BREAKING NEWS
Search

ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ಜೊತೆಗೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಸಾಧ್ಯತೆ ಇದೆ. ಕಾದು ನೋಡಿ-ಸಚಿವ ಈಶ್ವರಪ್ಪ

765

ಕಾರವಾರ :- ಅಮೀತ್ ಶಾ ರಾಜ್ಯಕ್ಕೆ ಬರಬೇಕಿದ್ದರೆ ರಾಷ್ಟ್ರದ್ರೋಹಿ ಗಳ ವಿರುದ್ಧ ಬಾಂಬ್ ತೆಗೆದುಕೊಂಡೆ ಬಂದಿದ್ದಾರೆ.ಅಮೀತ್ ಶಾ ರಾಜ್ಯ ಪ್ರವಾಸದ ಬಳಿಕ ಸಚಿವ ಸಂಪುಟದಲ್ಲಿ ಬದಲಾವಣೆ ಜೊತೆಗೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಸಾಧ್ಯತೆ ಇದೆ. ಕಾದು ನೋಡಿ ಎಂದು ಸಚಿವ ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ‌. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬಳಲೆ ಗ್ರಾಮದ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಹುಲ್ ಗಾಂಧಿ ಉತ್ತರ ಪ್ರದೇಶದಲ್ಲಿ ಕಾಲಿಟ್ಟ ಕಡೆ ಕಾಂಗ್ರೇಸ್ ಸರ್ವ ನಾಶ ವಾಗಿದೆ. ರಾಹುಲ್ ಗಾಂಧಿ ರಾಜ್ಯಕ್ಕೆ ಬಂದ್ರು ಅದೇ ಗತಿ.ಅವರು ಮುಂದೆ ರಾಜ್ಯ ಪ್ರವಾಸ ಬರ್ತಾರೆ ಎಂದಾದರೇ ರಾಹುಲ್ ಗಾಂಧಿ ಹೋಗಿ ಬರುವ ಖರ್ಚು ತಾನುವಹಿಸಿಕೊಳ್ಳುತ್ತೆನೆ ಎಂದು ಸಚಿವರು ಹೇಳಿದರು.ಇನ್ನು ಮಸೀದಿಗಳಲ್ಲಿ ಧ್ವನಿವರ್ಧಕ ಬ್ಯಾನ್ ಮಾಡುವಂತೆ ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ
ಹೇಳಿಕೆ ವಿಚಾರ ವಾಗಿ ಪ್ರತಿಕ್ರಿಯಿಸಿದ ಅವರು ಮುಸ್ಲಿಂ‌ ಸಮಾಜವನ್ನು ಒಪ್ಪಿಸಿ ಮಾಡಬೇಕಿದೆ.
ಓದುವಂತಹ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗ್ತಿದೆ ಅನ್ನೋ ವಿಷಯ ಬಹಳ ಹಿಂದಿನಿಂದಲೂ ಕೇಳಿ ಬರ್ತಿದೆ.ಮುಂಚೆಯಿಂದಲೂ ಬಂದಂತಹ‌ ಪದ್ಧತಿಯ ಮೂಲಕ ದೇವರ ಪ್ರಾರ್ಥನೆ ಮಾಡ್ತೇವೆ ಅಂತಾರೆ.ಆದರೆ, ಇದರಿಂದ ಅವರ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ.ಅವರು ಮಸೀದಿಗಳಲ್ಲಿ ಜೋರಾಗಿ ಕೂಗ್ತಾರೆ, ಅದಕ್ಕೆ ಹನುಮಾನ್ ಚಾಲೀಸ ಮೈಕಿನಲ್ಲಿ ಹಾಕಬೇಕು ಅಂತಾ ನಾವು ಸ್ಪರ್ಧೆ ಮಾಡಬಾರದು.ಮಸೀದಿಯಲ್ಲಿ ಕೂಗುವುದರಿಂದ ವಿದ್ಯಾರ್ಥಿಗಳಿಗೆ, ವೃದ್ಧರಿಗೆ ತೊಂದರೆಯಾಗ್ತದೆ ಅನ್ನೋದು ಬಹಳ ವರ್ಷಗಳಿಂದ ಕೇಳ್ತಿದ್ದೇವೆ.
ಮಸೀದಿ, ದೇವಸ್ಥಾನ, ಚರ್ಚ್‌ಗಳಲ್ಲಿ ಜೋರಾಗಿ ಮೈಕ್ ಹಾಕಲಾರಂಭಿಸಿದ್ರೆ ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತೆ.ಈ ಕಾರಣದಿಂದ ಮುಸ್ಲಿ ಸಮುದಾಯದ ಮುಖಂಡರೇ ಈ ಬಗ್ಗೆ ಚಿಂತನೆ ಮಾಡಿ ನಿರ್ಧರಿಸಬೇಕು.ದೇವಸ್ಥಾನ, ಚರ್ಚ್‌ಗಳಲ್ಲಿರೋ ಹಾಗೆ ಇತರರಿಗೆ ತೊಂದರೆಯಾಗದಂತೆ ದ್ವನಿವರ್ಧಕ ಮಸೀದಿಯೊಳಗೆ ಮಾತ್ರ ಕೇಳುವಂತೆ ಮಾಡಿದ್ರೆ ಸೂಕ್ತ ಎಂದರು.

ಯಾರಿಗೆ ಹೇಗೆ ಬೇಕೋ ಹಾಗೆ ಮಾಂಸ ತಿನ್ನಲಿ!

ಹಲಾಲ್ ಮುಸಲ್ಮಾನರ ಪದ್ಧತಿ, ಜಟ್ಕಾ ಹಿಂದೂಗಳ ಪದ್ಧತಿ. ಯಾರ್ಯಾರಿಗೆ ಹೇಗೇಗೋ ಬೇಕು ಆ ರೀತಿಯಲ್ಲಿ ಮಾಂಸ ತಿನ್ನಲಿ.ಇದರಲ್ಲಿ ಸಂಘರ್ಷ ಮಾಡಬೇಕೆಂದೇನಿಲ್ಲ.ಜಟ್ಕಾ ಹಾಗೂ ಹಲಾಲ್ ಮುಖಾಂತರವೇ ತಿನ್ನಬೇಕೆಂದು ಹೇಳಿದ್ರೆ ಅದು ತಪ್ಪು.ಇದೆಲ್ಲಾ ನಮ್ಮ ವಯಕ್ತಿಯ ವಿಚಾರ
ಹಲಾಲ್ ಮುಖಾಂತರ ತಿಂದ್ರೂ ಖರ್ಚಾಗುತ್ತೆ, ಜಟ್ಕಾ ಮುಖಾಂತರ ತಿಂದ್ರೂ ಖರ್ಚಾಗುತ್ತೆ.ಹಲಾಲ್, ಜಟ್ಕಾ ವಿಚಾರದಲ್ಲಿ ವ್ಯಾಪಾರದಲ್ಲಿ ಬದಲಾವಣೆ ಆಗಬಹುದುಆದ್ರೆ, ಕುರಿಗಾಹಿಗಳಿಗೆ ಇದರಿಂದ ಯಾವುದೇ ತೊಂದರೆಯಾಗಲ್ಲ ಎಂದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!