BREAKING NEWS
Search

ಶಿರಸಿ:₹1.25ಲಕ್ಷ ಮೌಲ್ಯದ ಮದ್ಯ ನಾಶ

533

ಕಾರವಾರ/ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಅಬಕಾರಿ ಉಪವಿಭಾಗ ಹಾಗೂ ಪೋಲಿಸ್ ಇಲಾಖೆಯಿಂದ 2019-20 ನೇ ಸಾಲಿನಲ್ಲಿ 15 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಸುಮಾರು1.25 ಲಕ್ಷ ರೂ ಬೆಲೆಯ ಅಕ್ರಮ ಮದ್ಯವನ್ನು ಇಂದು ನಾಶ ಪಡಿಸಲಾಯಿತು.

1.25 ಲಕ್ಷ ರೂ ಬೆಲೆಯ 337.77 ಲೀ ಮದ್ಯ. 9 ಸಾವಿರ ರೂ ಬೆಲೆಯ 71 ಲೀ ಬಿಯರ್ ಹಾಗು 700 ರೂ ಬೆಲೆಯ 7 ಲೀಟರ್ ಕಳ್ಳಬಟ್ಟಿ ಸರಾಯಿಯನ್ನು ಅಧಿಕಾರಿಗಳ ಸಮಕ್ಷಮದಲ್ಲಿ ಶಿರಸಿ ಅಬಕಾರಿ ಇಲಾಖೆಯ ಕಚೇರಿಯಲ್ಲಿ ನಾಶಪಡಿಸಲಾಯಿತು.

ಈ ವೇಳೆ ಶಿರಸಿ ಉಪ ವಿಭಾಗದ ಉಪ ಅಧೀಕ್ಷಕ ಎಚ್ ಶಿವಪ್ಪ ಅಬಕಾರಿ ನಿರೀಕ್ಷಕ ಮಹೆಂದ್ರ ಎಸ್ ನಾಯ್ಕ ಜ್ಯೋತಿಶ್ರೀ ನಾಯ್ಕ ಹಾಗು ಉಪ ನಿರೀಕ್ಷಕ ಉದಯ ಸಿರ್ಸಿಕರ್ ಉಪಸ್ಥಿತರಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!