BREAKING NEWS
Search

ಕಾರವಾರದಲ್ಲಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ಸ್ಥಿರ! ನಾಳೆ ಬರಲಿದೆ ಮತ್ತಷ್ಟು ಸೊಂಕಿತರ ವರದಿ!

5232

ಕಾರವಾರ: ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 19 ಜನ ಕೋವಿಡ್- 19 ಸೋಂಕಿತರ ಹೆಲ್ತ್ ಬುಲೆಟಿನ್ ಬಿಡುಗಡೆಮಾಡಿದೆ.

ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ 18 ಸೋಂಕಿತರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, 83 ವರ್ಷದ ವೃದ್ಧರೋರ್ವರಿಗೆ ಆಯಾಸ ಮತ್ತು ಸಾಮಾನ್ಯ ಸುಸ್ತು ಇದ್ದು ಅಲ್ಪ ಜ್ವರದಿಂದ ನಿತ್ರಾಣರಾಗಿದ್ದಾರೆ ಎಂದು ತಿಳಿದುಬಂದಿದೆ.

ಭಟ್ಕಳದಲ್ಲಿ ಸದ್ಯ ಸಕ್ರಿಯ 28 ಕೊರೋನಾ ಸೋಂಕಿತರು ಪತ್ತೆಯಾಗಿದ್ದು ಒಟ್ಟು 39 ಕ್ಕೆ ಏರಿಕೆಯಾಗಿದೆ.

ಈವರೆಗೆ 19 ಮಂದಿಯನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾಖಲು ಮಾಡಿ ಚಿಕಿತ್ಸೆ ಮುಂದುವರಿಸಲಾಗಿದೆ. ಉಳಿದ 9 ಸೋಂಕಿತರು ಭಟ್ಕಳದಲ್ಲೇ ಇದ್ದು, ಅವರೆಲ್ಲರನ್ನೂ ಇಂದು ರಾತ್ರಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಕರೆ ತರಲಾಗಿದೆ.

ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಹೋಟೆಲ್ ವೊಂದರಲ್ಲಿ‌ ಕ್ವಾರಂಟೈನ್ ಇರಲು ಸೂಚಿಸಲಾಗಿದೆ.

ತಲೆನೋವಾದ ಆಟೋ ಚಾಲಕ!

ಸೋಂಕಿತೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಮದೀನಾ ಕಾಲೋನಿಯ ಆಟೋ ಚಾಲಕನಿಗೂ ಕೊರೋನಾ ವೈರಸ್ ಸೋಂಕು ತಗುಲಿರುವುದು ಧೃಡಪಟ್ಟಿದ್ದು ಈತನ ಸಂಪರ್ಕ ವಿವರ ಪಡೆಯುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.
42 ವರ್ಷದ ಆಟೋ ಚಾಲಕ ಮೇ 1 ನೇ ತಾರೀಕು ಪಿ659 ಸಂಖ್ಯೆಯ 18ವರ್ಷದ ಸೋಂಕಿತೆಯನ್ನ ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ.

ಸೋಂಕಿತೆಯ ಮನೆಯ ಬಳಿಯೇ ಆಟೋ ಚಾಲಕನ ಮನೆಯೂ ಇದ್ದು ಕುಟುಂಬದವರಿಗೆ ಚಿರಪರಿಚಿತನಾಗಿದ್ದ.

ಯುವತಿಗೆ ಜ್ವರ ಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾಪಾಸ್ ಮನೆಗೆ ಬಿಟ್ಟಿದ್ದು p659 ಸಂಖ್ಯೆಯ 18 ವರ್ಷದ ಯುವತಿಗೆ ಮೇ 5 ರಂದು ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಆಕೆಯ ಸಂಪರ್ಕಕ್ಕೆ ಬಂದವರನ್ನ ಗುರುತಿಸುವಾಗ ಆಟೋ ಚಾಲಕನನ್ನ ಸಹ ಗುರುತಿಸಿ ಆತನ ಗಂಟಲು ದ್ರವವನ್ನ ಪರೀಕ್ಷೆಗೆ ಕಳುಹಿಸಲಾಗಿತ್ತು.

ಇಂದು ಆಟೋ ಚಾಲಕನಿಗೂ ಸೋಂಕು ದೃಢಪಟ್ಟಿದ್ದು, ಆತನ ಪತ್ನಿ ಹಾಗೂ ಮೂವರು ಮಕ್ಕಳನ್ನ ಕ್ವಾರಂಟೈನ್ ಮಾಡಲಾಗಿದೆ. ಚಾಲಕನ ಸಂಪರ್ಕದಲ್ಲಿ ಹಲವರು ಇರುವ ಹಿನ್ನಲೆಯಲ್ಲಿ ಎಲ್ಲರನ್ನ ಗುರುತಿಸುವ ಕಾರ್ಯಕ್ಕೆ ಇದೀಗ ಭಟ್ಕಳ ತಾಲೂಕು ಆಡಳಿತ ಮುಂದಾಗಿದೆ. ಜೊತೆಗೆ ಆಟೋ ಚಾಲಕನ ಸಂಪರ್ಕದಲ್ಲಿ ಹಲವರು ಬಂದಿರುವ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ತಾಲೂಕಿನಲ್ಲಿ KA-47-3427 ನೋಂದಣಿಯ ಆಟೊರಿಕ್ಷಾದ ಚಾಲಕನಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ಇದರಲ್ಲಿ ಪ್ರಯಾಣಿಸಿದವರು ಯಾರಾದರೂ‌‌ ಇದ್ದರೆ ಮಾಹಿತಿ ನೀಡಲು ಕೋರಲಾಗಿದೆ.

ಮೇ 1ರಿಂದ 5ರ ವರೆಗೆ ಕರೆ ಮಾಡಿದ್ದ ಆರು ಪ್ರಯಾಣಿಕರನ್ನು ಕರೆದೊಯ್ದಿದ್ದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಹೀಗಾಗಿ, ಸಂಪರ್ಕಕ್ಕೆ ಬಂದ ಈ ಆರು ಮಂದಿಯನ್ನೂ ಗುರುತಿಸಲಾಗಿದ್ದು ಇವರು ಕೂಡ ಅನ್ಯರ ಸಂಪರ್ಕ ಮಾಡಿದ್ದು ಯಾರಾದರೂ ಇವರ ಸಂಪರ್ಕಕ್ಕೆ ಬಂದಿರುವವವರ ಸಾಧ್ಯತೆ ಇರುವುದರಿಂದ ಸದರಿ ಅಟೋ ರಿಕ್ಷಾದಲ್ಲಿ ಸಾರ್ವಜನಿಕರು ಯಾರಾದರೂ ಕಳೆದ 14 ದಿನಗಳಲ್ಲಿ ಪ್ರಯಾಣ ಮಾಡಿದ್ದಲ್ಲಿ ಕೂಡಲೇ ತಾಲೂಕಾ ಆಸ್ಪತ್ರೆಗೆ ವರದಿ ಮಾಡಿಕೊಳ್ಳಲು ಕೋರಲಾಗಿದೆ. ಅಥವಾ ಸಹಾಯವಾಣಿ ಸಂಖ್ಯೆ 08385- 226 422 ಅನ್ನು ಸಂಪರ್ಕಿಸಲು ತಿಳಿಸಿದೆ.

ನಾಳೆಯ ಬುಲಿಟಿನ್ ನಲ್ಲಿ ಬರಲಿದೆ ಮತ್ತಷ್ಟು ವರದಿ!

ಮೂಲಗಳ ಪ್ರಕಾರ ಇಂದು 10 ಜನರ ಗಂಟಲು ದ್ರವ ಪರೀಕ್ಷೆಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.ಇದಲ್ಲದೇ ಇನ್ನೂ ಕೂಡ ಕೆಲವು ವರದಿ ಬರಬೇಕಿದ್ದು ಇಂದಿನ ಸಂಜೆ ಬುಲಟಿನ್ ನಲ್ಲಿ ನಿರೀಕ್ಷಿಸಲಾಗಿತ್ತು. ಆದರೇ ನಾಳೆ ಬಹುತೇಕ ಎಲ್ಲಾ ವರದಿ ಬರುವ ನಿರೀಕ್ಷೆ ಇದೆ. ಹೀಗಾಗಿ ಹತ್ತು ಜನರಿಗೆ ಸೊಂಕು ದೃಡವಾಗುವ ಸಾಧ್ಯತೆಗಳಿವೆ ಎಂದು ಮೂಲದ ಮಾಹಿತಿ ಹೇಳುತ್ತದೆ.

ಕೇವಲ ಒಂದು ಕಾಲೋನಿಗೆ ಸೀಮಿತವಾಗಿದ್ದ ಸೊಂಕು ಭಟ್ಕಳದ ಮದೀನಾ ಕಾಲೋನಿ ,ನವಾಯತ್ ಕಾಲೋನಿ,ಸುಲ್ತಾನ್ ಸ್ಟ್ರೀಟ್ ,ಕೋಕ್ತಿ ಕಾಲೋನಿ ಗೂ ಆವರಿಸಿದ್ದು ಮತ್ತಷ್ಟು ತಲ್ಲಣ ಗೊಳಿಸಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ