ಗೋಕರ್ಣದ ಮಾಣೇಶ್ವರ ದೇವಾಲಯದ ಬಳಿ ಗುಡ್ಡ ಕುಸಿತ!

411

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಪುರಾಣ ಪ್ರಸಿದ್ಧ ಮಾಣೇಶ್ವರ ದೇವಾಲಯದ ಬಳಿ ಗುಡ್ಡ ಕುಸಿತವಾಗಿದ್ದು ಅದೃಷ್ಟವಶಾತ್ ದೇವಸ್ಥಾನಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ.

ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಗೋಕರ್ಣದ ಮಾಣೇಶ್ವರ ದೇವಸ್ಥಾನದ ಮೇಲ್ಬಾಗದಲ್ಲಿರುವ ಗುಡ್ಡ ಕುಸಿದಿದ್ದು ಈವೇಳೆ ದೊಡ್ಡ ಕಲ್ಲುಬಂಡೆ ಜಾರಿದೆ.ಆದರೇ ಪಕ್ಕದಲ್ಲೇ ಬೃಹದಾಕಾರದ ಮರವಿದ್ದ ಕಾರಣ ಗುಡ್ಡದಿಂದ ಜಾರಿದ ಕಲ್ಲುಬಂಡೆಯು ಮರದ ಬಳಿ ನಿಂತಿದ್ದು ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಗುಡ್ಡ ಕುಸಿದೊರುವ ಎಡಭಾಗದ ದೃಶ್ಯ .

ಪಕ್ಕದಲ್ಲೇ ಮನೆಗಳಿದ್ದು ಗುಡ್ಡದ ಬಲಭಾಗಕ್ಕೆ ಜಾರಿದಲ್ಲಿ ಮನೆಯ ಮೇಲೆ ಬೀಳುತಿತ್ತು. ಹಾಗೆಯೃ ಎಡಭಾಗಕ್ಕೆ ಜಾರಿದ್ದಲ್ಲಿ ದೇವಸ್ಥಾನದ ಮೇಲೆ ಬೀಳುತಿತ್ತು.

ಅದೃಷ್ಟವಶಾತ್ ಬಂಡೆ ಮರದ ಬಳಿಯೇ ಜಾರಿ ನಿಂತಿದ್ದರಿಂದ ದೊಡ್ಡ ಹಾನಿ ತಪ್ಪಿದಂತಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ