ಮಗು ನೋಡಲು ಬಂದ ಅತ್ತೆಗೆ ಆಸ್ಪತ್ರೆಯಲ್ಲಿ ಚಾಕು ಇರಿದ ಅಳಿಯ

1970

ಕಾರವಾರ :- ಮಗು ನೋಡಲು ಬಂದ ಅತ್ತೆಗೆ ಆಸ್ಪತ್ರೆಯಲ್ಲೇ ಕುಡಿದ ಅಮಲಿನಲ್ಲಿ ಅಳಿಯ ಚಾಕು ಹಾಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಕದ್ರಾ ಮೂಲದ ಮಮ್ಮದಬೀ ಎಂಬ ಮಹಿಳೆಯೇ ಚಾಕು ಇರಿತಕ್ಕೊಳಗಾದವಳಾಗಿದ್ದು ದಾಂಡೇಲಿ ಮೂಲದ ರಮಜಾನ್ (25) ಎಂಬುವವನೇ ಚಾಕು ಇರಿದವನಾಗಿದ್ದಾನೆ. ರಮಜಾನ್ ಮಮ್ಮದಬೀ ಮಗಳ ಜೊತೆ ಮದುವೆಯಾಗದೇ ನಾಲ್ಕು ವರ್ಷದಿಂದ ಲೀವಿಂಗ್ ರಿಲೇಷನ್ ನಲ್ಲಿ ಇದ್ದಿದ್ದು ಮದುವೆಯಾಗದೇ ಮಗು ಆಗಿದ್ದಕ್ಕೆ ಮಮ್ಮದಬೀ ರಮಜಾನ್ ನೊಂದಿಗೆ ಜಗಳವಾಡಿದ್ದಳು.

ಬಂಧಿತ ಆರೋಪಿ.

ಹೀಗಾಗಿ ಕೋಪಗೊಂಡಿದ್ದ ಈತ ಕುಡಿದ ನಶೆಯಲ್ಲಿ ಮಗಳನ್ನು ನೋಡಲು ಬಂದಿದ್ದ ಈಕೆಗೆ ಆಸ್ಪತ್ರೆಯ SICU ನಲ್ಲಿ ಹಲ್ಲೆ ಮಾಡಿ ಹೊಟ್ಟೆಗೆ ಚಾಕು ಇರಿದಿದ್ದಾನೆ. ತಕ್ಷಣ ಅಲ್ಲೇ ಇದ್ದ ಜನರು ಆತನಿಗೆ ಗೂಸ ನೀಡಿ ಪೊಲೀಸರಿಗೆ ಒಪ್ಪಿಸಿದ್ದು ,ಚಾಕು ಇರಿತಕ್ಕೊಳಗಾದ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿದ್ದು ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ