BREAKING NEWS
Search

ಹದಿನೈದು ವಿಶಿಷ್ಟ ಚಾಲಕರಿಗೆ ಸನ್ಮಾನ-15ರ ವಸಂತಕ್ಕೆ ಕಾಲಿಟ್ಟ ಓಂ ಡ್ರೈವಿಂಗ್ ತರಬೇತಿ ಶಾಲೆ.

253

ಕಾರವಾರ:- ಚಾಲಕರು ಎಂದಕೂಡಲೇ ಅವರನ್ನು ಸಮಾಜದಲ್ಲಿ ನೋಡುವ ದೃಷ್ಟಿಯೇ ಬೇರೆ. ಆದರೇ ಅವರು ಸಲ್ಲಿಸುವ ಸೇವೆಗೆ ಗೌರವ ತೋರುವವರೇ ಅತ್ಯಲ್ಪರು.

ಅವರ ಸೇವೆಯನ್ನು ಪರಿಗಣಿಸಿ ಅವರೂ ಸಮಾಜದಲ್ಲಿ ಮಹತ್ವವಿರುವವರು ಎಂಬುದನ್ನು ಓಂ ಡ್ರೈವಿಂಗ್ ತರಬೇತಿ ಸಂಸ್ಥೆ ಗುರುತಿಸಿ ಸನ್ಮಾನಿಸುವ ಕೆಲಸವನ್ನು ಈ ಸಂಸ್ಥೆಯ ಮುಖ್ಯಸ್ಥ ,ಜನಪರ ಹೋರಾಟಗಾರ ರಾಘು ನಾಯ್ಕ ಇಂದು ಮಾಡಿದರು.

ಹೌದು ಚಿಕ್ಕ ಗೂಡಂಗಡಿಯಲ್ಲಿ ವಾಹನ ತರಬೇತಿ ಆರಂಭಿಸಿ ಜಿಲ್ಲೆಯಲ್ಲಿ ಉತ್ತಮ ಹೆಸರು ಮಾಡುವ ಮೂಲಕ ಸಂಸ್ಥೆಯನ್ನು ಕಟ್ಟಿದ ರಾಘು ನಾಯ್ಕ ರವರ ಈ ಶಾಲೆಯು ಹದಿನೈದನೇ ವಸಂತಕ್ಕೆ ಕಾಲಿಟ್ಟಿದೆ.

ಇದರ ಸವಿ ನೆನಪಿಗಾಗಿ ಹಲವು ಕ್ಷೇತ್ರದಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಹದಿನೈದು ಜನರಿಗೆ ಸನ್ಮಾನಿಸಲಾಯಿತು.

ಕಾರು ಚಾಲಕನಿಂದ ಹಿಡಿದು ರೈಲ್ವೆ,ವಿಮಾನ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಕಾರವಾರದಲ್ಲಿ ಹುಟ್ಟಿ ಬೆಳೆದ ಪ್ರತಿಭಾವಂತ ಚಾಲಕರನ್ನು ಇಂದು ಸಂಜೆ ಕಾರವಾರ ನಗರದ ಮುಖ್ಯರಸ್ತೆಯಲ್ಲಿರುವ ಈಶಾನ್ಯ ಕಾಂಪ್ಲೆಕ್ಸ್ ನ ಓಂ ಡ್ರೈವಿಂಗ್ ಸ್ಕೂಲ್ ನಲ್ಲಿ ಸನ್ಮಾನಿಸಲಾಯಿತು.

ಸನ್ಮಾನಿತರು ಇವರು:-

ಓಂ ಡ್ರೈವಿಂಗ್ ಸ್ಕೂಲ್ ನ ಕಚೇರಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯರಾದ ಸುಮಲತಾ ಆಸ್ನೋಟಿಕರ್ ರವರು ಕಾರಿನ ಆಕೃತಿಯ ಕೇಕ್ ಕತ್ತರಿಸಿ ,ಗಿಡಕ್ಕೆ ಜೀವಜಲ ನೀಡುವ ಮೂಲಕ ಉದ್ಘಾಟಿಸಿದರು.

ಇದಕ್ಕೆ ಕಾರವಾರದ ಆರ್.ಟಿ.ಓ ಅಧಿಕಾರಿ ,ಪಕ್ಷಾತೀತ ಜನಪರ ವೇದಿಕೆ ಅಧ್ಯಕ್ಷ ನೂರ್ ಅಹ್ಮದ್ ,ಅನುಕಳಸ್, ಸೆಂಟ್ ಮಿಲಾಗ್ರಿಸ್ ನ ಜಾರ್ಜ್ ಫರ್ನಾಂಡಿಸ್ ,ಕರಾವಳಿ ಮುಂಜಾವು ಪತ್ರಿಕೆ ಮಾಲೀಕರಾದ ಗಂಗಾಧರ್ ಹಿರೇಗುತ್ತಿ ಮುಂತಾದವರು ಸಾಕ್ಷಿಯಾದರು.ಇಡೀ ಕಾರ್ಯಕ್ರಮ ವನ್ನು ಸಂಸ್ಥೆಯ ಮುಖ್ಯಸ್ಥ ರಾಘು ನಾಯ್ಕರವರು ನಡೆಸಿಕೊಡುವ ಮೂಲಕ ವಿವಿಧ ರಂಗದಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸಿದವರನ್ನು ಗೌರವಿಸಿದರು.
Leave a Reply

Your email address will not be published. Required fields are marked *