add

ಅಪಘಾತ ಗೊಂಡ ವ್ಯಕ್ತಿಗಳನ್ನು ಶಾಸಕರೇ ಕರೆದುಕೊಂಡ್ರು ಹೋದ್ರೂ ಸಿಗದ ಚಿಕಿತ್ಸೆ: ಶಾಸಕಿ ರೂಪಾಲಿ ನಾಯ್ಕರಿಂದ ವೈದ್ಯರಿಗೆ ತರಾಟೆ.

1586

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಚತುಷ್ಪತ ಕಾಮಗಾರಿ ನಡೆಯುತ್ತಿರುವುದರಿಂದ ಕರಾವಳಿ ಭಾಗದಲ್ಲಿ ಅಪಘಾತಗಳು ಸರ್ವೆ ಸಾಮಾನ್ಯವಾಗಿದೆ. ಆದ್ರೆ ಅಪಘಾತವಾದರೂ ಅಪಘಾತ ಗೊಂಡವರನ್ನು 108 ವಾಹನದಲ್ಲಿ ಸಾಗಿಸುವ ಮೊದಲೇ ಪ್ರಾಣ ಪಕ್ಷಿ ಹಾರಿ ಹೊಗಿರುತ್ತೆ. ಅಪಘಾತ ಗೊಂಡರೆ ವ್ಯಕ್ತಿಗಳನ್ನು ಕರೆದೊಯ್ಯಲು ಅಂಬುಲೆನ್ಸ್ ಗಳು ಬರುವುದೇ ಇಲ್ಲ. ಬಂದರೂ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ತೆಗಳಿಲ್ಲ. ಜೊತೆಗೆ ಹಲವು ವೈದ್ಯರು ಚಿಕಿತ್ಸೆ ನೀಡದೇ ಗೋವಾ ಅಥವಾ ಮಣಿಪಾಲಿಗೆ ಕಳುಹಿಸಿಕೊಡುತ್ತಾರೆ. ಹೀಗಾಗಿ ಕರಾವಳಿ ಭಾಗದಲ್ಲಿ ಅಪಘಾತ ಗೊಂಡವರು ಸೀದಾ ಯಮಲೋಕಕ್ಕೆ ಹೊಗುತ್ತಾರೆ.

ಕುದ್ದು ಶಾಸಕರೇ ಕರೆತಂದ್ರು ಸಿಗಲಿಲ್ಲ ಚಿಕಿತ್ಸೆ!

ಇಂದು ಅಂಕೋಲಾ ದಿಂದ ಕಾರವಾರಕ್ಕೆ ಬರುತಿದ್ದ ಶಾಸಕರ ವಾಹನದ ಎದುರೇ ಬಿಣಗಾದ ಬಳಿ ಬೈಕೊಂದು ಮೀನಿನ ಲಾರಿಗೆ ಡಿಕ್ಕಿ ಹೊಡೆದು ಅಪಘಾತಗೊಂಡಿತ್ತು. ಬೈಕ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದವು.ಇದನ್ನು ಗಮನಿಸಿದ ಶಾಸಕಿ 108 ಕ್ಕೆ ಕರೆಮಾಡಿದ್ದಾರೆ. ಆದರೇ ಎಷ್ಟು ಕಾದ್ರೂ ಅಂಬುಲೆನ್ಸ್ ಬರಲೇ ಇಲ್ಲ. ಹೀಗಾಗಿ ಖಾಸಕಿ ಅಂಬುಲೆನ್ಸ್ ತರಿಸಿ ಕಾರವಾರದ ಜಿಲ್ಲಾಸ್ಪತ್ರೆಗೆ ಕುದ್ದು ಶಾಸಕರೇ ಕರೆದೊಯ್ದಿದ್ದರು. ಆದರೇ ಅಲ್ಲಿ ವೈದ್ಯರು ಕರ್ತವ್ಯದಲ್ಲಿ ಇರಲಿಲ್ಲ ಹಾಗೂ ಆಕ್ಸಿಜನ್ ಸಹ ವ್ಯವಸ್ಥೆ ಮಾಡಲಿಲ್ಲ.ಇದರಿಂದ ಕುಪಿತಗೊಂಡ ಶಾಸಕಿ ಆರ್.ಎಂ.ಓ ವೆಂಕಟೇಶ್ ರವರನ್ನು ಕರೆಯಿಸಿ ತರಾಟೆ ತೆಗೆದುಕೊಂಡರು‌. ನಂತರ ಸೂಕ್ತ ವ್ಯವಸ್ತೆ ಮಾಡಲಾಯಿತಿ.
ಇಂದಿನ ಘಟನೆಯಿಂದಾಗಿ ಜನಪ್ರತಿನಿಧಿಗಳಿಗೇ ಹೀಗೆ ಆದರೇ ಜನಸಾಮಾನ್ಯರ ಗತಿ ಏನು ಎಂಬ ಪ್ರಶ್ನೆ ಎಲ್ಲರನ್ನು ಕಾಡತೊಡಗಿದ್ದು ತಪ್ಪಿತಸ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ