BREAKING NEWS
Search

ಮುಂಡಗೋಡು-ಯಡಿಯೂರಪ್ಪನವರೇ ನಿಮ್ಮ ಮನೆಯ ಒಳಗೇ ಇದ್ದಾರೆ ಕಳ್ಳರು ಎಂದ್ರು ಸಿದ್ದರಾಮಯ್ಯ!

61

ಕಾರವಾರ/ಮುಂಡಗೋಡು :- ಯಡಿಯೂರಪ್ಪ ನಿಮ್ಮ ಮನೆಯ ಒಳಗೇ ಇದ್ದಾರೆ ಕಳ್ಳರು

ಹುಷಾರಾಗಿರಿ,ನಮ್ಮನ್ಯಾಗೆ ದೂಷಿಸ್ತೀರ ನಿಮ್ಮ ಮನೆಯ ಒಳಗೇ ಇದ್ದಾರೆ ಕಳ್ಳರು.
ಕಾರ್ಯ ಕಾರಿಣಿ ಸಭೆಯಲ್ಲಿ ಯಡಿಯೂರಪ್ಪ ವೀಡಿಯೋ ಮಾಡಿದವರು ಸವದಿ ಅಥವಾ ನಳೀನ್ ಕುಮಾರ್ ಕಟೀಲ್ ಅವರೇ ಮಾಧ್ಯಮಗಳಿಗೆ ವೀಡಿಯೋ ಕೊಟ್ಟಿರಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಇಂದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದ ಕಾರ್ಯಕರ್ತರ ಸಮಾವೇಶ ಹಾಗೂ ಆಂದೋಲನ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಗೆ ಸತ್ಯ ಹೇಳಿ ಗೊತ್ತಿಲ್ಲ, ಸುಳ್ಳೇ ಮನೆದೇವರು ,
ಈಗ ಎಲ್ಲರೂ ನಮ್ಮ ಮೇಲೆ ಬಿದ್ದಿದ್ದಾರೆ.

ಅನರ್ಹ ರನ್ನು ಮುಂಬೈ ನಲ್ಲಿ ಇಟ್ಟುಕೊಂಡಿದ್ದು ಅಮಿತ್ ಶಾ ಎಂದು ಯಡಿಯೂರಪ್ಪ ಹೇಳಿದ್ದಕ್ಕೆ
ಅಮಿತ್ವಶಾ ತಮ್ಮ ಹೆಸರನ್ನು ಹೇಳಿದ್ದಕ್ಕೆ ಈಗ ಗುದ್ದುತ್ತಿದ್ದಾರೆ,ಶೋಭಾ ಕರಂದ್ಲಾಜೆ ಡರ್ಟಿ ಪಾಲಿಟಿಕ್ಸ್ ಎಂದು ನನ್ನ ಬಗ್ಗೆ ಹೇಳುತ್ತಾರೆ,ಆ ಯಮ್ಮ ಯಡಿಯೂರಪ್ಪ ನವರಿಗಾಗಿ ಹೇಳಲೇ ಬೇಕು ಎಂದು ಟಾಂಗ್ ನೀಡಿದ್ರು .
ಇನ್ನು ಶಿವರಾಮ್ ಹೆಬ್ಬಾರ್ ತಮ್ಮನ್ನು ತಾವೇ ಮಾರಾಟ ಮಾಡಿಕೊಂಡಿದ್ದಾರೆ.ಪಕ್ಷಕ್ಕೆ ದ್ರೋಹ ಮಾಡಿ ಭಾರತೀಯ ಜನತಾ ಪಕ್ಷದ ಕದ ತಟ್ಟುತಿದ್ದಾರೆ ಅವರಿಗೆ ಪಾಠ ಕಲಿಸಬೇಕಿದೆ.ಶಿವರಾಮ್ ಹೆಬ್ಬಾರ್ ಎಷ್ಟೇ ನಾಟಕವಾಡಲಿ ಬಿಜೆಪಿ ಪಕ್ಷದ ಅಭ್ಯಾರ್ಥಿ ಆಗೇ ಆಗುತ್ತಾರೆ.ಆದ್ರೆ ಯಡಿಯೂರಪ್ಪ ಮಾತ್ರ ನಮಗೆ ಅವರಿಗೆ ಸಂಬಂಧ ವಿಲ್ಲ ಎಂತಾರೆ,ಬಿಜೆಪಿ ಗೆ ಸತ್ಯ ಹೇಳಿ ಗೊತ್ತಿಲ್ಲ, ಸುಳ್ಳೇ ಮನೆದೇವರು ಎಂದು ಗುಡುಗಿದ್ರು.

ವಸತಿ ಸಚಿವ ವಿ.ಸೋಮಣ್ಣ ಅವರು ತಮ್ಮ ಅಕ್ರಮಗಳ ಬಗ್ಗೆ ನೋಡಿಕೊಳ್ಳಲಿ. ನಮ್ಮ ಕಾಲದಲ್ಲಿ ಯಾವುದೇ ಅಕ್ರಮ ಗಳು ನಡೆದಿಲ್ಲ. ಸೋಮಣ್ಣ ಯಡಿಯೂರಪ್ಪನರವನ್ನು ಖುಷಿ ಪಡಿಸಲು ಏನೆನೋ ಹೇಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಜಿಲ್ಲೆಯ ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ನಡೆದ ಅಕ್ರಮ ಗಳ ತನಿಖೆ ಮಾಡುತ್ತೇನೆ ಎಂದಿದ್ದಾರೆ. ಆದರೆ ನಾನು ವಸತಿ ಸಚಿವ ಆಗಿರಲಿಲ್ಲ. ವಸತಿ ಸಚಿವ ಅಂದೂ ಸಹ ಸೋಮಣ್ಣ ಇದ್ದರು. ಈಗಲೂ ಅವರೇ ಇದ್ದಾರೆ. ಹೈಕಮಾಂಡ್ ಖುಷಿ ಪಡಿಸಲು ಅವರು ಈ ರೀತಿ ಮಾತನಾಡಿದ್ದಾರೆ ಎಂದರು.

ಸುಳ್ಳು ಹುಟ್ಟಿರುವುದು ಬಿಜೆಪಿಯಿಂದ. ಸುಳ್ಳು ಅಂದರೆ ಬಿಜೆಪಿ. ಶೋಭಾ ಕರಂದ್ಲಾಜೆ ಅವರು ಸುಳ್ಳು ಹೇಳುವುದು ಎಂದು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು. ಆಡಿಯೋ ಪ್ರಕರಣದ ಕುರಿತು ಸುಪ್ರೀಂ ಕೋರ್ಟಿಗೆ ತಿಳಿಸಿದ್ದೇವೆ. ಅನರ್ಹ ಶಾಸಕರ ಕುರಿತು ವಾದ ವಿವಾದಿಗಳು ನಡೆದಿವೆ. ನ್ಯಾಯಾಲಯದ ತೀರ್ಪು ಏನು ಬರುತ್ತದೆ ಎಂದು ಕಾದುನೋಡೋಣ ಎಂದರು.

ನಿಯತ್ತು ಇಲ್ಲದವರ ಪಕ್ಷವನ್ನು ತೊರೆಯುತ್ತಾರೆ. ಪಕ್ಷದ ಸಿದ್ಧಾಂತ ಇಲ್ಲದವರು ಬಿಡುತ್ತಾರೆ. ಮಾಜಿ ಸಚಿವ ವಿಜಯ್ ಶಂಕರ್ ಅವರೇ ಕಾಂಗ್ರೆಸ್ ಗೆ ಬಂದರು. ಈಗ ಅವರೇ ತೊರೆದು ಹೋಗುತ್ತಿದ್ದಾರೆ. ಅವರ ಹಿಂದೆ ಹೋಗುವವರು ಯಾರೂ ಇಲ್ಲ ಎಂದರು.

ಅನರ್ಹ ಶಾಸಕ ರನ್ನು ಜನರು ಸೋಲಿಸಬೇಕು. ಜನಕ್ಕೆ ದ್ರೋಹ ಮಾಡಿವರನ್ನು ಸೋಲಿಸಬೇಕು ಎಂದು ಅನರ್ಹ ಶಾಸಕರ ಕುರಿತು ಪ್ರತಿಕ್ರಿಯಿಸಿದರು.
Leave a Reply

Your email address will not be published. Required fields are marked *