BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲೆಲ್ಲಿ ರಿಲೀಫ್ ಗೊತ್ತಾ! ಹೊರ ಜಿಲ್ಲೆಗೆ ಹೋಗುವವರೇ ಗಮನಿಸಿ

9290

ಉತ್ತರ ಕನ್ನಡ ಜಿಲ್ಲೆಯನ್ನು ಆರೆಂಜ್ ಜೋನ್ ನಲ್ಲಿ ಗುರುತಿಸಿದ ಹಿನ್ನೆಲೆ ಯಲ್ಲಿ ಭಟ್ಕಳದಲ್ಲಿ ಯಥಾಸ್ಥಿತಿ ಮುಂದುವರಿಕೆ ಮಾಡಲಾಗುವುದು

ಜಿಲ್ಲೆಯ ಉಳಿದ ಪಟ್ಟಣಗಳಲ್ಲಿ ಬೆಳಿಗ್ಗೆ 7 ರಿಂದ 1 ಗಂಟೆಯವರೆಗೆ ಎಲ್ಲಾ ಅಂಗಡಿಗಳು ತೆರೆಯಲು ಅನುಮತಿ ನೀಡಲಾಗಿದೆ‌.ಹಳ್ಳಿ ಪ್ರದೇಶಗಳಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 7 ರವರೆಗೆ ಅಂಗಡಿ ತೆರೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.

ಇಂದು ಶಿರಸಿಯಲ್ಲಿ ಮಾತನಾಡಿದ ಅವರು ಹೇರ್ ಕಟಿಂಗ್ ಸಲೂನ್, ಬ್ಯುಟಿ ಪಾರ್ಲರ್ ಹಾಗೂ ಐಸ್ಕ್ರೀಂ ಪಾರ್ಲರ್ ಗಳು 7 ರಿಂದ 1 ರ ವರೆಗೆ ತೆರೆಯಲು ಅವಕಾಶ ಮಾಡಿಕೊಡಲಾಗಿದೆ,ಆಟೋಗಳಲ್ಲಿ ಒಬ್ಬರನ್ನ ಕೂರಿಸಿಕೊಂಡು ಹೋಗಲು ಮಾತ್ರ ಅವಕಾಶ ವಿದೆ.

ಸಾಮಾಜಿಕ ಅಂತರ ಕಾದುಕೊಳ್ಳುವುದು ಅನಿವಾರ್ಯ ,ಹೋಟೆಲ್ ಗಳಲ್ಲಿ ಪಾರ್ಸಲ್ ಗಳಿಗೆ ಮಾತ್ರ ಅವಕಾಶ,ಬಾರ್ ಗಳು 9 ಗಂಟೆಯಿಂದ 3 ಗಂಟೆಯವರೆಗೆ ತೆರೆಯಲು ಅವಕಾಶ ಮಾಡಿಕೊಡಲಾಗಿದೆ.

ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಗೆ ಬಸ್ ಗಳು ಸಂಚರಿಸುವುದಿಲ್ಲ, ಈ ಎಲ್ಲಾ ಸಡಿಲಿಕೆಗಳು ಮೇ 17 ರ ವರೆಗೆ ಅನ್ವಯವಾಗುತ್ತದೆ.

ಉಳಿದಂತೆ ಕೇಂದ್ರ ಸರ್ಕಾರದ ನಿಯಮಗಳು ಅನ್ವಯವಾಗುತ್ತವೆ,ಜನರು ದಯವಿಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಿ,ಗೋವಾದಿಂದ ರಾಜ್ಯಕ್ಕೆ ಬರೋ ಪ್ರಯಾಣಿಕರಿಗೆ ನಾಳೆ ಅವಕಾಶ ಮಾಡಿಕೊಡಲಾಗಿದೆ.

ಗೋವಾ ಗಡಿಯವರೆಗೆ ಗೋವಾದ ಬಸ್, ಅಲ್ಲಿಂದ ಜಿಲ್ಲೆಯ ಬಸ್ ಅವರನ್ನ ಕರೆತಂದು ಆರೋಗ್ಯ ತಪಾಸಣೆ ಮಾಡಲಿದೆ,ನಂತರ ರಾಜ್ಯದ ಉಳಿದ ಭಾಗಗಳಿಗೆ ಅವರನ್ನ ಕಳಿಸಲಾಗುತ್ತದೆ ಎಂದು ತಿಳಿಸಿದರು.

ಅನ್ಯ ಪ್ರದೇಶಗಳಿಗೆ ತೆರಳುವವರಿಗೆ ನೋಂದಣಿಗೆ ಸೂಚನೆ!

ಕೋವಿಡ್-19 ಲಾಕ್ ಡೌನ್ ಅವಧಿಯಲ್ಲಿ ಕಾರ್ಮಿಕರು, ಪ್ರವಾಸಿಗರು , ಯಾತ್ರಿಕರು ಮೊದಲಾದವರು ಕಾರವಾರ ತಾಲೂಕಿನಿಂದ ಜಿಲ್ಲೆಯ ಇತರ ತಾಲೂಕುಗಳಿಗೆ (ಭಟ್ಕಳ ತಾಲೂಕು ಹೊರತು ಪಡಿಸಿ ) ಅಥವಾ ಬೇರೆ ಜಿಲ್ಲೆಗೆ ತೆರಳಲು ಇಚ್ಚಿಸಿದಲ್ಲಿ ಕಾರವಾರ ತಹಶೀಲ್ದಾರ ಕಾರ್ಯಾಲಯದ ಸಹಾಯವಾಣಿ ಸಂಖ್ಯೆ 08382-226331 ಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ತಹಶೀಲ್ದಾರ ಆರ್.ವಿ.ಕಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೀಗೆ ನೊಂದಾಯಿಸಿಕೊಂಡವರು ಮೊಬೈಲ್ ಸಂಖ್ಯೆಗೆ ಪ್ರಯಾಣದ ದಿನಾಂಕವನ್ನು ನಂತರ ತಿಳಿಸಲಾಗುವುದು. ಹೊರ ರಾಜ್ಯಕ್ಕೆ ಹೋಗಲು ಇಚ್ಚಿಸುವರು ಕೆಳಗ ಕೊಟ್ಟಿರುವ ವೆಬ್ ಸೈಟ್ ನಲ್ಲಿ ನೊಂದಣಿ ಮಾಡಿಕೊಳ್ಳಬಹುದು.

https://sevasindhu.karnataka. gov.in

ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿಯಾದ ದಯಾನಂದ ಖಾರ್ಗಿ, ಮೊಬೈಲ್ ಸಂಖ್ಯೆ 9113033164 ಅಥವಾ 9481736639 ಸಂಪರ್ಕಿಸಲು ಕೋರಲಾಗಿದೆ.
Leave a Reply

Your email address will not be published. Required fields are marked *