ಕಾರವಾರ: ಲಾಕ್ ಡೌನ್ ನಡುವೆಯೂ ಅದೆಷ್ಟೊ ಜನರು ಬೀದಿ ಸುತ್ತುತ್ತಿದ್ದಾರೆ. ಆದರೆ ಇಂತವರನ್ನು ಎಚ್ಚರಿಸುವ ನಿಟ್ಟಿನಲ್ಲಿ ಕುಮಟಾದಲ್ಲಿ ರಸ್ತೆಯ ಮೇಲೆಯೇ ಬೃಹತ್ ಕೊರೊನಾ ಚಿತ್ರ ಬಿಡಿಸುವ ಮೂಲಕ ಜಾಗೃತಿ ಮೂಡಿಸಿದ್ದಾರೆ.
ನನ್ನ ಗೆಳೆತನ ಮಾಡಿದರೆ ಸಾವೇ ಗತಿ ಮನೆಯವರೊಟ್ಟಿಗೆ ಇದ್ದರೆ ನಿಮ್ಮ ಪ್ರಗತಿ, “ನಿಮ್ಮ ಮುಂದಿದೆ ಎರಡು ಆಯ್ಕೆ ಸಾವು, ಸಾವು” ಹೀಗೆ ಹಲವು ಬರಹಗಳನ್ನು ಬೃಹತ್ ಕೊರೊನಾ ಆಕಾರದ ಜಾಗೃತಿ ಚಿತ್ರದೊಂದಿಗೆ ಕುಮಟಾದ ಗಿಬ್ ಹೈಸ್ಕೂಲ್ ಬಳಿ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಕುಮಟಾದ ಕಲಾವಿದ ಪ್ರಕಾಶ್ ಬಂಡಾರಿ ಹಾಗೂ ರಾಜುನಾಯ್ಕ ತಂಡ ಬಿಡಿಸಿದ್ದಾರೆ.





ಇಡೀ ದೇಶವೇ ಲಾಕ್ ಡೌನ್ ಮೂಲಕ ಕೊರೋನಾ ತೊಲಗಿಸಲು ಒಗ್ಗಟ್ಟಾಗುತ್ತಿದೆ.
ಆದ್ರೆ ಹಲವರು ಇದು ನಮಗೇನೂ ಸಂಬಂಧವೇ ಇಲ್ಲವೇನೂ ಎನ್ನುವಂತೆ ಬೀದಿ ಸುತ್ತುವ ಮೂಲಕ ಕೊರೋನಾದ ಪ್ರತಿನಿಧಿಗಳಂತೆ ವರ್ತಿಸುತಿದ್ದಾರೆ.
ಇಂತವರಿಗೆ ಜಾಗೃತಿ ಮೂಡಿಸಿ ಮನೆಯಲ್ಲಿರುವಂತೆ ಪ್ರೇರೆಪಿಸಲು ಈ ಕಾರ್ಯಮಾಡುತಿದ್ದೇವೆ.
ಎಲ್ಲರೂ ಮನೆಯಲ್ಲಿಯೇ ಇದ್ದು ಕೊರೊನಾ ವಿರುದ್ಧ ಹೋರಾಟಕ್ಕೆ ಸಹಕಾರ ನೀಡಬೇಕು ಎಂದು ಈ ಕಲಾವಿದರ ತಂಡದವರು ಮನವಿ ಮಾಡಿದ್ದಾರೆ.