ಕೆ.ಡಿ.ಸಿ.ಸಿ ಚುನಾವಣಾ ಫಲಿತಾಂಶ ಪ್ರಕಟ-ಆಯ್ಕೆಯಾದ ನಿರ್ದೇಶಕರ ವಿವರ ಇಲ್ಲಿದೆ.

650

ಶಿರಸಿ: ತೀವ್ರ ಕುತೂಹಲ ಕೆರಳಿಸಿದ್ದ ಜಿಲ್ಲಾ ಕೆಡಿಸಿಸಿ ನಿರ್ದೇಶಕ ಸ್ಥಾನಕ್ಕೆ ಬೆಳಿಗ್ಗೆಯಿಂದ ನಗರದಲ್ಲಿರುವ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಮತದಾನ ಪ್ರಕ್ರಿಯೆ ನಡೆದು ಇದೀಗ ತೀರ್ಪು ಹೊರಬಂದಿದೆ.

ಬ್ಯಾಂಕಿನ 16 ಕ್ಷೇತ್ರದಲ್ಲಿ 10 ಕ್ಷೇತ್ರಕ್ಕೆ 23 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇನ್ನುಳಿದ 6 ಕ್ಷೇತ್ರಕ್ಕೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 10 ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ನಿರ್ಧಾರಕ್ಕೆ ಇಂದುಮತದಾನ ನಡೆದಿತ್ತು.

ಕಾರವಾರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಪ್ರಕಾಶ ಗುನಗಿ ಅವಿರೋಧ ಆಯ್ಕೆ, ಯಲ್ಲಾಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಸಚಿವ ಶಿವರಾಮ ಹೆಬ್ಬಾರ್, ಹಳಿಯಾಳ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ನಿಕಟಪೂರ್ವ ಅಧ್ಯಕ್ಷ ಎಸ್ ಎಲ್ ಘೋಟ್ನೇಕರ್, ಭಟ್ಕಳ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಮಂಕಾಳು ವೈದ್ಯ, ಜೋಯಿಡಾ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಕೃಷ್ಣ ದೇಸಾಯಿ, ತಾಲೂಕಾ ಒಕ್ಕಲುತನ ಹುಟ್ಟುವಳಿಗಳ ಮಾರಾಟ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಆರ್ ಎಮ್ ಹೆಗಡೆ ಸಿದ್ದಾಪುರ ಅವಿರೋಧ ಆಯ್ಕೆಯಾಗಿದೆ.

ಕುಮಟಾ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಗಜಾನನ ಪೈ 10-5 ಅಂತರದಲ್ಲಿ ಗೆದ್ದಿದ್ದಾರೆ. ಹೊನ್ನಾವರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಶಿವಾನಂದ ಕಡತೋಕಾ 13-8 ಅಂತರದಿಂದ ಗೆದ್ದಿದ್ದಾರೆ. ಅಂಕೋಲಾ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಬೀರಣ್ಣ ನಾಯಕ ಪ್ರತಿಸ್ಪರ್ಧಿ ವಿಜಯಕುಮಾರ ಎದುರು 7-6 ಮತಗಳ ಅಂತರದಿಂದ ಗೆದ್ದಿದ್ದಾರೆ.

ಶಿರಸಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ರಾಮಕೃಷ್ಣ ಕಡವೆ 15-12 ಮತಗಳ ಅಂತರದಲ್ಲಿ ಆಯ್ಕೆಯಾಗಿದ್ದಾರೆ.ಔದ್ಯೋಗಿಕ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ವಿಶ್ವನಾಥ ಭಟ್ಟ ಹೊನ್ನಾವರ 13-11 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.

ಅರ್ಬನ್ ಬ್ಯಾಂಕು ಹಾಗೂ ಕೃಷಿಯೇತರ ಸಹಕಾರ ಸಂಘಗಳ ಮತಕ್ಷೇತ್ರದಿಂದ ಮೋಹನದಾಸ ನಾಯಕ 75-52-27 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಹಾಲು ಉತ್ಪಾದಕರ/ಕಾರ್ಮಿಕರ/ಕೂಲಿಕಾರರ/ಇತರೇ ಸಹಕಾರಿ ಸಂಘಗಳ (ಫಾರ್ಮಿಂಗ ಸಹಕಾರಿ ಸಂಘಗಳ ಸಹಿತ) ಮತಕ್ಷೇತ್ರದಿಂದ ಸುರೇಶ್ಚಂದ್ರ ಕೆಶಿನ್ಮನೆ 65-35 ಮತ ಅಂತರದಲ್ಲಿ ವಿಜಯಶಾಲಿಯಾಗಿದ್ದಾರೆ.

ಸಿದ್ದಾಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಶಣ್ಮುಖ ಗೌಡ ಹಾಗು ವಿವೇಕ ಭಟ್ಟ ಗಡಿಹಿತ್ಲು ಇಬ್ಬರು ಸಮಾನ ಮತಗಳನ್ನು ಪಡೆದ ಹಿನ್ನಲೆಯಲ್ಲಿ ಚೀಟಿ ಆರಿಸಿದಾಗ ಶಣ್ಮುಖ ಗೌಡರ್ ಗೆದ್ದಿದ್ದಾರೆ.

ಮುಂಡಗೋಡ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಲ್ಲಿ ಎಲ್ ಟಿ ಪಾಟೀಲ್ 11-3 ಅಂತರದಿಂದ ಗೆದ್ದಿದ್ದಾರೆ. ಗ್ರಾಹಕರ ಸಹಕಾರಿ ಸಂಘಗಳು ಮತ್ತು ಸಂಸ್ಕರಣ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಜಿ ಆರ್ ಹೆಗಡೆ ಸೋಂದಾ ವಿಜಯಶಾಲಿಯಾಗಿದ್ದಾರೆ.
Leave a Reply

Your email address will not be published. Required fields are marked *