ಕಾರವಾರ : ಮಹಾರಾಷ್ಟ್ರದಿಂದ ಕಾರವಾರಕ್ಕೆ ಬಂದಿದ್ದ ಮಾಜಾಳಿ ಮೂಲದ ಮತ್ತೋರ್ವನಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.
ಮಹಾರಾಷ್ಟ್ರದಿಂದ ಗೋವಾಕ್ಕೆ ಬೋಟ್ ನಲ್ಲಿ ತನ್ನ ಸ್ನೇಹಿತನೋರ್ವನ ಜೊತೆ ಬಂದಿದ್ದ 37 ವರ್ಷದ ಸೋಂಕಿತ ವ್ಯಕ್ತಿ, ಗೋವಾದಿಂದ ಹನ್ನೆರಡು ಜನರ ಜೊತೆ ನಡೆದುಕೊಂಡು ಕಾರವಾರದ ಮಾಜಾಳಿ ಗಡಿಗೆ ಮೇ 14ನೇ ತಾರೀಕು ಬಂದಿದ್ದ.
ಮಹರಾಷ್ಟ್ರ ದಿಂದ ಬಂದರೂ ಗೋವಾದಿಂದ ಬಂದಿರುವುದಾಗಿ ಅಧಿಕಾರಿಗಳಿಗೆ ಸುಳ್ಳು ಹೇಳಿ ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದ.

ಆದರೇ ಸ್ಥಳೀಯರು ಈತನು ಮಹರಾಷ್ಟ್ರದಿಂದ ಬಂದಿರುವ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಸತ್ಯ ಬಾಯಿ ಬಿಟ್ಟಿದ್ದ.
ನಂತರ ಈತನನ್ನು ಕಾರವಾರದ ಸರ್ಕಾರಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದು ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದು ಇಂದು ದೃಡಪಟ್ಟಿದೆ.ಈತನ ಜೊತೆ ಮಹಾರಾಷ್ಟ್ರದಿಂದ ಬಂದಿದ್ದ ಮತ್ತೋರ್ವ ಸ್ನೇಹಿತ ಹಾಗೂ ಗೋವಾದಿಂದ ಜೊತೆಯಲ್ಲಿ ನಡೆದುಕೊಂಡು ಬಂದವರ ಗಂಟಲು ದ್ರವವನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ.
ಈಗಾಗಲೇ ಸೋಂಕಿತನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದ್ದು ಈತನ ಟ್ರಾವೆಲ್ ಹಿಸ್ಟರಿ ಕಲೆಹಾಕಲಾಗುತ್ತಿದೆ.