಜನರು ಆಗಮಿಸಿ ಸಂತಸ ಪಟ್ಟರು.

ಈ ಪದ್ದತಿ ಅನುಸರಿಸಿಕೊಂಡು ಬರಲು ಇಲ್ಲಿನ ಗ್ರಾಮ ದೇವತೆಯ ಆಶಿರ್ವಾದವೂ ಕೂಡಾ ಇದೆ ಎನ್ನುವುದು ಇಲ್ಲಿನವರ ನಂಬಿಕೆ.ಹೀಗಾಗಿ ಪ್ರತಿ ವರ್ಷ ಗ್ರಾಮ ದೇವತೆಯ ಹೆಸರಿಲ್ಲಿ ಕಾಳಿನದಿ ಹರಿಯುವ ಹಿನ್ನೀರಿನ ಭಾಗದಲ್ಲಿ ಒಡ್ಡು ಹಾಕುತ್ತಾರೆ, ಹೇರಳ ಕಾಂಡಲ ಗಿಡ ಇರುವುದರಿಂದ ಅಪರೂಪದ ಮೀನುಗಳು ಸಹ ಈ ಭಾಗದಲ್ಲಿ ಆಶ್ರಯ ಪಡೆದುಕೊಳ್ಳುತ್ತವೆ.ಇನ್ನು ಒಂದು ವರ್ಷದವರೆಗೆ ಈ ಭಾಗದಲ್ಲಿ ಯಾರೂ ಕೂಡ ಮೀನುಗಾರಿಕೆ ನಡೆಸುವಂತಿಲ್ಲ,ಹೀಗಾಗಿ ಮೀನುಗಳು ಸಂಬೃದ್ಧವಾಗಿ ಈ ಭಾಗದಲ್ಲೆ ಬೆಳೆಯುತ್ತವೆ.ನಂತರ ಈ ಊರಿನ ಜನರು ಸಾಮೂಹಿಕವಾಗಿ ನೀರಿಗಿಳಿದು ಅಪರೂಪದ ಮೀನುಗಳನ್ನು ಭೇಡೆಯಾಡುವುದು ತಲತಲಾಂತರದಿಂದ ನಡೆದುಕೊಂಡು ಬಂದಿದ್ದು ಇಂದಿಗೂ ಕೂಡ ಆಚರಣೆಯಲ್ಲಿದ್ದು ಇಡೀ ಗ್ರಾಮದವರು ಹಬ್ಬವನ್ನಾಗಿ ಆಚರಿಸಿ ಇಡೀ ದಿನ ಮೀನುಹಿಡಿದು ಸಂಭ್ರಮಪಡುತ್ತಾರೆ.

ಸುಮಾರು ನೂರಾರು ವರ್ಷದಿಂದ ಆಚರಣೆ ಮಾಡಿಕೊಂಡು ಬಂದಿರುವ ಮೀನಿನ ಹಬ್ಬ ಇಂದು ಈಭಾಗದಲ್ಲಿ ನಡೆಯುವ ಮೂಲಕ ಈ ಊರಿನವರಲ್ಲದೇ ಹೊರ ಊರಿನ ಜನರು ಕೂಡ ಇಲ್ಲಿಗೆ ಬಂದು ಮೀನು ಹಿಡಿದು ಅನುಭವ ಪಡೆದು ಸಂಭ್ರಮ ಪಟ್ಟರು.ಇಂದಿನ ಕಾಲದಲ್ಲಿಯೂ ಜಾತಿ ಧರ್ಮವಿಲ್ಲದೇ ಎಲ್ಲರೂ ಸಾಮೂಹಿಕವಾಗಿ ಮತ್ಸ್ಯ ಬೇಟೆ ಮಾಡುವ ಮೂಲಕ ತಾವೆಲ್ಲ ಒಂದು ಎನ್ನುವ ಮನುಜ ಮತವನ್ನು ಸಾರುವ ಈ ಮೀನಿನ ಹಬ್ಬ ಸಮಾಜಕ್ಕೆ ಮಾದರಿಯಾಗಿರುವುದಂತು ಸತ್ಯ.
Leave a Reply

Your email address will not be published. Required fields are marked *

error: Content is protected !!