BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾರಿ ಚಾಲಕರಿಗೂ ಹೆಲ್ಮೆಟ್ ಕಡ್ಡಾಯ: ಹೆಲ್ಮೆಟ್ ಹಾಕದ ಚಾಲಕನಿಗೆ ದಂಡ ವಿಧಿಸಿದ ಪೊಲೀಸ್!

787

ಕಾರವಾರ : ಹೆಲ್ಮೆಟ್ ಧರಿಸದ ಬೈಕ್ ಚಾಲಕರಿಗೆ ನೋಟಿಸ್ ನೀಡುವುದು ಸಾಮಾನ್ಯ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಲಾರಿ ಚಾಲಕರೂ ಕಡ್ಡಾಯವಾಗಿ ಹೆಲ್ಮೆಟ್ ಹಾಕಲೇ ಬೇಕು . ಹೌದು ಇಲ್ಲದಿದ್ರೆ ಲಾರಿ ಚಾಲಕರಿಗೂ ದಂಡ ವಿಧಿಸುತ್ತಾರೆ ಪೊಲೀಸರು.

ಅರೇ ಬೈಕ್ ಚಾಲನೆ ಮಾಡುವಾಗ ಮಾತ್ರ ಹೆಲ್ಮೆಟ್ ಹಾಕದಿದ್ರೆ ದಂಡ ವಿಧಿಸುವ ಪೊಲೀಸರು ಲಾರಿ ಚಾಲನೆ ಮಾಡುವ ಚಾಲಕರೂ ಹೆಲ್ಮೆಟ್ ಹಾಕದಿದ್ರೆ ದಂಡ ವಿಧಿಸುತ್ತಾರೆ.

ಹೌದು ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ಪೊಲೀಸರು ಹೆಲ್ಮೆಟ್ ಧರಿಸಿಲ್ಲ ಎಂದು ಲಾರಿ ಚಾಲಕರೊಬ್ಬರಿಗೆ ದಂಡ ವಿಧಿಸಿದ್ದಾರೆ.

ದಂಡ ವಿಧಿಸಿರುವುದು

ದಾಂಡೇಲಿಯಲ್ಲಿ 409 ವಾಹನವನ್ನು ಹೆಲ್ಮೆಟ್ ಇಲ್ಲದೇ ಓಡಿಸಿದ್ದಕ್ಕಾಗಿ ಚಾಲಕ ನಝೀರ್ ಅಹ್ಮದ್ ಅಲ್ಲಾಬಕ್ಷ ಶೇಖ್ ಎಂಬುವವರ ಮನೆಗೆ ದಾಂಡೇಲಿ ಗ್ರಾಮೀಣ ಪೊಲೀಸರು ನೊಟೀಸ್ ಕಳುಹಿಸಿದ್ದಾರೆ.

ಅದರಲ್ಲಿ ವಾಹನದ ಸಂಖ್ಯೆ ನಮೂದಿಸಿದ್ದು ಲಾರಿ ಎಂದು ಬರೆಯಲಾಗಿದೆ. ಲಾರಿ ಓಡಿಸುವಾಗ ಹೆಲ್ಮೆಟ್ ಇಲ್ಲದೇ ಸರಕಾರದ ನಿಯಮ ಉಲ್ಲಂಘನೆಗಾಗಿ 5೦೦ ದಂಡ ವಿಧಿಸಲಾಗಿದೆ ಎಂದು ತಿಳಿಸಿ ದಾಂಡೇಲಿ ಗ್ರಾಮಿಣ ಠಾಣೆಯ ಉಪನಿರೀಕ್ಷಕರು ಸಹಿ ಮಾಡಿದ ನೋಟೀಸ್ ಕಳುಹಿಸಲಾಗಿದೆ.

ಚಾಲಕ ಹೇಳೋದು ಏನು?


ಚಾಲಕ ನಝೀರ್ ಅಹ್ಮದ್ ದಾಂಡೇಲಿಯಲ್ಲಿ 409 ಲಗೇಜ್ ವಾಹನ ವನ್ನು ಚಲಾಯಿಸುತಿದ್ದು ದಾಂಡೇಲಿ, ಹುಬ್ಬಳ್ಳಿ ಗೆ ವಸ್ತುಗಳನ್ನು ಕೊಂಡೊಯ್ಯುವ ಕೆಲಸ ಮಾಡುತ್ತಾರೆ.

ಹುಬ್ಬಳ್ಳಿ ಯಿಂದ ದಾಂಡೇಲಿ ಗೆ ಬರುವಾಗ ಇವರ ವಾಹನವನ್ನು ತಡೆದು ತಪಾಸಣೆ ಮಾಡಲಾಗಿದೆ. ನಂತರ ಅವರನ್ನು ಬಿಟ್ಟು ಕಳುಹಿಸಲಾಗಿದ್ದು ಕೊನೆಗೆ ನೋಡಿದರೇ 409 ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸದೇ ಚಾಲನೆ ಮಾಡಿದ್ದಕ್ಕೆ ದಂಡ ವಿಧಿಸಿ ಮನೆಗೆ ನೋಟೀಸ್ ಕಳುಹಿಸಿದ್ದಾರೆ.
ಈ ಬಗ್ಗೆ ಪತ್ರಿಕೆ ಚಾಲಕನನ್ನು ವಿಚಾರಿಸಿದಾಗ ದಂಡ ವಿಧಿಸಿದ್ದಾರೆ, ಈಗ ಏನು ಮಾಡುವುದು ಸರ್ ,ದಂಡ ಕಟ್ಟ ಬೇಕು ಅಲ್ಲವೇ ಎಂದು ಮುಗ್ಧತೆಯಿಂದ ಕೇಳುತ್ತಾರೆ‌ ,ಸದ್ಯ ಹುಬ್ಬಳ್ಳಿ ಯಲ್ಲಿ ಕೆಲಸದ ನಿಮಿತ್ತ ತಮ್ಮ ವಾಹನ ಸಮೇತ ಹೋಗಿರುವ ಅವರಿಗೆ ತಾವು ಮಾಡದ ತಪ್ಪಿಗೆ ದಂಡ ಕಟ್ಟುವ ಕರ್ಮ ಎದುರಾಗಿದೆ.
ಇನ್ನು ಈ ವಿಷಯ ಎಲ್ಲೆಡೆ ಚರ್ಚೆ ಆಗುತಿದ್ದಂತೆ
ದಾಂಡೇಲಿ ಪೊಲೀಸರು ಇವರಿಗೆ ಕರೆ ಮಾಡಿ ಕೈ ತಪ್ಪಿನಿಂದ ಆಗಿದ್ದು ಎಂದು ಸಮಜಾಯಿಸಿ ನೀಡಿದ್ದಾರೆ.

ಆದರೇ ಈಗಾಗಲೇ ನೋಟೀಸ್ ನೀಡಿದ್ದರಿಂದ ಇವರು ಮಾಡಿದ ಎಡವಟ್ಟು ತನಕ್ಕೆ ಕೋರ್ಟ್ ನಲ್ಲಿ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸುವ ಕುರಿತು ಚಾಲಕ ಚಿಂತನೆ ನಡೆಸಿದ್ದಾರೆ.




Leave a Reply

Your email address will not be published. Required fields are marked *