BREAKING NEWS
Search

ಗೋಕರ್ಣದಲ್ಲಿ ಆತ್ಮಲಿಂಗ ದರ್ಶನ ಸಿಗದ ಬಡವರ ಕೈಯಲ್ಲಿ ಮೂಡಿತು ಸಾವಿರಾರು ಲಿಂಗ!

1237

ಕಾರವಾರ :- ಸೊಕ್ಕಿದ್ದವರು ಯಾಣಕ್ಕೆ ಹೋಗಿ ರೊಕ್ಕ ಇದ್ದವರು ಗೋಕರ್ಣ ಕ್ಕೆ ಹೋಗಿ ಎನ್ನುವ ಗಾದೆಮಾತಿದೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಶಿವ ತಾಣ ಗೋಕರ್ಣದಲ್ಲಿ ದುಡ್ಡು ಇದ್ದವರಿಗೆ ಮಹಾಬಲೇಶ್ವರನ ಆತ್ಮ ಲಿಂಗ ದರ್ಶನ ಭಾಗ್ಯ ಅತೀ ಬೇಗ.ಆದರೇ ದುಡ್ಡಿಲ್ಲದ ಬಡವರು ಏನು ಮಾಡ್ತಾರೆ ಗೊತ್ತಾ?ಹಾಗಿದ್ರೆ ಈ ಸುದ್ದಿ ನೀವು ಓದಲೇ ಬೇಕು.

ಮಹಾಬಲೇಶ್ವರ ಆತ್ಮಲಿಂಗ.

ದೇವರು ಎನ್ನುವವನು ಈಗ ಕಮರ್ಶಿಯಲ್ ಆಗಿ ಬಿಟ್ಟಿದ್ದಾನೆ .ನಿಮಗೆ ದೇವರ ದರ್ಶನ ಮಾಡಲು ಕೇವಲ ಭಕ್ತಿ ಒಂದಿದ್ದರೆ ಸಾಲದು ಜೊತೆಗೆ ಕೈತುಂಬ ದುಡ್ಡು ಇರಲೇ ಬೇಕು.ಉತ್ತರ ಕನ್ನಡ ಜಿಲ್ಲೆಯ ದೇಶದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಗೋಕರ್ಣದ ಮಹಾಬಲೇಶ್ವರ ದೇವರ ದರ್ಶನವನ್ನು ಶಿವರಾತ್ರಿ ದಿನ ಮಾಡಬೇಕೆಂದರೆ ಬಲು ತ್ರಾಸದಾಯಕ.

ಇನ್ನು ನಿಮ್ಮ ಕೈಯಲ್ಲಿ ದುಡ್ಡು ಇದ್ದರೇ ಅಧವಾ ನೀವು ವಿ.ಐ.ಪಿ ಆಗಿದ್ದರೇ ಎರಡು ನಿಮಿಷದಲ್ಲಿ ಆತ್ಮಲಿಂಗ ದರ್ಶನ ಮಾಡಿ ಪೂಜೆ ಸಹ ಮಾಡಬಹುದು.

ಆದರೇ ದುಡ್ಡಿಲ್ಲದ ಬಡ ಜನರು ಬೆಳಗಿನ ಜಾವದುಂದ ಕಿಲೋಮೀಟರ್ ಗಟ್ಟಲೇ ಇರುವ ಸರತಿ ಸಾಲಿನಲ್ಲಿ ನಿಂತು ಕಾದು ದೇವರ ಮುಖ ನೋಡಬೇಕು.ಹೀಗಾಗಿ ಹಲವು ಭಕ್ತರು ದೇವಸ್ಥಾನದ ಮುಖ್ಯದ್ವಾರದಲ್ಲಿ ನಮಸ್ಕರಿಸಿ ಇಲ್ಲಿನ ಕಡಲತೀರದಲ್ಲಿ ಈಶ್ವರನ ಲಿಂಗ ತಯಾರಿಸಿ ಪೂಜೆ ಸಲ್ಲಿಸಿ ಪುನೀತರಾಗುತ್ತಾರೆ.
ಮಹಾಬಲೇಶ್ವರನನ್ನು ಕೈಯಲ್ಲಿ ಮುಟ್ಟಿ ತೃಪ್ತಿ ಪಡಲಾಗದ ಸಾವಿರಾರು ಶಿವಭಕ್ತರು ಗೋಕರ್ಣದ ಮುಖ್ಯ ಕಡಲತೀರಕ್ಕೆ ಆಗಮಿಸಿ ಮರಳಿನಲ್ಲಿ ಶಿವಲಿಂಗ ನಿರ್ಮಿಸಿ ಅದಕ್ಕೆ ಬಿಲ್ಪತ್ರೆ,ಹೂವು,ಕುಂಕುಮಗಳನ್ನು ಹಾಕಿ ಪೂಜೆ ಸಲ್ಲಿಸುತ್ತಾರೆ.

ಪ್ರತಿ ಶಿವರಾತ್ರಿಯಂದು ಕೇವಲ ಕರ್ನಾಟಕದವರಲ್ಲದೇ ಮಹರಾಷ್ಟ್ರ,ಗೋವಾ ಗಳಿಂದಲೂ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿ ತಮ್ಮ ಭಕ್ತಿಭಾವ ಮೆರೆಯುತ್ತಾರೆ.

ಗೋಕರ್ಣದ ಮುಖ್ಯ ಕಡಲತೀರದಲ್ಲಿ ಶಿವಲಿಂಗ ಮಾಡಿ ಪೂಜೆ ಸಲ್ಲಿಸುತ್ತಿರುವ ಬಡ ಶಿವ ಭಕ್ತರು.
ಸಾಲು ಸಾಲು ಶಿವಮೂರ್ತಿಗಳು.


ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಯ್ಯ ಬಡವನಯ್ಯ ಎನ್ನುವ ಬಸವಣ್ಣನವರ ವಚನದಂತೆ ಗೋಕರ್ಣದ ಮಹಾಬಲೇಶ್ವರನ ಆತ್ಮ ಲಿಂಗ ದರ್ಶನ ಮಾಡಲು ಬರುವ ಬಡ ಶಿವಭಕ್ತರು ಮರಳಿನಲ್ಲಿ ಶಿವಲಿಂಗ ಮಾಡಿ ಅದರಲ್ಲಿ ಶಿವನ ಆತ್ಮಲಿಂಗವನ್ನು ಕಂಡು ಪುನೀತರಾಗುತ್ತಾರೆ.ಶ್ರೀಮಂತರಿಗೆ ಮಹಾಬಲೇಶ್ವರನ ಆತ್ಮಲಿಂಗವಾದರೇ ರಾಜ್ಯದ ಮೂಲೆ ಮೂಲೆಯಿಂದ ಬರುವ ಬಡ ಶಿವಭಕ್ತರಿಗೆ ತಮ್ಮ ಮನದಾಳದಿಂದ ಭಕ್ತಿರಸ ದರಿಸಿ ಸಮುದ್ರ ದಡದಲ್ಲಿ ಮರಳಿನಲ್ಲಿ ಅರಳಿಸಿದ ಶಿವನ ಲಿಂಗವೇ ಆತ್ಮಲಿಂಗ‌ ದರ್ಶನದಷ್ಟು ತೃಪ್ತಿ ತಂದಿದೆ.
ಕಲ್ಲು ಗುಡಿಯ ದೇವರ ದರ್ಶನಕ್ಕಿಂತ ಆತ್ಮ ತೃಪ್ತಿಯಿಂದ ಪೂಜೆ ಮಾಡಿದ ಈ ಜನಗಳ ಭಕ್ತಿಯ ಮುಂದೆ ಮತ್ತೇನು ಬೇಕು.




Leave a Reply

Your email address will not be published. Required fields are marked *