ಕಾರವಾರ :- ಲಾಕ್ ಡೌನ್ ನಡುವೆಯೂ ಕಾರವಾರ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ಲೈಟ್ ಫಿಶಿಂಗ್ ಮಾಡುತ್ತಿದ್ದ ಗೋವಾದ ಎರಡು ಬೋಟ್ ಗಳಲ್ಲಿದ್ದ 28 ಕಾರ್ಮಿಕರನ್ನು ಹಾಗೂ ಬೋಟ್ ಅನ್ನು ಕೋಷ್ಟ್ ಗಾರ್ಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೋವಾದ ಡ್ರ್ಯಾಗನ್ ಸೀಹೆಸರಿನ ಬೋಟ್ನಲ್ಲಿ ಒಡಿಶಾದ 25 ಮತ್ತು ಅಂಕೋಲಾದ ಮೂವರು ಸೇರಿದಂತೆ ಒಟ್ಟು 28 ಕಾರ್ಮಿಕರು ಇದ್ದರು. ಈ ಬೋಟ್ ನ ಜತೆಗೆ ಇನ್ನೊಂದು ಸಣ್ಣ ಮೀನುಗಾರಿಕಾ ಬೋಟ್ ಅನ್ನೂ ವಶಕ್ಕೆ ಪಡೆಯಲಾಗಿದೆ.
ಲಾಕ್ಡೌನ್ ನಡುವೆಯೂ ಗೋವಾದ ಬೋಟ್ಗಳು ಕಾರವಾರ ವ್ಯಾಪ್ತಿಯಲ್ಲಿ ಆಳ ಸಮುದ್ರದಲ್ಲಿ ಲೈಟ್ ಫಿಶಿಂಗ್ ಮಾಡುತ್ತಿದ್ದರು. ಈ ಬಗ್ಗೆ ಸ್ಥಳೀಯ ಮೀನುಗಾರರು ದೂರು ನೀಡಿದ್ದರು. ದೂರಿನನ್ವಯ ಅರಬ್ಬಿ ಸಮುದ್ರದಲ್ಲಿ ಗಸ್ತು ನಡೆಸುತ್ತಿದ್ದ ಕೋಸ್ಟ್ ಗಾರ್ಡ್ನವರು ಎರಡೂ ಬೋಟ್ ಗಳನ್ನು ವಶಕ್ಕೆ ಪಡೆದುಕೊಂಡು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಸ್ಥಳಕ್ಕೆ ಆರೋಗ್ಯ ಇಲಾಖೆ , ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಕರಾವಳಿ ಕಾವಲು ಪಡೆಯ ಪೊಲೀಸರ ಭೇಟ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೋಟ್ನಲ್ಲಿದ್ದ ಮೀನುಗಾರರಿಗೆ ದಡಕ್ಕೆ ಇಳಿಯಲು ಅವಕಾಶ ನಿರಾಕರಿಸಲಾಗಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಬಳಿಕ ಎಲ್ಲರನ್ನೂ ಬೋಟ್ ನಲ್ಲೇ ಕ್ವಾರಂಟೈನ್ ಮಾಡಲಾಗುವುದು. ಬೋಟ್ ನಲ್ಲಿದ್ದ ಜನರೇಟರ್ ಹಾಗೂ ಇತರ ಮೀನುಗಾರಿಕೆ ಸಲಕರಣೆಗಳನ್ನು ಸ್ಯಾನಿಟೈಸರ್ ಮಾಡಿ, ಬಳಿಕ ಜಪ್ತಿಪಡಿಸಿಲೊಳ್ಳಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಪಿ.ನಾಗರಾಜ್ ತಿಳಿಸಿದ್ದಾರೆ.