ಕಾರವಾರ ನಗರದಲ್ಲಿ ಸರಣಿ ಕಳ್ಳತನ! ರಾತ್ರಿ ಪಾಳಿ ಮಾಡುವ ಪೊಲೀಸರು ನಿದ್ದೆಗೆ!

612

ಕಾರವಾರ :- ಕಾರವಾರ ನಗರದ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಕಳೆದ ಮೂರು ದಿನದಿಂದ ಬೀದಿ ಅಂಗಡಿಗಳ ಸರಣಿ ಕಳ್ಳತನ ನೆಡೆಯುತಿದ್ದು ಬಡ ವ್ಯಾಪಾರಿಗಳನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ಗ್ರೀನ್ ಸ್ಟ್ರೀಟ್ , ಪಿಕಳೆ ರಸ್ತೆ, ಗೀತಾಂಜಲಿ ಟಾಕೀಸ್ ರಸ್ತೆಗಳಲ್ಲಿ ಕಳೆದ ಮೂರು ದಿನದಿಂದ ನಿರಂತರ ಕಳ್ಳತನವಾಗುತ್ತಿದೆ.

ಮೂರು ದಿನದಿಂದ ಅಂದಾಜು ಒಂದು ಲಕ್ಷ ಮೌಲ್ಯದ ವಸ್ತುಗಳು ಹಣ ಕಳ್ಳತನ ಮಾಡಲಾಗಿದೆ.
ಗ್ರೀನ್ ಸ್ಟ್ರೀಟ್ ಬಳಿ ಪೊಲೀಸ್ ಠಾಣೆ ಸಮೀಪವಿದ್ದರೂ ಕಳ್ಳರು ಕೈಚಳಕ ತೋರಿಸಿದ್ದಾರೆ.

ಕುಡುಕರು,ಗಾಂಜಾ ಹೊಡೆಯುವರ ಅಡ್ಡ ಗ್ರೀನ್ ಸ್ಟ್ರೀಟ್ !

ಗ್ರೀನ್ ಸ್ಟ್ರೀಟ್ ರಂಗೀಲಾ ಪ್ಯಾನ್ಸಿ ಪಕ್ಕದ ಗಲ್ಲಿ ಯ (ಸರದಾರ್ ಜಿ ಪೆಟ್ರೋಲ್ ಬಂಕ್ ಹಿಂಭಾಗ) ಓಣಿಯಲ್ಲಿ ರಾತ್ರಿ ಒಂಬತ್ತರ ನಂತರ ಹಲವು ಹುಡುಗರ ದಂಡು ರಾತ್ರಿ ಈ ಓಣಿಯಲ್ಲಿ ಗಾಂಜಾ ಹೊಡೆಯುವುದು, ಮದ್ಯಪಾನ ಮಾಡುವುದು ,ಗಲಾಟಿ ಯಂತಹ ಕಾನೂನು ಬಾಹ್ಯ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಅಕ್ಕ ಪಕ್ಕದ ಅಂಗಡಿಯವರು ತಿಳಿ ಹೇಳಿದರೂ ಅಂಗಡಿಯವರಿಗೆ ಬೆದರಿಸುವ ದಬ್ಬಾಳಿಕೆ ಮಾಡುತಿದ್ದಾರೆ. ಹೀಗಿರುವಾಗ ಈ ಹುಡುಗರು ಏನೂ ಮಾಡಿದರೂ ಸುಮ್ಮನೆ ವೀಕ್ಷಿಸುವ ಸ್ಥಿತಿ ಇಲ್ಲಿನವರದ್ದಾಗಿದೆ.

ನಗರ ಪೊಲೀಸರು ಈ ಭಾಗ ಮುಖ ಸಹ ಹಾಕುವುದಿಲ್ಲ. ಇನ್ನು ಹುಡುಗರಲ್ಲಿ ಬಹುತೇಕರು ಕ್ರಿಮಿನಲ್ ಹಿನ್ನಲೆ ಹೊಂದಿದವರಿದ್ದಾರೆ. ಇದಲ್ಲದೇ ಹಿಂದೆ ಪೊಲೀಸರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯ ತಂಡದ ಮಾಮೂಲಿ ಅಡ್ಡವಾಗಿದೆ. ಇಂತವರನ್ನು ಹೆಡೆಮುರಿ ಕಟ್ಟಿ ಕೇಸು ದಾಖಲಿಸದಿದ್ದರೆ ಮುಂದೊಂದು ದಿನ ದೊಡ್ಡ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

ಇನ್ನು ಮಧ್ಯರಾತ್ರಿ ಈ ಭಾಗದಲ್ಲಿ ಪೊಲೀಸರು ಬೀಟ್ ಮಾಡಿ ಹೋಗುವ ಸಮಯ ಸಹ ಕಳ್ಳರಿಗೆ ಮನವರಿಕೆಯಿದೆ. ಹೀಗಾಗಿ ಪೊಲೀಸ್ ಠಾಣೆ ಸಮೀಪವಿದ್ದರೂ ಅದೇ ಭಾಗದಲ್ಲಿ ಕಳ್ಳತನವಾಗುತ್ತಿದೆ.

ನಗರ ಪೊಲೀಸ್ ಠಾಣೆ ಪೊಲೀಸರು ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂಬುದು ವ್ಯಾಪಾರಸ್ತರು ಹಾಗೂ ಬೀದಿ ವ್ಯಾಪಾರಿಗಳ ಆಗ್ರಹವಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ